ಉಡುಪಿ : ಶೀರೂರು ಪರ್ಯಾಯದ ಪೂರ್ವಭಾವಿಯಾಗಿ ಸಮಾಲೋಚನಾ ಸಭೆ

ಉಡುಪಿಯ ಶೀರೂರು ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಯಶ್ ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು ಶ್ರೀ ಶ್ರೀ ವೇದವರ್ಧನ ತೀರ್ಥರು ಕೇವಲ ಅಷ್ಟಮಠಕ್ಕೆ ಸೀಮಿತವಾಗದೆ ದೇಶದೆಲ್ಲೆಡೆ ಖ್ಯಾತಿ ಗಳಿಸಿ ದೇಶಕ್ಕೆ ಮಾರ್ಗದರ್ಶನ ನೀಡುವ ಯತಿಗಳಾಗಬೇಕೆಂಬ ಸಂಕಲ್ಪ ನಮ್ಮದು. ಮುಂದಿನ ದಿನಗಳಲ್ಲಿ ಹಿಂದೂ ಸಮಾಜ ಅವರ ಮಾರ್ಗದರ್ಶನದಲ್ಲಿ ಮುಂದುವರಿಯಬೇಕು , ಶೀರೂರು ಪರ್ಯಾಯ ನಮ್ಮೆಲ್ಲರನ್ನೂ ಒಗ್ಗೂಡಿಸುವ ಪರ್ಯಾಯ ಎಂದರು. ಮಠದ ದಿವಾನರಾದ ಡಾ. ಉದಯ ಸರಳತ್ತಾಯ ಮಾತನಾಡಿ ಕೃಷ್ಣ ಭಕ್ತರನ್ನು […]

ಡಿ. 13ರಂದು ವಿಶ್ವ ಶಾಂತಿ ಸಮಾವೇಶ- ಪರ್ಯಾಯ ಪುತ್ತಿಗೆ ಶ್ರೀ

ಉಡುಪಿ: ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣ ಮಠ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಗೀತೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ಇದೇ ಡಿ.7ರಂದು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ. ಗೀತಾ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ವಿಶ್ವಗೀತಾ ಪರ್ಯಾಯ ಮಹೋತ್ಸವದ ಅಂಗವಾಗಿ ಡಿ. 13ರಂದು ರಾಜಾಂಗಣದಲ್ಲಿ ವಿಶ್ವಶಾಂತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ […]

MSDCಯ ಈ ಹೇರ್ ಸ್ಟೈಲಿಂಗ್ ಕಾರ್ಯಗಾರದಲ್ಲಿ ಕಲೀರಿ ಅದ್ಬುತ ಶೈಲಿಯ ಕೇಶವಿನ್ಯಾಸ: ಆಸಕ್ತರು ಮಿಸ್ ಮಾಡದಿರಿ!

ಮಣಿಪಾಲ: ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (TMA Pai Foundation‌ನ ಘಟಕ) MSDCಯಲ್ಲಿ ನಿಮಗಾಗಿ ಆಯೋಜನೆಗೊಂಡಿದೆ ಹೇರ್ ಸ್ಟೈಲಿಂಗ್ ಕಾರ್ಯಾಗಾರ .ನಿಮ್ಮ ಕೈಯಿಂದಲೇ ಸಲೂನ್ ಮಟ್ಟದ ಸ್ಟೈಲ್ಸ್ ಸೃಷ್ಟಿಸಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ ಈ ಕಾರ್ಯಾಗಾರ. ಡಿಸೆಂಬರ್ 9 ರಂದು ಮಧ್ಯಾಹ್ನ 2:00 ರಿಂದ ಸಂಜೆ 5:00 ರ ತನಕ ಈ ಕಾರ್ಯಾಗಾರ ನಡೆಯಲಿದೆ.ಕೂದಲು ಸ್ಟ್ರೈಟನಿಂಗ್ (ಐರನಿಂಗ್), ಕೂದಲು ಕರ್ಬಣೆ (ಕರ್ಳಿಂಗ್), ಹ್ಯಾಂಡ್ಸ್-ಆನ್ practically ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ. ಕಾರ್ಯಗಾರದ ಶುಲ್ಕ ರೂ 1999/- ಮಾತ್ರ.ಭಾಗವಹಿಸಿದವರಿಗೆ ಸಂಸ್ಥೆಯ […]

ಬಾಕ್ಸ್ ಆಫೀಸ್ ನಲ್ಲಿ ‘ಧುರಂದರ್’ ಅಬ್ಬರ; ಮೊದಲ ದಿನ ಕಲೆಕ್ಷನ್ ಎಷ್ಟು?

ಬಿಡುಗಡೆಯಿಗೂ ಮುನ್ನವೇ ಹಲವು ನೆಗೆಟಿವ್ ಚರ್ಚೆಗಳು ಮತ್ತು ಫ್ಲಾಪ್ ಭವಿಷ್ಯವಾಣಿಗಳ ನಡುವೆ ತೆರೆಗೆ ಬಂದ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಮೊದಲ ದಿನವೇ ಅಚ್ಚರಿ ಮೂಡಿಸಿದೆ. ಭಾರೀ ಬಜೆಟ್, ವಿವಾದಾತ್ಮಕ ವಿಷಯ ಮತ್ತು ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಶಕ್ತಿಯುತ ಆರಂಭ ಮಾಡಿದೆ. ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರ ಮೊದಲ ದಿನ 18 ಕೋಟಿ ರೂ. ಗಳಿಸಬಹುದು ಎಂಬ ಅಂದಾಜು ಕೇಳಿಬಂದಿತ್ತು. ಆದರೆ, ಎಲ್ಲ ಲೆಕ್ಕಾಚಾರಗಳನ್ನು […]

ಉಡುಪಿ: ಹೆನಿಟಾ ಜೋಸ್ನಾ ಮಿನೇಜಸ್‌ಗೆ ಪಿಎಚ್‌ಡಿ ಪದವಿ

ಉಡುಪಿ: ಹೃದಯ ರಕ್ತನಾಳದ ಕಾಯಿಲೆ ಇರುವ ಮಹಿಳೆಯರಿಗೆ ತಂತ್ರಜ್ಞಾನ-ಆಧಾರಿತ ಸಮಗ್ರ ಹೃದಯ ಪುನರ್ವಸತಿ ಚಿಕಿತ್ಸೆಯ ಕುರಿತು ಪೂರ್ಣಾವಧಿ ಸಂಶೋಧನಾ ವಿದ್ಯಾರ್ಥಿನಿಯಾಗಿ ಸಂಶೋಧನಾ ಅಧ್ಯಯನ ನಡೆಸಿ ಮಂಡಿಸಿರುವ ಮಹಾಪ್ರಬಂಧಕ್ಕೆ, ಕಾಪು ತಾಲೂಕು, ಬೆಳ್ಳೆ ಗ್ರಾಮದ, ಪಾಂಬೂರಿನ ಹೆನಿಟಾ ಜೋಸ್ನಾ ಮಿನೇಜಸ್ ಅವರಿಗೆ ಮಣಿಪಾಲದ ಮಾಹೆ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಲಭಿಸಿದೆ. ಮಣಿಪಾಲ ನರ್ಸಿಂಗ್ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ನರ್ಸಿಂಗ್ ನ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥೆ ಡಾ.ಸೋನಿಯಾ ಆರ್.ಬಿ. ಡಿಸೋಜ ಹಾಗೂ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಹೃದ್ರೋಗ ವಿಭಾಗದ […]