ಕಾಂತಾರ ಚಿತ್ರದ ಬಗ್ಗೆ ಕೆರಳಿಸುವ ಹೇಳಿಕೆ ನೀಡಿದ ನಟ ರಣವೀರ್ ವಿರುದ್ಧ ಹೆಚ್ಚಾದ ಕನ್ನಡಿಗರ ಆಕ್ರೋಶ!

ಮುಂಬೈ: ಬಾಲಿವುಡ್ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋ ಆಗಿ ಒಳ್ಳೆಯ ಹೆಸರು ಗಳಿಸಿರುವ ನಟ ರಣವೀರ್ ಸಿಂಗ್ ( Ranveer Singh ) ಬಗ್ಗೆ ಎಲ್ಲರಿಗೂ ತಿಳಿದಿದೆ. ಸದಾ ಎನರ್ಜಿಟಿಕ್ ಆಗಿರುವ ರಣವೀರ್, ಯಾವುದೇ ವೇದಿಕೆಗೆ ಹೋದರೆ ತಮ್ಮ ಮಾತುಗಳ ಮೂಲಕವೇ ಮೋಡಿ ಮಾಡುತ್ತಾರೆ. ತಮಗನಿಸಿದ್ದನ್ನು ಯಾವುದೇ ಹಿಂಜರಿಕೆ ಇಲ್ಲದೇ ಮುಕ್ತವಾಗಿ ಹೇಳುತ್ತಾರೆ. ಆದರೆ, ಇತ್ತೀಚೆಗೆ ರಣವೀರ್ ಆಡಿದ ಮಾತೊಂದು ಭಾರಿ ವಿವಾದ ಸೃಷ್ಟಿಸಿದೆ. ಅದರಲ್ಲೂ ವಿಶೇಷವಾಗಿ ಕನ್ನಡ ಸಿನಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಕೂಡಲೇ ಕ್ಷಮೆಯಾಚಿಸಬೇಕೆಂಬ ಒತ್ತಾಯ […]
ಛತ್ತೀಸ್ ಗಢ: ಸೈನಿಕರ ಹತ್ಯೆಗೆ ಕಾರಣರಾಗಿದ್ದ 37 ನಕ್ಸಲರು ಶರಣು!

ಛತ್ತೀಸ್ ಗಢ: ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ 12 ಮಹಿಳಾ ನಕ್ಸಲರು ಸೇರಿದಂತೆ 37 ಅಪಾಯಕಾರಿ ನಕ್ಸಲರು ಶರಣಾಗಿದ್ದಾರೆ. ಒಟ್ಟು 65 ಲಕ್ಷ ಬಹುಮಾನ ಹೊಂದಿದ್ದ 27 ನಕ್ಸಲರು ಇವರಲ್ಲಿ ಸೇರಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಅವರು ದಾಂತೇವಾಡದಲ್ಲಿರುವ ಡಿಆರ್‌ಜಿ ಕಚೇರಿಯಲ್ಲಿ ಶರಣಾಗಿದ್ದಾರೆ. ಈ ದೊಡ್ಡ ಶರಣಾಗತಿ ಡಿಆರ್‌ಜಿ, ಬಸ್ತಾರ್ ಫೈಟರ್ಸ್, ವಿಶೇಷ ಗುಪ್ತಚರ ಶಾಖೆ, 111ನೇ-230ನೇ ಸಿಆರ್‌ಪಿಎಫ್ ಬೆಟಾಲಿಯನ್‌ಗಳು ಮತ್ತು ಆರ್‌ಎಫ್‌ಟಿ ಜಗದಲ್‌ಪುರದ ಜಂಟಿ ಕಾರ್ಯತಂತ್ರದ ಪರಿಣಾಮವಾಗಿದೆ. ತಿಂಗಳುಗಳ ಕಣ್ಗಾವಲು, ನೆಲದ ಗುಪ್ತಚರ ಮತ್ತು ನಿರಂತರ […]
ಕುಂದಾಪುರ ವಲಯ ಮಟ್ಟದ ಹಿಂದಿ ಭಾಷಣ ಸ್ಪರ್ಧೆ: ಮದರ್ ತೆರೇಸಾ ಕಾಲೇಜಿನ ವಿದ್ಯಾರ್ಥಿನಿ ಶ್ರೀನಿಧಿ ಡಿ ಶೆಟ್ಟಿಗೆ ದ್ವಿತೀಯ ಸ್ಥಾನ

ಕುಂದಾಪುರ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ, ಸುಜ್ಞಾನ ಪಿಯು ಕಾಲೇಜು ಹಾಗೂ ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಶಾಲೆ ಯಡಾಡಿ- ಮತ್ಯಾಡಿ ಇವರ ಸಹಭಾಗಿತ್ವದಲ್ಲಿ ಆಯೋಜಿಸಲಾದ ಕುಂದಾಪುರ ವಲಯ ಮಟ್ಟದ ಹೈಸ್ಕೂಲ್ ವಿಭಾಗದ ಹಿಂದಿ ಭಾಷಣ ಸ್ಪರ್ಧೆಯಲ್ಲಿ ಮದರ್ ತೆರೇಸಾ ಪದವಿ ಪೂರ್ವ ಕಾಲೇಜು ಶಂಕರನಾರಾಯಣ ಇಲ್ಲಿನ ದ್ವಿತೀಯ ಪಿಯುಸಿ ವಿಭಾಗದ ವಿದ್ಯಾರ್ಥಿನಿ ಶ್ರೀನಿಧಿ ಶೆಟ್ಟಿ ಇವರಿಗೆ ದ್ವಿತೀಯ ಸ್ಥಾನ ಲಭಿಸಿದೆ. ಸಾಧಕ ವಿದ್ಯಾರ್ಥಿನಿಗೆ ಶಾಲಾ ಆಡಳಿತ ಮಂಡಳಿ, ಪದವಿ ಪೂರ್ವ ಕಾಲೇಜಿನ […]
ಉಡುಪಿ: ಯುವತಿ ಮೇಲೆ ಅತ್ಯಾಚಾರ, ಕೊಲೆ ಯತ್ನ; ಹಿಂದೂ ಕಾರ್ಯಕರ್ತ ಪ್ರದೀಪ್ ಪೂಜಾರಿ ಬಂಧನ.

ಉಡುಪಿ: ಯುವತಿಯನ್ನು ನಿರ್ಜನ ಪ್ರದೇಶದಲ್ಲಿ ಅಡ್ಡಗಟ್ಟಿ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತನೋರ್ವನನ್ನು ಉಡುಪಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಪೆರ್ಡೂರು ಹಿಂದು ಜಾಗರಣಾ ವೇದಿಕೆಯ ನಾಯರ್‌ಕೋಡು ಘಟಕದ ಪ್ರದೀಪ್ ಪೂಜಾರಿ(26). ಪ್ರದೀಪ್ ಪೂಜಾರಿ ಯುವತಿಯೊಬ್ಬಳನ್ನು ಮದುವೆಯಾಗುವಂತೆ ನಿರಂತರ ಕಿರುಕುಳ ನೀಡುತ್ತಿದ್ದು, ಆಕೆ ಆತನೊಂದಿಗೆ ಮದುವೆಗೆ ನಿರಾಕರಿಸಿದ್ದಳು. ಈ ಬಗ್ಗೆ ಆಕೆ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಆತನನ್ನು ಪೊಲೀಸರು ಬಂಧಿಸಿದ್ದು, ಬಳಿಕ ಆತ ಜಾಮೀನಿನ ಮೇಲೆ […]