ತಮಿಳುನಾಡು ಬಸ್ ದುರಂತ: ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ ಮೋದಿ

ನವದೆಹಲಿ: ತಮಿಳುನಾಡಿನ ಶಿವಗಂಗಾದಲ್ಲಿ ಎರಡು ಸರ್ಕಾರಿ ಬಸ್ಸುಗಳು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ 11 ಮಂದಿ ಸಾವಿಗೀಡಾಗಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ‘ತಮಿಳುನಾಡಿನ ಶಿವಗಂಗಾದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಜನರು ಸಾವಿಗೀಡಾದ ಘಟನೆ ತೀವ್ರ ದುಃಖ ತಂದಿದೆ. ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದು ಮೋದಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೃತರ ಕುಟುಂಬಗಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ […]
ಉಡುಪಿ – ಬ್ರಹ್ಮಾವರದ ಕನ್ಸಲ್ಟೆನ್ಸಿ ಆಫೀಸಿನಲ್ಲಿ ಉದ್ಯೋಗವಕಾಶ!

ಉಡುಪಿ:ಉಡುಪಿ – ಬ್ರಹ್ಮಾವರದ ಕನ್ಸಲ್ಟೆನ್ಸಿ ಆಫೀಸಿನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 🔹HR ಅಸಿಸ್ಟೆಂಟ್ ( ಪುರುಷ)🔹 ಆಫೀಸ್ ಸ್ಟಾಫ್ ( ಮಹಿಳೆ)🔹ಟೆಲಿಕಾಲರ್ ( ಮಹಿಳೆ)🔹ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್( ಪುರುಷ ಅಭ್ಯರ್ಥಿಯಾಗಿದ್ದು ಪಿಯುಸಿ ವಿದ್ಯಾರ್ಥಿ ಹೊಂದಿರಬೇಕು.) ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ನಂಬರ್ ಗೆ ವಾಟ್ಸಪ್ ಮಾಡಿ.9663579219
ಕುರ್ಕಾಲು ಬಳಿ ಸರಣಿ ಅಪಘಾತ: ಮೂರು ಕಾರುಗಳು ಜಖಂ

ಉಡುಪಿ: ಭಾನುವಾರ ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ ಭೀಕರ ಅಪಘಾತ ನಡೆದು ಐವರು ಅಸುನೀಗಿದ್ದರು. ಅಲ್ಲಿಂದ ಸ್ವಲ್ಪ ದೂರ ಮತ್ತೊಂದು ಸರಣಿ ಅಪಘಾತ ಸಂಭವಿಸಿ ಸಾರ್ವಜನಿಕರು ಆತಂಕ ಗೊಂಡಿದ್ದಾರೆ. ಕಟಪಾಡಿಯಿಂದ ಶಿರ್ವ ಕಡೆಗೆ ತೆರಳುತ್ತಿದ್ದಾಗ ಈ ಸರಣಿ ಅಪಘಾತ ಸಂಭವಿಸಿದೆ. ಕುರ್ಕಾಲು ಪರಿಸರದಲ್ಲಿ, ಕಾರೊಂದು ಏಕಾಏಕಿ ಬಲ ಮಗ್ಗುಲಿಗೆ ತಿರುಗಿದಾಗ, ಹಿಂದಿನಿಂದ ಬಂದ ಇತರ ಎರಡು ಕಾರುಗಳು ಡಿಕ್ಕಿಯಾಗಿದೆ. ಒಟ್ಟು 3 ಕಾರುಗಳು ಅಪಘಾತದಲ್ಲಿ ಜಖಂಗೊಂಡಿವೆ. ಕಾರುಗಳಲ್ಲಿದ್ದ ಅನೇಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ನಿನ್ನೆ ಈ ಪರಿಸರದಲ್ಲಿ […]
ಪ್ರೀತಿ ವಿರೋಧಿಸಿ ಕುಟುಂಬಸ್ಥರಿಂದಲೇ ಪ್ರಿಯಕರನ ಹತ್ಯೆ: ಮಗಳ ಪ್ರೀತಿ ನಿರಾಕರಿಸಿ ಮರ್ಯಾದಾ ಹತ್ಯೆ

ಮುಂಬೈ: ಮಹಾರಾಷ್ಟ್ರದ ನಾಂದೇಡ್’ನಲ್ಲಿ ಮಗಳ ಪ್ರೀತಿ ನಿರಾಕರಿಸಿದ ಕುಟುಂಬವೊಂದು ಆಕೆಯ ಪ್ರಿಯಕರನನ್ನೇ ಕೊಂದು ಹಾಕಿದ್ದು, ಇದಕ್ಕೆ ಆಕ್ರೋಶಗೊಂಡ ಯುವತಿ ಪ್ರತ್ಯುತ್ತರವಾಗಿ ಪ್ರಿಯಕರನ ಮೃತದೇಹವನ್ನೇ ಮದುವೆಯಾಗಿರುವ ವಿಲಕ್ಷಣ ಘಟನೆ ನಡೆದಿದೆ. ಕೊಲೆಯಾದ ಯುವಕ 25 ವರ್ಷದ ಸಕ್ಷಮ್ ಟೆಟೆ. ಅಂಚಲ್ ಮತ್ತು ಸಕ್ಷಮ್(25) ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಪರಸ್ಪರರ ಕುಟುಂಬಗಳನ್ನು ಒಪ್ಪಿಸಿ ಮದುವೆಯಾಗಬೇಕು ಎಂದು ನಿರ್ಧರಿಸಿದ್ದರು. ಆದರೆ ಇವರ ಪ್ರೀತಿ ವಿಚಾರ ಯುವತಿ ಅಂಚಲ್ ರ ಕುಟುಂಬಸ್ಥರಿಗೆ ತಿಳಿದು ಇದಕ್ಕೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. […]
ಉಡುಪಿಯ ದೀಪೇಶ್’ಗೆ ಹೊಯ್ಸಳ ಶೌರ್ಯ ಪ್ರಶಸ್ತಿ ಗೌರವ.

ಉಡುಪಿ: ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ (ಮಾಹೆ)ನ ಶಿಕ್ಷಣ ಸಂಸ್ಥೆಯ ಘಟಕವಾಗಿರುವ ಟಿ.ಎ. ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ನ 10ನೇ ತರಗತಿಯ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈಗೆ ಚಾತುರ್ಯ, ಸಮಯ ಪ್ರಜ್ಞೆ ಮತ್ತು ಧೈರ್ಯಶಾಲಿ ಕಾರ್ಯಕ್ಕಾಗಿ ರಾಜ್ಯ ಮಟ್ಟದ ಹೊಯ್ಸಳ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಬೆಂಗಳೂರು ಅರಮನೆ ಮೈದಾನದಲ್ಲಿ ನ.28ರಂದು ಆಯೋಜಿಸಿದ್ದ ಐಸಿಡಿಎಸ್ ಗೋಲ್ಡನ್ ಜ್ಯುಬಿಲಿ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಹಿಳಾ ಮತ್ತು […]