ಕಾಡಾನೆ ಸಂಚಾರ: ವಾಲಿಕುಂಜ, ನರಸಿಂಹ ಪರ್ವತ ಚಾರಣಕ್ಕೆ ತಾತ್ಕಾಲಿಕ ನಿರ್ಬಂಧ

ಕಾರ್ಕಳ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಕೆರೆಕಟ್ಟೆ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿರುವ ಜನಪ್ರಿಯ ವಾಲಿಕುಂಜ ಹಾಗೂ ನರಸಿಂಹಪರ್ವತ ಚಾರಣ ಮಾರ್ಗಗಳಿಗೆ ಕಾಡಾನೆಗಳ ಸಂಚಾರ ಹೆಚ್ಚಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ. ನ.17ರಿಂದ ನ.19ರವರೆಗೆ ಪ್ರವಾಸಿಗರಿಗೆ ಈ ಎರಡೂ ಚಾರಣ ಮಾರ್ಗಗಳಿಗೆ ಪ್ರವೇಶ ಅವಕಾಶ ಇರುವುದಿಲ್ಲ. ಅರಣ್ಯ ಇಲಾಖೆ ಹೊರಡಿಸಿರುವ ಅಧಿಕೃತ ಜಾವನಾ ಪತ್ರದಲ್ಲಿ, ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ವಾಲಿಕುಂಜ ಹಾಗೂ ನರಸಿಂಹಪರ್ವತ ಚಾರಣಗಳು ಪ್ರಕೃತಿ […]
ಪಂಚಾಯತ್ ಚುನಾವಣೆ ನಡೆಸಲು ಸರಕಾರದ ಅಸಡ್ಡೆ: ಸಂವಿಧಾನದ ಆಶಯಕ್ಕೆಧಕ್ಕೆ; ಸಾಣೂರು ನರಸಿಂಹ ಕಾಮತ್ ಆಕ್ರೋಶ

ಕಾರ್ಕಳ: ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಗಳು ಕಳೆದ 5 ವರ್ಷಗಳಿಂದ ಚುನಾವಣೆ ನಡೆಯದೆ ಸ್ತಬ್ಧವಾಗಿದ್ದು, ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗಳು ಕೂಡಾ ಅದೇ ಹಾದಿಯನ್ನು ಹಿಡಿಯುವ ಲಕ್ಷಣಗಳು ತೋರಿ ಬರುತ್ತಿರುವುದು ದುರದೃಷ್ಟಕರ. ಸರಕಾರ ಇಡೀ ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ಆಡಳಿತಾಧಿಕಾರಿಗಳ ಮೂಲಕ ನಡೆಸುವ ಹುನ್ನಾರ ಮಾಡಿರುವುದು ಖಂಡನೀಯ. ರಾಜ್ಯ ಸರಕಾರದ ಬೇಜವಾರಬ್ದಾರಿತನ: ರಾಜ್ಯ ಸರ್ಕಾರವು ಗ್ರಾಮ ಪಂಚಾಯತ್ ಚುನಾವಣೆ ಗಳಿಗೆ ಪೂರಕವಾಗಿ ವಾರ್ಡುವಾರು ಸದಸ್ಯರ ಸಂಖ್ಯೆ ಮತ್ತು ಮೀಸಲು ನಿಗದಿ ಮಾಡದೆ ಇರುವುದರಿಂದ […]
ಆತ್ರಾಡಿಯ ಶಾಂಭವಿ ಹೋಟೆಲ್ & ಕನ್ವೆನ್ಶನ್ ಸೆಂಟರ್ ನಿಮಗಾಗಿ ತಯಾರು ಮಾಡಿದೆ ಭರ್ಜರಿ ಡಿನ್ನರ್ ಬಫೆಟ್: ಬನ್ನಿ ರುಚಿಕರ ಖಾದ್ಯಗಳ ಜೊತೆ ಎಂಜಾಯ್ ಮಾಡಿ

ಉಡುಪಿ: ಆತ್ರಾಡಿಯಲ್ಲಿರುವ ಶಾಂಭವಿ ಹೋಟೆಲ್ & ಕನ್ವೆನ್ಶನ್ ಸೆಂಟರ್ ನಲ್ಲಿ ಇದೇ ನವೆಂಬರ್ 14 ರಿಂದ ನವೆಂಬರ್ 29 ರವರೆಗೆ ಪ್ರತೀ ದಿನ ಸಂಜೆ 7.30 ರಿಂದ ಶುಕ್ರವಾರ, ಶನಿವಾರ & ಭಾನುವಾರಗಳಲ್ಲಿ ನಿಮಗಾಗಿ ಕಾದಿದೆ ಭರ್ಜರಿ ಡಿನ್ನರ್ ಭಫೇ. ಇದು ಉಡುಪಿ ಜಿಲ್ಲೆಯ ಅತ್ಯಂತ ರುಚಿಕರ ಮತ್ತು ಅದ್ಬುತ ಬಫೇ ಗಳಲ್ಲಿ ಒಂದಾಗಿದೆ. ವಾರಾಂತ್ಯವನ್ನು ವಿಶಿಷ್ಟ ಖಾಧ್ಯಗಳಿಂದ ಸಂಭ್ರಮಿಸಲು ಶಾಂಭವಿ ಹೋಟೆಲ್ & ಕನ್ವೆನ್ಶನ್ ಸೆಂಟರ್ ನೀಡುತ್ತಿರುವ ಭರ್ಜರಿ ಆಫರ್ ಇದಾಗಿದೆ. ಇದರಲ್ಲಿ ಸಸ್ಯಾಹಾರಿ ಮತ್ತು […]
ಉಡುಪಿ:ಭಗವಾನ್ ಬಿರ್ಸಾ ಮುಂಡ ಜಯಂತಿ ಅಂಗವಾಗಿ ಜನಜಾತಿಯ ಗೌರವ್ ದಿವಸ್ ಆಚರಣೆ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಉಡುಪಿ ಇವರ ಸಹಯೋಗದೊಂದಿಗೆ ಭಗವಾನ್ ಬಿರ್ಸಾ ಮುಂಡರವರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ಜನಜಾತಿಯ ಗೌರವ್ ದಿವಸ್ ಕಾರ್ಯಕ್ರಮವು ಶನಿವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕೊರ್ಟ್ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಬುಡಕಟ್ಟು ಸಮುದಾಯದವರು ಮುಖ್ಯವಾಹಿನಿಗೆ ಬರಲುವಿವಿಧ ಕಾರ್ಯಕ್ರಮಗಳ ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ […]
ಉಡುಪಿ:ಉಳಿಕೆ ಅನುದಾನದ ಮೊತ್ತದಲ್ಲಿ ವಿವಿಧ ಸೌಲಭ್ಯ : ಅರ್ಜಿ ಆಹ್ವಾನ

ಉಡುಪಿ: ಉಡುಪಿ ನಗರಸಭೆಯ 2024-25 ನೇ ಸಾಲಿನ ವಿವಿಧ ಕಾರ್ಯಕ್ರಮದಡಿ ಮೀಸಲಿರಿಸಿದ ಅನುದಾನದ ಉಳಿಕೆಮೊತ್ತದಲ್ಲಿ ಎಸ್.ಎಫ್.ಸಿ ಅನುದಾನದ ಶೇ. 5 ರ ವಿಕಲಚೇತನ ಕಾರ್ಯಕ್ರಮದಡಿ ಸಣ್ಣ ಉದ್ದಿಮೆ, ಮನೆ ದುರಸ್ಥಿ, ಕೃತಕ ಅಂಗ ಜೋಡಣೆ / ಶಸ್ತ್ರಚಿಕಿತ್ಸೆಗೆ ಧನಸಹಾಯ, ರಾಜ್ಯ, ರಾಷ್ಟ್ರೀಯ ಮಟ್ಟದ ಕ್ರೀಡೆ / ಸಾಂಸ್ಕೃತಿಕ ಹಾಗೂ ಇತರೆ ವ್ಯಾಸಾಂಗೇತರ ಚಟುವಟಿಕೆಗಳಲ್ಲಿಭಾಗವಹಿಸುವ ಅಭ್ಯರ್ಥಿಗಳಿಗೆ ಪ್ರೋತ್ಸಾಹಧನ ಹಾಗೂ ಎಸ್.ಎಸ್.ಎಲ್.ಸಿ ಯಿಂದ ಮಾಸ್ಟರ್ ಡಿಗ್ರಿವರೆಗಿನ ವಿದ್ಯಾರ್ಥಿಗಳಿಗೆ ಸಹಾಯಧನ, ಎಸ್.ಎಫ್.ಸಿ / ಮುಕ್ತನಿಧಿ ಮತ್ತು ಪುರಸಭಾ ನಿಧಿಯ ಶೇ. 7.25 […]