ಕಾರ್ಕಳ ಕ್ರೈಸ್ಟ್ ಕಿಂಗ್: ಅಂತರ್ ಜಿಲ್ಲಾಮಟ್ಟದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸ್ಪರ್ಧೆ ಅನ್ವೇಷಣೆ-2025

ಕಾರ್ಕಳ:ಕಾರ್ಕಳ ಇಲ್ಲಿನ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪದವಿಪೂರ್ವ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಅಂತರ್ ಜಿಲ್ಲಾಮಟ್ಟದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸ್ಪರ್ಧೆ ‘ಅನ್ವೇಷಣೆ 2025’ ಅದ್ದೂರಿಯಾಗಿ ನಡೆಯಿತು. ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ರಂಗಭೂಮಿ ಮತ್ತು ಚಲನಚಿತ್ರ ನಟ ತೆಲಿಕೆದ ತೆನಾಲಿ ಸುನಿಲ್ ನೆಲ್ಲಿಗುಡ್ಡೆ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು “ಇಂದಿನ ವಿದ್ಯಾರ್ಥಿಗಳಿಗೆ ಅನ್ವೇಷಣೆಯಂತಹ ಕಾರ್ಯಕ್ರಮಗಳು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರಕಟಿಸಲು ವೇದಿಕೆಯಾಗುತ್ತವೆ. […]

ಕುಂದಾಪುರ:ಭಗವದ್ಗೀತೆ ಸ್ಪರ್ಧೆ ಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿನಿ ಮನ್ವಿತಾ.

ಕುಂದಾಪುರ : ನವೆಂಬರ್ 9 ರಂದು ಕುಂದಾಪುರದ ರಾಮ ಮಂದಿರದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ನಡೆಸಿದ ತಾಲೂಕು ಮಟ್ಟದ ಭಗವದ್ಗೀತೆ ಮನ : ಸ್ವಾಸ್ಥ್ಯದ ಕೈಪಿಡಿ ಎಂಬ ವಿಷಯದ ಕುರಿತು ನಡೆಸಿದ ಭಾಷಣ ಸ್ಪರ್ಧೆ ಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮನ್ವಿತಾ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವಿದ್ಯಾರ್ಥಿನಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ – ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

ಮಣಿಪಾಲ: ಬಾರ್ ಮುಂಭಾಗದಲ್ಲಿ ಯುವಕರ ಹೊಡೆದಾಟ; ನಾಲ್ವರು ಯುವಕರು ಪೊಲೀಸ್ ವಶಕ್ಕೆ

ಉಡುಪಿ: ಈಶ್ವನಗರದ ಬಳಿ ಇರುವ ಡೌನ್ ಟೌನ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಮುಂಭಾಗದಲ್ಲಿ ನ.8ರಂದು ರಾತ್ರಿ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಯುವಕರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಮರ್ ಶೆಟ್ಟಿ, ಚಂದನ್ ಸಿ ಸಾಲ್ಯಾನ್, ಧನುಷ್ ಮತ್ತು ಅಜಯ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಾರ್ ನಲ್ಲಿ ಅಮ‌ರ್ ಶೆಟ್ಟಿ, ಧನುಷ್, ನಿತೇಶ್, ಸುಜನ್, ನಿನಾದ್ ಅಜಯ್ ಊಟ ಮಾಡುತ್ತಿರುವಾಗ ಚಂದನ್ ಎಂಬಾತನ ಕೈ ಅಮ‌ರ್ ಶೆಟ್ಟಿಯ ಮೈಗೆ ತಾಗಿದೆ. ಈ ಕ್ಷುಲ್ಲಕ ವಿಚಾರದಲ್ಲಿ ರಸ್ತೆಯಲ್ಲೇ […]

‘ದೃಶ್ಯಂ ಸಿನಿಮಾ’ ಪ್ರೇರಣೆ; ಹೆಂಡತಿಯನ್ನು ಕೊಂದು, ಶವವನ್ನು ಸುಟ್ಟು ಹಾಕಿ ಅಮಾಯಕನಂತೆ ನಟಿಸುತ್ತಿದ್ದ ಗಂಡನ ಬಂಧನ!

ಪುಣೆ: ಅಕ್ರಮ ಸಂಬಂಧವನ್ನು ಮುಚ್ಚಿಡಲು ಹೆಂಡತಿಯನ್ನು ಕೊಂದು ಕಬ್ಬಿಣದ ಕುಲುಮೆಯಲ್ಲಿ ಸುಟ್ಟು ಅಮಾಯಕನಂತೆ ನಟಿಸಿದ್ದ ಗಂಡನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.ಪುಣೆಯ ಶಿವಾನೆ ಪ್ರದೇಶದ ನಿವಾಸಿ ಸಮೀರ್ ಜಾಧವ್ ಬಂಧಿತ ಆರೋಪಿ. ಹತ್ಯೆಯಾದ ಅಂಜಲಿ ಜಾಧವ್, ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಗ್ಯಾರೇಜ್‌ ನಡೆಸುತ್ತಿದ್ದ ಸಮೀರ್, ಹಿಂದಿಯ ದೃಶ್ಯಂ ಸಿನಿಮಾ ನೋಡಿ ಹತ್ಯೆಯ ಯೋಜನೆ ರೂಪಿಸಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾನೆ. ಮಕ್ಕಳು ಊರಿಗೆ ಹೋಗುವ ಸಂದರ್ಭವನ್ನೇ ಎದುರು ನೋಡುತ್ತಿದ್ದ ಆರೋಪಿ ಸಮೀರ್‌, ಅಕ್ಟೋಬರ್ 26ರಂದು ಪತ್ನಿಯನ್ನು ತಾನು ಬಾಡಿಗೆಗೆ ಪಡೆದಿದ್ದ […]

ನ.15, 16ರಂದು ಕನ್ನರ್ಪಾಡಿ ಸಾವಿತ್ರಿ ನಾಟ್ಯಶಾಲಾ ದಶಮಾನೋತ್ಸವ ಸಮಾರೋಪ ಕಾರ್ಯಕ್ರಮ

ಉಡುಪಿ: ಕನ್ನರ್ಪಾಡಿ ಸಾವಿತ್ರಿ ನಾಟ್ಯಶಾಲಾ ದಶಮಾನೋತ್ಸವ ಸಮಾರೋಪ ಕಾರ್ಯಕ್ರಮ ನ.15 ಮತ್ತು 16ರಂದು ಐವೈಸಿ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆ ನಿರ್ದೇಶಕಿ ಶ್ರೀವಿದ್ಯಾ ಸಂದೇಶ್​ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 15ರಂದು ಬೆಳಿಗ್ಗೆ 10 ಗಂಟೆಗೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿದುಷಿ ಲಕ್ಷಿ ಗುರುರಾಜ್​ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎಲ್​. ಸಾಮಗ, ಹಿರಿಯ ವಿದುಷಿ ಪ್ರತಿಭಾ ಸಾಮಗ, ರಾಧಾಕೃಷ್ಣ […]