ನ.15, 16ರಂದು ಕನ್ನರ್ಪಾಡಿ ಸಾವಿತ್ರಿ ನಾಟ್ಯಶಾಲಾ ದಶಮಾನೋತ್ಸವ ಸಮಾರೋಪ ಕಾರ್ಯಕ್ರಮ

ಉಡುಪಿ: ಕನ್ನರ್ಪಾಡಿ ಸಾವಿತ್ರಿ ನಾಟ್ಯಶಾಲಾ ದಶಮಾನೋತ್ಸವ ಸಮಾರೋಪ ಕಾರ್ಯಕ್ರಮ ನ.15 ಮತ್ತು 16ರಂದು ಐವೈಸಿ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆ ನಿರ್ದೇಶಕಿ ಶ್ರೀವಿದ್ಯಾ ಸಂದೇಶ್​ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 15ರಂದು ಬೆಳಿಗ್ಗೆ 10 ಗಂಟೆಗೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿದುಷಿ ಲಕ್ಷಿ ಗುರುರಾಜ್​ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎಲ್​. ಸಾಮಗ, ಹಿರಿಯ ವಿದುಷಿ ಪ್ರತಿಭಾ ಸಾಮಗ, ರಾಧಾಕೃಷ್ಣ ನೃತ್ಯ ನಿಕೇತನ ನಿರ್ದೇಶಕಿ ವೀಣಾ ಸಾಮಗ ಉಪಸ್ಥಿತರಿವರು. 16ರಂದು ಸಾಯಂಕಾಲ 4 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಹಿರಿಯ ನೃತ್ಯಗುರು ಉಳ್ಳಾಲ್​ ಮೋಹನ್​ ಕುಮಾರ್​ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ರುಪತಿ ಭಟ್​, ಶಾಸಕ ಗುರ್ಮೆ ಸುರೇಶ್​ ಶೆಟ್ಟಿ, ಸಂಸತಿ ಇಲಾಖೆಯ ಪೂರ್ಣಿಮಾ, ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್​, ಮಾಜಿ ಉಪಕುಲಪತಿ ಡಾ. ಪ್ರಭಾಕರ್​ ಭಾಗವಹಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ಕಾರ್ಯದರ್ಶಿ ಸಂದೇಶ್​ ಕುಮಾರ್​, ತೃಪ್ತಿ ಶೆಟ್ಟಿ, ಕಾರ್ತಿಕ್​ ಪ್ರಭು ಉಪಸ್ಥಿತರಿದ್ದರು.