ಉಡುಪಿ:ದ್ವಿಚಕ್ರ ವಾಹನ ಬಹಿರಂಗ ಹರಾಜು

ಉಡುಪಿ: ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಪಟ್ಟ ಮತ್ತು ವಾರಿಸುದಾರರಿಲ್ಲದ ಈ ಕೆಳಗೆ ನಮೂದಿಸಿದ 25 ದ್ವಿಚಕ್ರ ವಾಹನಗಳನ್ನು ಅ.21ರಂದು ಬೆಳಿಗ್ಗೆ 10.00 ಗಂಟೆಗೆ ಮಣಿಪಾಲ ಪೊಲೀಸ್ ಠಾಣಾ ಆವರಣದಲ್ಲಿ ನ್ಯಾಯಾಲಯದ ಆದೇಶದಂತೆ ಬಹಿರಂಗ ಹರಾಜು ಮಾಡಲಾಗುತ್ತಿದ್ದು ಆಸಕ್ತರು ಆ ಸಮಯದಲ್ಲಿ ಆವರಣದಲ್ಲಿ ಹಾಜರಿರುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮಣಿಪಾಲ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಉಡುಪಿ:ಮುಂಗಾರು ಬೆಳೆ ಸಮೀಕ್ಷೆ:ಆಕ್ಷೇಪಣೆ ಆಹ್ವಾನ

ಉಡುಪಿ : ಜಿಲ್ಲೆಯಲ್ಲಿ ಜಿ.ಪಿ.ಎಸ್ ಆಧಾರಿತ 2025-26ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯವನ್ನು ಖಾಸಗಿ ನಿವಾಸಿಗಳ ಮೂಲಕ ಕೈಗೊಳ್ಳಲಾಗುತ್ತಿದ್ದು, ಮಾಹಿತಿಯನ್ನು ಪ್ರಕೃತಿ ವಿಕೋಪಗಳ ಪರಿಹಾರ ವಿತರಣೆ, ಬೆಳೆ ವಿಮೆ ಯೋಜನೆ ಅನುಷ್ಠಾನ, ಬೆಳೆ ಸಾಲ, ಪಹಣಿಯಲ್ಲಿ ಬೆಳೆ ವಿವರ ದಾಖಲೆ, ಬೆಂಬಲ ಬೆಲೆ ಯೋಜನೆಯ ಅರ್ಹ ಫಲಾನುಭವಿಗಳ ಗುರುತಿಸುವಿಕೆ ಹಾಗೂ ಕೃಷಿ/ತೋಟಗಾರಿಕೆ/ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನಕ್ಕೆ ಬಳಸಲಾಗುವುದು. ಬೆಳೆ ಸಮೀಕ್ಷೆಯಲ್ಲಿ ನಮೂದಾದ ಬೆಳೆಗಳ ಬಗ್ಗೆ ರೈತರಿಗೆ ಆಕ್ಷೇಪಣೆಗಳಿದ್ದಲ್ಲಿ ಗೂಗಲ್ ಪ್ಲೇನಲ್ಲಿ ಲಭ್ಯವಿರುವ […]
ಉಡುಪಿ:ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಹಾಯವಾಣಿ ಆರಂಭ

ಉಡುಪಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸೆ.22 ರಂದು ಪ್ರಾರಂಭಿಸಿದ್ದು ಸಮೀಕ್ಷೆ ಕಾರ್ಯವು ಪೂರ್ಣಗೊಳ್ಳದ ಕಾರಣ ಸರ್ಕಾರದ ಆದೇಶದಂತೆ ಅ.18 ರವರೆಗೆ ಸಮೀಕ್ಷೆಕಾರ್ಯವನ್ನು ಮುಂದೂಡಲಾಗಿರುತ್ತದೆ. ಈ ಸಮೀಕ್ಷೆ ಸಮಯದಲ್ಲಿ ಸಮೀಕ್ಷೆದಾರರು ತಮ್ಮ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡದೆ ಬಿಟ್ಟುಹೋದಲ್ಲಿ ರಾಜ್ಯ ಮಟ್ಟದ ಸಹಾಯವಾಣಿ 8050770004, ಜಿಲ್ಲಾ ಮಟ್ಟದ ಸಹಾಯವಾಣಿ 0820-2574881, ಉಡುಪಿ/ಬ್ರಹ್ಮಾವರ/ಕಾಪು ಮಟ್ಟದ ಸಹಾಯವಾಣಿ 0820-2520739, ಬೈಂದೂರು/ಕುಂದಾಪುರ 9972294198, ಕಾರ್ಕಳ-ಹೆಬ್ರಿ 08258-298610ಸಹಾಯವಾಣಿಗೆ ಕಚೇರಿ ಅವಧಿಯಲ್ಲಿ ಕರೆ ಮಾಡಿದಲ್ಲಿ […]
ಉಡುಪಿ: ಮಾಜಿ ಶಾಸಕ ದಿ.ಗೋಪಾಲ ಭಂಡಾರಿ ಪುತ್ರ ಆತ್ಮಹತ್ಯೆ

ಉಡುಪಿ: ಮಾಜಿ ಶಾಸಕ ದಿ.ಗೋಪಾಲ ಭಂಡಾರಿಯವರ ಪುತ್ರ ಸುದೀಪ್ ಭಂಡಾರಿ (48) ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.ಸೋಮವಾರ ರಾತ್ರಿ ಬ್ರಹ್ಮಾವರ ಸಮೀಪದ ಬಾರ್ಕೂರು ಬಳಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೆಬ್ರಿಯಲ್ಲಿ ವೈನ್ಸ್ ಶಾಪ್ ನಡೆಸುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಸುದೀಪ್ ಭಂಡಾರಿಯವರು ತಾಯಿ, ಪತ್ನಿ, ಇಬ್ಬರು ಮಕ್ಕಳು, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ಮೀನಿನಲ್ಲಿರುವ ಈ ಬ್ಲ್ಯಾಕ್ ಪಾರ್ಟ್ ವೇಸ್ಟ್ ಅಂತ ಬಿಸಾಡ್ಬೇಡಿ: ಇದ್ರಲ್ಲಿದೆ ಅದ್ಬುತ ಆರೋಗ್ಯ

ಮಾಂಸಹಾರಿಗಳಿಗೆ ಚಿಕನ್, ಮಟನ್ ಜೊತೆಗೆ ಮೀನು ಕೂಡಾ ಅಚ್ಚುಮೆಚ್ಚಿನ ಆಹಾರ. ವೈದ್ಯರ ಪ್ರಕಾರ ಮೀನು ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾದ ಆಹಾರವಾಗಿದ್ದು, ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು, ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿರುತ್ತವೆ. ಆದರೆ ಮಾರುಕಟ್ಟೆಯಿಂದ ತಾಜಾ ಮೀನು ತಂದು ಕತ್ತರಿಸಿದಾಗ, ಬಿಳಿ ಮಾಂಸದ ಮಧ್ಯದಲ್ಲಿ ಕಪ್ಪು ಚುಕ್ಕೆಯಂತಿರುವ ಭಾಗವನ್ನು ನೀವು ಗಮನಿಸಿರುತ್ತೀರಿ. ಕೆಲವೊಮ್ಮೆ ಅದು ಕಪ್ಪಷ್ಟೇ ಅಲ್ಲದೆ ಕೆಂಪು, ಕಂದು ಅಥವಾ ಬೂದು ಬಣ್ಣದಲ್ಲಿಯೂ ಕಾಣಬಹುದು. ಅನೇಕರು ಇದನ್ನು ಕೊಳಕು ಅಥವಾ ಮೀನು ಕೆಟ್ಟುಹೋಗಿದೆ ಎಂದು ಭಾವಿಸಿ ತೆಗೆದು […]