ಉಡುಪಿ: ಆರ್ಯ ಗೋಲ್ಡ್ ಆ್ಯಂಡ್ ಸಿಲ್ವರ್ ಅಂಗಡಿ ಮಾಲೀಕನ ಮನೆಯಲ್ಲಿ ಕಳ್ಳತನ; 1ಕೆ.ಜಿ. ಅಧಿಕ ಚಿನ್ನ ದೋಚಿ ಪರಾರಿ

ಉಡುಪಿ: ಆರ್ಯ ಗೋಲ್ಡ್ ಆ್ಯಂಡ್ ಸಿಲ್ವರ್ ಅಂಗಡಿ ಮಾಲೀಕನ ಮನೆಗೆ ನುಗ್ಗಿದ ಕಳ್ಳರು 1 ಕೆಜಿ ಅಧಿಕ ಚಿನ್ನದ ಗಟ್ಟಿ ಕಳ್ಳತನ ಮಾಡಿರುವ ಘಟನೆ ಉಡುಪಿ‌ ಗುಂಡಿಬೈಲಿನಲ್ಲಿ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಆರ್ಯ ಗೋಲ್ಡ್ ಮಾಲೀಕ ಅಜಯ್ ಜಾಧವ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಅವರ ಗುಂಡಿಬೈಲಿನ ಮನೆಗೆ ನುಗ್ಗಿದ ಕಳ್ಳರು ಒಂದು ಕೆಜಿಗೂ‌ ಅಧಿಕ ಚಿನ್ನ ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ‌

ಉಡುಪಿಯ ಸಾಂಸ್ಕೃತಿಕ ಹರಿಕಾರ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ 75ರ ಅಭಿನಂದನೆ.

ಉಡುಪಿ: ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರು, ಉಡುಪಿಯ ಸಾಂಸ್ಕೃತಿಕ ಹರಿಕಾರ ಎಂದೇ ಖ್ಯಾತರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ 75 ವರ್ಷ ತುಂಬಿದ ಹಿನ್ನಲೆಯಲ್ಲಿ ಅಭಿಮಾನಿಗಳಿಂದ ಅಭಿನಂದನಾ ಕಾರ್ಯಕ್ರಮ ಭಾನುವಾರ ಅಂಬಾಗಿಲು ಅಮೃತ್ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ತಲ್ಲೂರ್ಸ್ ಕುಟುಂಬದ ಫ್ಯಾಮಿಲಿ ವೈದ್ಯ ಡಾ. ಆರ್.ಎನ್.ಭಟ್ ಅವರಿಗೆ ಜಾನಪದ ಶೈಲಿಯಲ್ಲಿ ಗೌರವಾರ್ಪಣೆ ನಡೆಯಿತು. ವೈದ್ಯರತ್ನ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಡಾ.ಆರ್.ಎನ್. ಭಟ್, ಬಹಳ ವಿಶಿಷ್ಟ ರೀತಿಯಲ್ಲಿ ನಡೆದ ಈ ಸನ್ಮಾನದಿಂದ ಹೃದಯ ತುಂಬಿ ಬಂದಿದೆ. […]

ಕುಂದಾಪುರ: ಕ್ರೇನ್‌ ಹರಿದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಮೃತ್ಯು.

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆಯಲ್ಲಿ ಅ. 11ರಂದು ಆಯತಪ್ಪಿ ರಸ್ತೆಗೆ ಬಿದ್ದ ಸ್ಕೂಟರ್‌ ಸವಾರನ ಮೇಲೆ ಕ್ರೇನ್‌ ಹರಿದು ಗಂಭೀರವಾಗಿ ಗಾಯಗೊಂಡಿದ್ದ ಮಣೂರಿನ ಕಂಬಳಗದ್ದೆಬೆಟ್ಟು ನಿವಾಸಿ ಅಭಿಷೇಕ್‌ ಪೂಜಾರಿ (23) ಅವರು ಚಿಕಿತ್ಸೆಗೆ ಸ್ಪಂದಿಸದೆ ಅ.13ರಂದು ಮೃತಪಟ್ಟಿದ್ದಾರೆ. ಮಣೂರಿನಲ್ಲಿರುವ ತನ್ನ ಮನೆಯಿಂದ ಕೆಲಸದ ನಿಮಿತ್ತ ಕುಂದಾಪುರದ ಕಡೆಗೆ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ ಪಲ್ಸರ್‌ ಸವಾರ ಏಕಾಏಕಿ ಅಡ್ಡಬಂದ ಪರಿಣಾಮ ಅಭಿಷೇಕ್‌ ರಸ್ತೆಗೆ ಬಿದ್ದಿದ್ದರು. ಎದ್ದೇಳಬೇಕು ಎನ್ನುವಷ್ಟರಲ್ಲಿಯೇ ಹಿಂದಿನಿಂದ ವೇಗದಿಂದ ಬಂದ ಕ್ರೇನ್‌ ಮೈ ಮೇಲೆ ಹರಿದು […]

ದೀಪಾವಳಿ ಹಬ್ಬದ ಪ್ರಯುಕ್ತ ಮಂಗಳೂರಿನಿಂದ ಬೆಂಗಳೂರಿಗೆ ವಿಶೇಷ ರೈಲು ಸಂಚಾರ.

ಮಂಗಳೂರು : ದೀಪಾವಳಿ ಹಬ್ಬದ ಪ್ರಯುಕ್ತ ಹುಬ್ಬಳ್ಳಿಯಿಂದ ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ವಿಶೇಷ ರೈಲು ಓಡಾಟ ನಡೆಯಲಿದೆ. ಅ.17ರಂದು ರೈಲು ಸಂಖ್ಯೆ 07353 ಶ್ರೀ ಸಿದ್ಧಾರೂಡ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್ ಶ್ರೀ ಸಿದ್ಧಾರೂಡ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ರೈಲು ನಿಲ್ದಾಣದಿಂದ ಸಂಜೆ 4:00ಕ್ಕೆ ಹೊರಟು ಅದೇ ದಿನ ರಾತ್ರಿ 11:25ಕ್ಕೆ ಬೆಂಗಳೂರಿನ ಯಶವಂತಪುರ ಜಂಕ್ಷನ್ ರೈಲು ನಿಲ್ದಾಣ ತಲುಪಲಿದೆ. ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 11:55ಕ್ಕೆ ಹೊರಟು ಮರುದಿನ […]

ಉಡುಪಿ ಆರ್ ಟಿ ಓ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ; ದಾಖಲೆಗಳ ಪರಿಶೀಲನೆ

ಉಡುಪಿ: ಉಡುಪಿ ಆರ್ ಟಿ ಓ ಅಧಿಕಾರಿ ಲಕ್ಷ್ಮೀನಾರಾಯಣ ಪಿ ನಾಯಕ್ ಮನೆ ಮೇಲೆ ಮಂಗಳವಾರ ಬೆಳ್ಳಂಬೆಳ್ಳಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಉಡುಪಿಯ ಕಿನ್ನಿಮುಲ್ಕಿ ಫ್ಲ್ಯಾಟ್ ನಲ್ಲಿ ಇರುವ ಮನೆಗೆ ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಲಕ್ಷ್ಮೀ ನಾರಾಯಣ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾದವರಾಗಿದ್ದಾರೆ. ಕುಮುಟಾ ಹಾಗೂ ಪಡುಅಲೆವೂರಿನ ಆರ್ಟಿಓ ಅಧಿಕಾರಿಯ ಬ್ರೋಕರ್ ರವಿ ಸೇರಿಗಾರ್‌ನ ಮನೆ ಮತ್ತು […]