ಕಾರ್ಕಳ: ಸ್ನೇಹಿತರಿಂದ ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ: ಡೆತ್ ನೋಟ್ ಬರೆದಿಟ್ಟು ಲಾಡ್ಜ್’ನಲ್ಲಿ ಯುವಕ ಆತ್ಮಹತ್ಯೆ.

ಕಾರ್ಕಳ: ತನ್ನ ಗೆಳತಿಯೊಂದಿಗೆ ಇರುವ ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಸ್ನೇಹಿತರು ಬೆದರಿಕೆ ಹಾಕಿದ ಹಿನ್ನಲೆ ಮನನೊಂದ ಯುವಕನೊಬ್ಬ ಲಾಡ್ಜ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಸಂಜೆ ಬೆಳ್ಮಣ್ನ ಖಾಸಗಿ ಲಾಡ್ಜ್‌ನಲ್ಲಿ ನಡೆದಿದೆ. ಮೃತನನ್ನು ನಿಟ್ಟೆ ಗ್ರಾಮದ ಪರಪ್ಪಾಡಿ ನಿವಾಸಿ ಅಭಿಷೇಕ್ ಆಚಾರ್ಯ (23) ಎಂದು ಗುರುತಿಸಲಾಗಿದೆ. ಅಭಿಷೇಕ್ ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಮತ್ತು ಸ್ಥಳೀಯ ಯುವತಿಯನ್ನು ಪ್ರೀತಿಸುತ್ತಿದ್ದ. ಅವರ ಸಂಬಂಧವು ದೈಹಿಕ ಅನ್ಯೋನ್ಯತೆಗೆ ಮುಂದುವರೆದಿದ್ದು, ಇಬ್ಬರೂ ಒಟ್ಟಿಗೆ ಖಾಸಗಿ ವೀಡಿಯೊವನ್ನು ರೆಕಾರ್ಡ್ […]
ಉಡುಪಿ ನ್ಯಾಯಾಲಯದ ಎದುರಿನ ಮಾಂಡವಿ ಕೋರ್ಟ್ ಕಟ್ಟಡಲ್ಲಿರುವ ಬ್ಯೂಟಿ ಪಾರ್ಲರ್‌ನಲ್ಲಿ ಅಗ್ನಿ ಅವಘಡ- ಲಕ್ಷಾಂತರ ರೂ. ನಷ್ಟ

ಉಡುಪಿ:ಉಡುಪಿ ಕೋರ್ಟ್ ಮುಂಭಾಗದ ಮಾಂಡವಿ ಬಿಲ್ಡಿಂಗ್ ನ ಎರಡನೇ ಮಹಡಿಯಲ್ಲಿರುವ ಬ್ಯೂಟಿ ಪಾರ್ಲರ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂ.ನಷ್ಟವಾಗಿದ್ದು ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ. ನಂತರ ಉಡುಪಿಯ ಅಗ್ನಿಶಾಮಕ ದಳದ ಸಿಬ್ಬಂದಿಯವರು ಬೆಂಕಿಯನ್ನು ನಂದಿಸಿದ್ದಾರೆ. V.C : Srujan
ಪತಿಯ ಹಿಂಸೆಯಿಂದ ಬೇಸತ್ತು ತನ್ನ ಇಬ್ಬರು ಮಕ್ಕಳನ್ನು ಕೊಂದು ಮಹಿಳೆ ಆತ್ಮಹತ್ಯೆ ಶರಣು!

ಬೆಂಗಳೂರು: ನಗರದ ಬಾಗಲಗುಂಟೆ ಬಳಿಯ ಭುವನೇಶ್ವರಿ ನಗರದಲ್ಲಿ ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರು ಭುವನ್ (1), ಬೃಂದಾ (4), ಮತ್ತು ತಾಯಿ ವಿಜಯಲಕ್ಷ್ಮಿ. ಗುರುವಾರ ರಾತ್ರಿ ವಿಜಯಲಕ್ಷ್ಮಿ ತಂಗಿ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮೂಲತಃ ರಾಯಚೂರು ಮಸ್ಕಿ ಮೂಲದ ರಮೇಶ್, ವಿಜಯಲಕ್ಷ್ಮಿ ಮದುವೆಯಾಗಿ ಐದು ವರ್ಷವಾಗಿತ್ತು. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪತಿ ರಮೇಶ್ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಸಾವಿನ […]
ವಾಲಿಬಾಲ್ ಕೋಚ್’ನಿಂದ ಪ್ರೀತಿಯ ಹೆಸರಲ್ಲಿ ಕಿರುಕುಳ: ಬಿಎ ವಿದ್ಯಾರ್ಥಿನಿ ನೇಣಿಗೆ ಶರಣು!

ಪ್ರೀತಿಯ ಹೆಸರಿನಲ್ಲಿ ತರಬೇತುದಾರನ ಕಿರುಕುಳವನ್ನು ಸಹಿಸಲಾಗದೆ ವಿದ್ಯಾರ್ಥಿನಿಯೊಬ್ಬಳು ಕೊನೆಯುಸಿರೆಳೆದಿರುವ ಆಘಾತಕಾರಿ ಘಟನೆ ಹೈದರಾಬಾದ್ನ ಲಾಲಾಗುಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಮೌಲಿ (19) ಎಂದು ಗುರುತಿಸಲಾಗಿದೆ. ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ಲಾಲಗುಡ ಇನ್ಸ್‌ಪೆಕ್ಟರ್ ರಘು ಬಾಬು ಅವರು ನೀಡಿರುವ ಮಾಹಿತಿ ಪ್ರಕಾರ, ಮೃತ ಮೌಲಿ, ನಿವೃತ್ತ ರೈಲ್ವೆ ಉದ್ಯೋಗಿ ಪ್ರಮೋದ್ ಕುಮಾರ್ ಅವರ ಪುತ್ರಿ. ಪ್ರಮೋದ್ ಕುಟುಂಬ ಲಾಲಾಪೇಟದ ಸಾಯಿಬಾಬಾ ದೇವಸ್ಥಾನದ ಬಳಿ ವಾಸಿಸುತ್ತಿದೆ. ಅವರಿಗೆ ಪತ್ನಿ, ಇಬ್ಬರು ಹೆಣ್ಣುಮಕ್ಕಳು ಮತ್ತು […]
ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷರಾಗಿ ಕೆ.ರಘುಪತಿ ರಾವ್ ಆಯ್ಕೆ.

ಉಡುಪಿ: ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ಪ್ರಸಕ್ತ ಸಾಲಿನ ಅಧ್ಯಕ್ಷರಾಗಿ ರಘುಪತಿ ರಾವ್ ಕಿದಿಯೂರು ಇವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಜೇಂದ್ರಪ್ರಸಾದ್ ಆಚಾರ್ಯ, ವಿವೇಕಾನಂದ ಪಾಂಗಣ್ಣಾಯ, ಕುಮಾರಸ್ವಾಮಿ ಉಡುಪ, ಜನಾರ್ದನ ಭಟ್, ಮುರಳಿ ಅಡಿಗ, ಪದ್ಮಲತಾ ವಿಷ್ಣು. ಕಾರ್ಯದರ್ಶಿಯಾಗಿ ಅಮಿತಾ ಕ್ರಮದಾರಿ, ಕೋಶಾಧಿಕಾರಿಯಾಗಿ ರವೀಂದ್ರ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ಗುರುರಾಜ್, ನಾಗರಾಜ ಭಟ್ ಕರಂಬಳ್ಳಿ, ಜೊತೆ ಕೋಶಾಧಿಕಾರಿಯಾಗಿ ಹರಿಪ್ರಸಾದ ಕೆ., ಸಂಚಾಲಕರಾಗಿ ಚಂದ್ರಕಾಂತ ಕೆ.ಎನ್. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುರೇಶ ಕಾರಂತ್, ಗುರುಪ್ರಸಾದ್,ಕೇಶವ ರಾವ್, ಕೃಷ್ಣರಾಜ […]