ಅಸಂಘಟಿತ ವಲಯದ ಕಾರ್ಮಿಕರಿಗೆ 10-15 ಲಕ್ಷ ರೂ. ಹೆಲ್ತ್ ಕಾರ್ಡ್ ಸೌಲಭ್ಯ ನೀಡಲು ಚಿಂತನೆ- ಸಚಿವ ಸಂತೋಷ್ ಲಾಡ್

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕಾರ್ಮಿಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಅರಿವು ಕಾರ್ಯಕ್ರಮವನ್ನು ಅಜ್ಜರಕಾಡು ಪುರಭವನದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರು, ಪೆಟ್ರೋಲ್, ಡೀಸೆಲ್ ಸೆಸ್ 1 ರೂ. ಕಾರ್ಮಿಕ ಇಲಾಖೆಗೆ ನೀಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ. ಆ ಮೂಲಕ ಸಂಗ್ರಹವಾಗುವ 2500 ಕೋಟಿ ಮೊತ್ತದಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ 10-15 […]

ಸ್ತನಕ್ಯಾನ್ಸರ್ ಕುರಿತ ಇಷ್ಟೆಲ್ಲಾ ಮಾಹಿತಿಗಳು ನಿಮಗೆ ತಿಳಿದಿರಲೇಬೇಕು:ಸ್ತನ ಕ್ಯಾನ್ಸರ್ ತಡೆಗಟ್ಟಲು ಏನ್ ಮಾಡ್ಬೇಕು?

ಬರಹ-ಶ್ರೇಯಾ ಶಿವಪ್ರಕಾಶ್ ಈಗ ಸ್ತನ ಕ್ಯಾನ್ಸರ್ ತುಂಬಾ ಸಾಮಾನ್ಯವಾಗಿಬಿಟ್ಟಿದೆ. ನಮ್ಮ ನಿಮ್ಮ ನಡುವೆಯೇ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವವರನ್ನು ನೋಡಬಹುದಾಗಿದೆ. ಅಕ್ಟೋಬರ್ ತಿಂಗಳೆಂದರೆ ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳು. ಈ ಸಂದರ್ಭದಲ್ಲಿ ಹಲವೆಡೆ ಜಾಗೃತಿ ಕಾರ್ಯಕ್ರಮಗಳು, ಲೇಖನಗಳು, ವೀಡಿಯೋಗಳು ಹೊರಬರುತ್ತವೆ. ಸಾಂಕೇತಿಕವಾಗಿ ಪಿಂಕ್ ರಿಬ್ಬನ್ ಗಳು ಮಿಂಚುತ್ತವೆ. ಆದರೆ ಇದರ ಹಿಂದೊಂದು ಅರಿಯದ ಸತ್ಯವಿದೆ, ನಮ್ಮ ಸ್ತನಗಳೊಂದಿಗಿನ ನಮ್ಮ ಸಂಬಂಧವು ಹೆಚ್ಚಾಗಿ ಆರೋಗ್ಯ ಜಾಗೃತಿಗಿಂತ ಸೌಂದರ್ಯದ ಮಾನದಂಡಗಳಾಗಿದೆ, ಲೈಂಗಿಕತೆಯ ದ್ಯೋತಕವಾಗಿದೆ. ಆದರೆ ನಾವು ಅವುಗಳ ಆರೈಕೆ, ರಕ್ಷಣೆ […]

ಕಾಂತಾರದಲ್ಲಿ ದೈವಾರಾಧನೆಯ ಅಣಕ; ವಿಷಯ ಪ್ರಸ್ತಾಪ ಮಾಡಿದ್ದಕ್ಕೆ ತೇಜೋವಧೆ- ಸಹನಾ ಕುಂದರ್

ಉಡುಪಿ: ಕಾಂತಾರ ಲೆಜೆಂಡ್ ಚಾಪ್ಟರ್ ನಲ್ಲಿ ಕರಾವಳಿಯ ದೈವಾರಾಧನೆ ನಂಬಿಕೆಯನ್ನು ಅಣಕ ಮಾಡಿ ವಾಣಿಜ್ಯೀಕರಣ ಮಾಡಿದ್ದಾರೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪ ಮಾಡಿದ್ದಕ್ಕೆ ತೇಜೋವಧೆ ಮಾಡುತ್ತಿದ್ದಾರೆ. ತುಳು ಮತ್ತು ಕುಂದಾಪುರ ಕನ್ನಡದ ಭಾಷೆಯ ವಿಚಾರವನ್ನು ಎಳೆದು ತಂದಿದ್ದಾರೆ ಎಂದು ವಾಗ್ಮೀ ವಕೀಲೆ ಸಹನಾ ಕುಂದರ್ ಆರೋಪಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಹನಾ ಕುಂದರ್ ದೂರು ನೀಡಿದ್ದಾರೆ. ನಾನು ಖಾಸಗಿ ವಾಹಿನಿಯಲ್ಲಿ ನಡೆದ ಚರ್ಚೆಯ ಸಂದರ್ಭ ಕುಂದಾಪುರ ಕನ್ನಡಕ್ಕೆ ಧಕ್ಕೆ ಆಗುವಂತಹ ಯಾವುದೇ […]

ಉಡುಪಿ: ಬ್ಯೂಟಿ ಪಾರ್ಲರ್‌ನಲ್ಲಿ ಅಗ್ನಿ ಅವಘಡ; ಲಕ್ಷಾಂತರ ರೂ. ನಷ್ಟ

ಉಡುಪಿ: ಉಡುಪಿ ನ್ಯಾಯಾಲಯದ ಎದುರಿನ ಮಾಂಡವಿ ಕೋರ್ಟ್ ಕಟ್ಟದಲ್ಲಿರುವ ಬ್ಯೂಟಿ ಪಾರ್ಲರ್‌ನಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಬ್ಯೂಟಿ ಪಾರ್ಲರ್ ನಲ್ಲಿದ್ದ ಫರ್ನಿಚರ್, ಸೋಫಾ ಹಾಗೂ ಬ್ಯೂಟಿಷನ್ ಪರಿಕರಗಳು ಬೆಂಕಿಗಾಹುತಿಯಾಗಿದೆ. ಪಾರ್ಲರ್ ಒಳಗೆ ದಟ್ಟಹೊಗೆ ಆವರಿಸಿದ್ದು, ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಸುಟ್ಟು ಕರಕಲಾಗಿದೆ. ಸಮೀಪದಲ್ಲೇ ವಕೀಲ ಕಚೇರಿಗಳಿದ್ದು, ಅಲ್ಲಿಗೂ ಬೆಂಕಿ ಹಬ್ಬುವ ಸಾಧ್ಯತೆ ಇತ್ತು. ಆದರೆ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ, ಬೆಂಕಿ ನಂದಿಸಿ ಸಂಭವನೀಯ […]

ಉಡುಪಿಯ ಪ್ರಸಿದ್ಧ ಖಾಸಗಿ ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ಜನ ಬೇಕಾಗಿದ್ದಾರೆ.

ಉಡುಪಿ: ಉಡುಪಿಯ ಪ್ರಸಿದ್ಧ ಖಾಸಗಿ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಖಾಲಿ ಇರುವ ಹುದ್ದೆಗಳು: 🔹ವಿಡಿಯೋ ಎಡಿಟರ್ (ಕನಿಷ್ಠ 1 ವರ್ಷದ ಅನುಭವ ಹೊಂದಿರಬೇಕು ) 🔹ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ (ಉಡುಪಿ ಮತ್ತು ಮಂಗಳೂರು) 🔹HR ಎಕ್ಸಿಕ್ಯೂಟಿವ್ (ಕನಿಷ್ಠ 3 ವರ್ಷಗಳ ಅನುಭವ ಇರಬೇಕು.) ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ವಾಟ್ಸಪ್ ನಂಬರ್ ಗೆ ಕಳುಹಿಸಿ.8217292880