ಬೈಂದೂರು: ಕೇರಳದ ವ್ಯಕ್ತಿಯ ಕೊಲೆ ಪ್ರಕರಣ; ಆರೋಪಿಯ ಬಂಧನ

ಬೈಂದೂರು: ಯಡ್ತರೆ ಗ್ರಾಮದ ಕೊಸಳ್ಳಿ ಸಮೀಪದ ದೇವರಗದ್ದೆ ಎಂಬಲ್ಲಿ ಕೂಲಿ ಹಣದ ವಿಚಾರವಾಗಿ ವ್ಯಕ್ತಿಯೊಬ್ಬನನ್ನು ಕತ್ತಿ ಯಿಂದ ಕಡಿದು ಕೊಲೆ ಮಾಡಿರುವ ಘಟನೆ ಸೆ.14ರಂದು ನಡೆದಿದೆ. ಕೊಲೆಗೀಡಾದ ವ್ಯಕ್ತಿಯನ್ನು ಕೇರಳದ ಕೋಟಿಯನ್ ಜಿಲ್ಲೆಯ ಕಾನೇರಪಳ್ಳಿ ನಿವಾಸಿ ಬಿನೋ ಪಿಲಿಪ್(45) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಕೇರಳದ ಕೊಲಂ ಜಿಲ್ಲೆಯ ಕೊಟ್ಟರಯೇಕರ್‌ನ ಉದಯ ಕುಮಾರ್(42) ಎಂಬಾತನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ತೂದಳ್ಳಿ ದೇವರಗದ್ದೆಯ ಥೋಮಸ್ ಎಂಬವರ ರಬ್ಬರ್ ತೋಟದಲ್ಲಿ ಬಿನೋ ಪಿಲಿಪ್ ಹಾಗೂ ಉದಯ ಕುಮಾರ್ ಕಳೆದ […]
ಕಮಲಶಿಲೆ: ರಸ್ತೆಗೆ ಅಡ್ಡ ಬಂದ ಕಡವೆಗೆ ಬೈಕ್ ಡಿಕ್ಕಿ; ಸವಾರ ಮೃತ್ಯು, ಸಹಸವಾರ ಗಂಭೀರ

ಉಡುಪಿ: ಚಲಿಸುತ್ತಿದ್ದ ಬೈಕ್ ವೊಂದು ದಿಢೀರ್ ಆಗಿ ರಸ್ತೆಗೆ ಅಡ್ಡ ಬಂದ ಕಡವೆಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಕಮಲಶಿಲೆ ಸಮೀಪ ತಾರೆಕುಡ್ಲುನಲ್ಲಿ ಸಂಭವಿಸಿದೆ.ಮೃತಪಟ್ಟ ಬೈಕ್ ಸವಾರ ನೆಲ್ಲಿಕಟ್ಟೆಯ ಶ್ರೇಯಸ್ ಮೊಗವೀರ (23) ಎಂದು ಗುರುತಿಸಲಾಗಿದೆ.ಗಂಭೀರ ಗಾಯಗೊಂಡ ಸಹಸವಾರ ವಿಶ್ಲೇಶ್ ಎಂದು ತಿಳಿದು ಬಂದಿದೆ. ಇವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಇಬ್ಬರು ಸ್ನೇಹಿತರು ಮಧ್ಯಾಹ್ನ ಕಮಲಶಿಲೆ ದೇವಸ್ಥಾನಕ್ಕೆ ಹೋಗಿದ್ದು ಅಲ್ಲಿಂದ ವಾಪಸು ನೆಲ್ಲಿಕಟ್ಟೆಗೆ ಬರುತ್ತಿದ್ದ ಸಂದರ್ಭ […]
ಕೃಷ್ಣನೆಂದರೆ ಭಕ್ತಿ ಭಾವಗಳ ಸಂಗಮ: ಉಡುಪಿ ಅಷ್ಟಮಿ ವಿಶೇಷ ಬರಹ.

ಮತ್ತೆ ಬಂದಿದೆ ಉಡುಪಿ ಅಷ್ಟಮಿ.ಕೃಷ್ಣನ ಸಂಭ್ರಮದ ಹಬ್ಬ,ಉಡುಪಿಯವರೆಲ್ಲರೂ ಹರುಷದಿಂದ ಕುಣಿಯುವ ಹಬ್ಬ. ಭಾರತದ ಪ್ರಮುಖ ಧಾರ್ಮಿಕ ಹಬ್ಬಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಒಂದು. ಭಗವಾನ್ ಶ್ರೀಕೃಷ್ಣರು ಜನಿಸಿದ ದಿನವೆಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಚಾಂದ್ರಮಾನ ಪ್ರಕಾರ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ಪ್ರಕಾರ ಸಿಂಹಮಾಸದ ರೋಹಿಣಿ ನಕ್ಷತ್ರದಂದು ಜನ್ಮಾಷ್ಟಮಿ ಹಬ್ಬ ಬರುತ್ತದೆ. ಪುರಾಣಗಳ ಪ್ರಕಾರ ಮಥುರೆಯ ಕಾರಾಗೃಹದಲ್ಲಿ ದೇವಕಿ ಮತ್ತು ವಸುದೇವರಿಗೆ ಎಂಟನೇ ಮಗನಾಗಿ ಕೃಷ್ಣ ಜನಿಸಿದರು. ಕಂಸನು ಅವರ ಮಕ್ಕಳನ್ನು ಕೊಲ್ಲುತ್ತಿದ್ದುದರಿಂದ, ವಸುದೇವನು ಕೃಷ್ಣನನ್ನು ಗುಪ್ತವಾಗಿ ಗೋಕುಲಕ್ಕೆ […]