ಉಡುಪಿ: ವೃದ್ಧೆ ನಾಪತ್ತೆ

ಉಡುಪಿ, ಆಗಸ್ಟ್ 08: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಸರಸ್ವತಿ ನಾಯಕ್ (93) ಎಂಬ ವೃದ್ಧೆಯು ಆಗಸ್ಟ್ 5 ರಂದು ಮಧ್ಯಾಹ್ನದ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. ಬಿಳಿ ಮೈಬಣ್ಣ, ದುಂಡು ಮುಖ, ಸಾಧಾರಣ ಶರೀರ ಹೊಂದಿದ್ದು, ಕೊಂಕಣಿ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ಠಾಣೆಯ ನಿರೀಕ್ಷಕರು ಮೊ.ನಂ: 9480805448, ಮಣಿಪಾಲ ಪೊಲೀಸ್ ಠಾಣೆ ದೂ.ಸಂಖ್ಯೆ:0820-2570328 ಹಾಗೂ ಕಂಟ್ರೋಲ್ ರೂಂ ದೂ.ಸಂಖ್ಯೆ: 0820-2526444 […]

ರಾಖಿ ಕಟ್ಟುವ ಮುನ್ನ ಇವೆಲ್ಲಾ ಸಂಗತಿಗಳನ್ನು ತಿಳಿದುಕೊಂಡಿರಿ: ರಾಖಿ ಮಾತ್ರವಲ್ಲ ಸಂಬಂಧವೂ ಗಟ್ಟಿಯಾಗಿರುತ್ತೆ!

ನಮ್ಮ ದೇಶದ ಪ್ರಮುಖ ಆಚರಣೆಯಲ್ಲಿ ರಕ್ಷಾ ಬಂಧನ (Raksha Bandhan)ಹಬ್ಬವೂ ಒಂದು. ತಮ್ಮ ಸಹೋದರರು (Brother) ಬದುಕಿನ ದಾರಿಯುದ್ದಕ್ಕೂ ಜೊತೆಗಿರುತ್ತಾರೆ, ಪ್ರೀತಿ ಕೊಡುತ್ತಾರೆ ಎನ್ನುವ ಕಾರಣಕ್ಕೆ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ಸಲುವಾಗಿ  ಸಹೋದರಿಯರು (Sister) ರಾಖಿ ಕಟ್ಟುತ್ತಾರೆ. ಸಹೋದರನಿಗೆ ರಾಖಿ ಕಟ್ಟಲು ಬಯಸುವ ಸಹೋದರಿಯರು ತಮ್ಮಿಬ್ಬರ ಸಂಬಂಧವೂ ಚೆನ್ನಾಗಿರಲಿ ಎಂದು ಬಯಸುವ ಹೊತ್ತಿದು. ರಾಖಿ ಕಟ್ಟುವ ನಿಜವಾದ ಉದ್ದೇಶವಿದು: ರಕ್ಷಾ ಬಂಧನವು ಸಹೋದರ ಸಹೋದರಿಯರ ನಡುವಿನ ಅಂತ್ಯವಿಲ್ಲದ ಪ್ರೀತಿಯ ಸಂಕೇತ. ತಮ್ಮ ಸಹೋದರ ಜೀವನದಲ್ಲಿ ಯಶಸ್ವಿಯಾಗಲಿ ಮತ್ತು […]

ನಗರಸಭೆ ಇ ಖಾತೆ ಅರ್ಜಿಗಳ ತಕ್ಷಣ ವಿಲೇವಾರಿಗೆ ಆದ್ಯತೆ ವಹಿಸಿ ಅಧಿಕಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಸೂಚನೆ

ಉಡುಪಿ ನಗರಸಭೆಯ ಕಂದಾಯ ವಿಭಾಗದಲ್ಲಿ ಇ ಖಾತೆ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಉಡುಪಿ ನಗರಸಭೆಯ ಸಭಾಂಗಣದಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅಧಿಕಾರಿಗಳ ಸಭೆ ನಡೆಸಿ ಹಲವು ತಿಂಗಳಿನಿಂದ ಬಾಕಿ ಇರುವ ಖಾತೆ ಕಡತಗಳನ್ನು ತಕ್ಷಣ ವಿಲೇವಾರಿ ಮಾಡಿ ಇ ಖಾತೆ ನೀಡಲು ಸೂಚನೆ ನೀಡಿದರು. ನಗರಸಭೆಯಲ್ಲಿ ಸೆಪ್ಟಂಬರ್ ತಿಂಗಳಿನಿಂದ ಪ್ರತಿ ಮಂಗಳವಾರ ಇ ಖಾತೆ ವಿತರಣೆಗೆ ನಿಗದಿ ಮಾಡಬೇಕು. ಕಂದಾಯ ವಿಭಾಗದ ಸೇವೆಗಳನ್ನು ಸಾರ್ವಜನಿಕರಿಗೆ ತಕ್ಷಣ ಒದಗಿಸಲು ಕ್ರಮ […]

ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವ ದುಷ್ಟರ ವಿರುದ್ಧ ಧರ್ಮ ರಕ್ಷಣೆಯ ಪಾಂಚಜನ್ಯ ಮೊಳಗಿಸೋಣ: ಶ್ರೀನಿಧಿ ಹೆಗ್ಡೆ

ಶ್ರೀ ಕ್ಷೇತ್ರ ಧರ್ಮಸ್ಥಳ – ಇದು ಕೇವಲ ಒಂದು ಧಾರ್ಮಿಕ ಸ್ಥಳವಲ್ಲ. ಇದು ನಮ್ಮ ನಾಡಿನ ನಂಬಿಕೆಯ ಮಡಿಲು, ಭಕ್ತಿಯ ಶುದ್ಧ ರೂಪ, ಸಹಸ್ರಾರು ಕುಟುಂಬಗಳಿಗೆ ಬೆಳಕಾಗಿರುವ ಜೀವಂತ ಧಾರ್ಮಿಕ ಕ್ಷೇತ್ರ. ದೇವತಾ ಸಾನ್ನಿಧ್ಯದಲ್ಲಿ ಈ ಕ್ಷೇತ್ರವು ಸಾವಿರಾರು ಸಮಾಜಮುಖಿ ಯೋಜನೆಗಳ ಮೂಲಕ ಪ್ರಜ್ವಲಿತವಾಗಿದ್ದು, ಸಾಮಾಜಿಕ ಬದಲಾವಣೆಗೆ ಮಾದರಿಯಾಗಿ ನಿಂತಿದೆ. ಇಂತಹ ಪುಣ್ಯಭೂಮಿಯ ವಿರುದ್ಧ ಇತ್ತೀಚೆಗೆ ಕೆಲವರು, ಧಾರ್ಮಿಕ ಶ್ರದ್ಧೆಯ ವಿರೋಧಿಗಳು ಹಾಗೂ ನಿರಾಧಾರ ನಿಲುವು ಹೊಂದಿರುವವರು, ಧರ್ಮಸ್ಥಳದ ಹೆಸರಿನಲ್ಲಿ ಸುಳ್ಳುಗಳ ಕಂತೆಯೊಂದಿಗೆ ಮತಿ ವಿಕಲ್ಪಗೊಂಡವರಂತೆ ಅಪಪ್ರಚಾರ […]

ಬಂದಳು ನೋಡಿ ಮಹಾರಾಣಿ ಕನಕವತಿ “ಕಾಂತಾರ ಚಾಪ್ಟರ್1”ನ ನಾಯಕಿಯ ಫಸ್ಟ್ ಲುಕ್ ನೋಡಿ ಮೋಹಿತರಾದ ಪ್ರೇಕ್ಷಕರು!

ಕೆಲವು ದಿನಗಳಿಂದ ಭಾರೀ ಕೂತೂಹಲ ಕೆರಳಿಸಿದ್ದ “ಕಾಂತಾರ ಚಾಪ್ಟರ್ 1” ಚಿತ್ರದ ನಾಯಕಿ ಯಾರು ಎನ್ನುವ ಪ್ರಶ್ನೆಗೆ ಈಗ ತೆರೆ ಬಿದ್ದಿದ್ದು ವರಮಹಾಲಕ್ಷ್ಮೀ ಹಬ್ಬದ ದಿನವಾದ ಶುಕ್ರವಾರವೇ ಕಾಂತಾರ ಚಾಪ್ಟರ್ 1 ಚಿತ್ರ ನಿರ್ಮಿಸುತ್ತಿರೋ ಹೊಂಬಾಳೆ ಸಂಸ್ಥೆ ಕಾಂತಾರ ಚಾಪ್ಟರ್ 1 ನಾಯಕಿಯ ಫಸ್ಟ್ ಲುಕ್ ರಿಲೀಸ್ ಮಾಡಿದೆ. ಇಷ್ಟು ದಿನ ರುಕ್ಮಿಣಿ ವಸಂತ್ ನಾಯಕಿಯಂತೆ, ಎನ್ನುವ ಗಾಳಿ ಸುದ್ದಿ ಈ ಮೂಲಕ ನಿಜವಾಗಿದೆ, ಅಂದ್ರೆ  ರುಕ್ಮಿಣಿ ವಸಂತ್ ಅವರೇ ನಾಯಕಿ ಎನ್ನುವುದು ಈಗ ಫೈನಲ್ ಆಗಿದೆ. […]