ಉಡುಪಿ ನಗರದಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ ಬೀಳುತ್ತೆ ದಂಡ.!

ಉಡುಪಿ: ನಗರದ ವಿವಿಧೆಡೆ ಸುಗಮ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ನೋ ಪಾರ್ಕಿಂಗ್ ಮಾಡಲಾಗಿದ್ದು, ಆದರೂ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ ಪೊಲೀಸರು ಲಾಕ್ ಹಾಕಿ ದಂಡ ವಸೂಲು ಮಾಡಲು ಮುಂದಾಗಿದ್ದಾರೆ. ಈಗಾಗಲೇ ಸರ್ವಿಸ್ ಬಸ್ ತಂಗುದಾಣ, ಸಿಟಿಬಸ್ ತಂಗುದಾಣದ ಬಳಿ ಹಲವಾರು ವಾಹನಗಳಿಗೆ ಸೋಮವಾರ ಲಾಕ್ ಅಳವಡಿಕೆ ಮಾಡಿ ಬಿಸಿ ಮುಟ್ಟಿಸಲಾಗಿದೆ. ನಿಗದಿಪಡಿಸಿದ ಪಾರ್ಕಿಂಗ್‌ನಲ್ಲಿ ಸ್ಥಳಾವಕಾಶ ಇದ್ದರೂ ಎಲ್ಲೆಂದರಲ್ಲಿ ನಿಲ್ಲಿಸುವ ಘಟನೆಗಳು ನಡೆಯುತ್ತಿವೆ. ಅಲ್ಲದೆ ಬೆಳಗ್ಗಿನಿಂದ ಸಂಜೆಯವರೆಗೂ ವಾಹನಗಳನ್ನು ನಿಲ್ಲಿಸಿ ಹೋಗುವುದು ಸುಗಮ ಸಂಚಾರಕ್ಕೆ ಅನುಕೂಲವಾಗುವ ಕಾರಣಕ್ಕೆ ಲಾಕ್ […]

ಉಡುಪಿ: ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಧರಣಿ

ಉಡುಪಿ: ಶ್ರೀಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಹಾಗೂ ಹೆಗ್ಗಡೆ ಕುಟುಂಬಕ್ಕೆ ಕಳಂಕ ತರಲು ಒಳಸಂಚು ನಡೆಸುತ್ತಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆಯ‌ ನೇತೃತ್ವದಲ್ಲಿ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಶ್ರೀ ಧರ್ಮಸ್ಥಳದ ಭಕ್ತಾಭಿಮಾನಿಗಳು ಧರ್ಮಸ್ಥಳ ಕ್ಷೇತ್ರ ಹಾಗೂ ಹೆಗ್ಗಡೆ ಕುಟುಂಬ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಉಡುಪಿ ಶಾಸಕ ಯಶ್ ಪಾಲ್ […]

ಉಡುಪಿ: ಆ.10ರಂದು ಶಾಂಭವಿ 222 ಸಂಭ್ರಮ

ಉಡುಪಿ:ತುಳು ಹಾಗೂ ಕನ್ನಡ ರಂಗಭೂಮಿಗೆ ಕಳೆದ 12 ವರ್ಷಗಳಿಂದ ದಿ.ಅಲೆವೂರು ಶೇಖರ್ ಪೂಜಾರಿಯವರ ಸಾರಥ್ಯದಲ್ಲಿ ಅದ್ಭುತ ಕಲಾಕಾಣಿಕೆಗಳನ್ನು ನೀಡುತ್ತಾ ಬಂದಿರುವ ಕಲಾತಂಡ ಅಭಿನಯ ಕಲಾವಿದರು, ಉಡುಪಿ. ಪ್ರಸ್ತುತ ಬಾಲಕೃಷ್ಣ ಶೆಟ್ಟಿ ನಿಟ್ಟೂರು ಇವರ ಸಾರಥ್ಯದಲ್ಲಿ, ಯತೀಶ್ ಕುಮಾರ್ ಅಲೆವೂರು ಇವರ ಗೌರವ ಸಲಹೆಯೊಂದಿಗೆ, ಉಮೇಶ್ ಅಲೆವೂರು ಇವರ ಅಧ್ಯಕ್ಷತೆಯಲ್ಲಿ, ತುಳುನಾಡ ರತ್ನ ದಿನೇಶ್ ಅತ್ತಾವರ್ ಇವರ ದಕ್ಷ ನಿರ್ದೇಶನದಲ್ಲಿ ಮೂಡಿಬಂದ ಈ ತಂಡದ ಈ ಬಾರಿಯ ಸೂಪರ್ ಹಿಟ್ ನಾಟಕ “ಶಾಂಭವಿ” ಇದರ 222 ನೇ ಪ್ರದರ್ಶನವು […]

ಹಬ್ಬದ ಸೀಸನ್ ಶುರು: ಬೆಂಗಳೂರಿನಿಂದ ವಿಶೇಷ ರೈಲುಗಳ ಓಡಾಟ!

ಬೆಂಗಳೂರು: ಸ್ವಾತಂತ್ರ್ಯೋತ್ಸವ ಮತ್ತು ಗಣೇಶ ಚತುರ್ಥಿಯ ಪ್ರಯುಕ್ತ ಯಶವಂತಪುರದಿಂದ ಮಡಗಾಂವ್‌, ಎಸ್‌ಎಂವಿಟಿಯಿಂದ ಬೆಳಗಾವಿಗೆ ವಿಶೇಷ ರೈಲುಗಳ ಸಂಚಾರ ಆರಂಭಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.ಯಶವಂತಪುರ–ಮಡಗಾಂವ್-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಆ.14ರಂದು ರಾತ್ರಿ 11.55ಕ್ಕೆ ಯಶವಂತಪುರದಿಂದ ಹೊರಡಲಿದೆ. ಆ.15ರಂದು ಸಂಜೆ 6.50ಕ್ಕೆ ಮಡಗಾಂವ್‌ ತಲುಪಲಿದೆ. ಆ.17ರಂದು ರಾತ್ರಿ 10.15ಕ್ಕೆ ಮಡಗಾಂವ್‌ನಿಂದ ಹೊರಟು ಮರುದಿನ ಸಂಜೆ 4.30ಕ್ಕೆ ಯಶವಂತಪುರ ತಲುಪಲಿದೆ. ಚಿಕ್ಕಬಾಣಾವರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, […]

ಯೆಲ್ಲೋ ಮೆಟ್ರೋ ಲೈನ್ ಲೋಕಾರ್ಪಣೆಗೆ ಸಕಲ ಸಿದ್ಧತೆ: ಪ್ರಧಾನಿ ಉದ್ಘಾಟನೆ

ಬೆಂಗಳೂರು: ಬೆಂಗಳೂರಿನ ಹಳದಿ (ಯೆಲ್ಲೋ) ಮೆಟ್ರೋ ಲೈನ್ ಅನ್ನು ಆ.10ರಂದು ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯೆಲ್ಲೋ ಲೈನ್ ಕನಿಷ್ಠ 8 ಲಕ್ಷ ಜನರಿಗೆ ಅನುಕೂಲ ಆಗಲಿದೆ. ಪ್ರಧಾನಿಯವರು ಬೆಳಗ್ಗೆ ಬೆಂಗಳೂರಿಗೆ ಬರಲಿದ್ದು, ಹೆಲಿಕಾಪ್ಟರ್ ಮೂಲಕ ಮೇಖ್ರಿ ವೃತ್ತದ ಬಳಿ ಇರುವ ಮಿಲಿಟರಿ ಮೈದಾನಕ್ಕೆ ಆಗಮಿಸುವರು. ಬಳಿಕ ಮೇಖ್ರಿ ವೃತ್ತ, […]