ಬ್ರಹ್ಮಾವರ: ಅಂದರ್ ಬಾಹರ್ ಅಡ್ಡೆಗೆ ದಾಳಿ; ಆರು ಮಂದಿ ಪೊಲೀಸರ ವಶಕ್ಕೆ

ಉಡುಪಿ: ಬ್ರಹ್ಮಾವರ ತಾಲೂಕಿನ ಅಚ್ಲಾಡಿ ಗ್ರಾಮದ ಗರಿಕೆಮಠದ ಮನೆಯೊಂದರ ಬಳಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಗರಿಕೆಮಠ ನಿವಾಸಿ ರಾಜು ಶೆಟ್ಟಿ (71), ಮೊಗೆಬೆಟ್ಟು ನಿವಾಸಿ ರಾಜು ಶೆಟ್ಟಿ(57), ಬಾರ್ಕೂರು ರಂಗನಕೆರೆ ನಿವಾಸಿ ರಮಾನಂದ ಶೆಟ್ಟಿ (61), ವಾರಂಬಳ್ಳಿ ಗ್ರಾಮದ ನಿವಾಸಿ ಸಂತೋಷ(56), ಅಚ್ಲಾಡಿ ಗ್ರಾಮದ ನಿವಾಸಿ ರಾಜೀವ ಶೆಟ್ಟಿ(65) ಹಾಗೂ ಪಡುಮುಂಡು ನಿವಾಸಿ ಕೃಷ್ಣ(40) ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಇವರು ಗರಿಕೆಮಠದ ರಾಜು ಶೆಟ್ಟಿ ಎಂಬವರ ಮನೆಯ […]

ಸಣ್ಣ ವ್ಯಾಪಾರಿಗಳಿಂದ ಯುಪಿಐ ಪೇಮೆಂಟ್ ನಿರಾಕರಣೆ, ಗ್ರಾಹಕರಿಂದ ಮತ್ತೆ ನಗದಿಗೆ ಮೊರೆ.!

ಬೆಂಗಳೂರು: ಸರಕು ಪೂರೈಕೆದಾರರ ಸಮಗ್ರ ವಹಿವಾಟು ವಾರ್ಷಿಕ 40 ಲಕ್ಷ ರೂ. ಮೀರಿದ್ರೆ ಜಿಎಸ್‌ಟಿ ನೋಂದಣಿ ಕಡ್ಡಾಯವಾಗಿದ್ದು ಈ ಹಿನ್ನಲೆಯಲ್ಲಿ ಸಣ್ಣ ಸಣ್ಣ ವರ್ತಕರಿಗೆ ನೋಟಿಸ್ ಬಂದಿದ್ದು ಇದೀಗ ಸಣ್ಣ ವ್ಯಾಪಾರಿಗಳಿಗೆ ಆತಂಕ ಸೃಷ್ಟಿಯಾಗಿದೆ. ಇದರ ಪರಿಣಾಮವಾಗಿ ಇದೀಗ ವರ್ತಕರು ತಮ್ಮ ಅಂಗಡಿಯ ಯುಪಿಐ ಪೇಮೆಂಟ್ ಅನ್ನು ರದ್ದುಗೊಳಿಸುತ್ತಿದ್ದಾರೆ. ಗ್ರಾಹಕರಿಂದ ಮತ್ತೆ ನಗದಿಗೆ ಮೊರೆ:ಬೆಂಗಳೂರಿನ ಬಹುತೇಕ ಸಣ್ಣ ಪುಟ್ಟ ಅಂಗಡಿ ಹೊಟೇಲ್ ಗಳಲ್ಲಿ ಯುಪಿಐ ಪೇಮೆಂಟ್ ನಿರಾಕರಿಸಲು ಆರಂಭಿಸಿದ್ದು ಗ್ರಾಹಕರಿಗೆ ನಗದು ಕೊಟ್ಟು ಖರೀದಿಸಲು ಹೇಳುತ್ತಿದ್ದಾರೆ. ಇದರಿಂದಾಗಿ […]

ಧರ್ಮಸ್ಥಳ: ಪೊಲೀಸ್ ತನಿಖೆಯ ಬಗ್ಗೆ ಸುಪ್ರೀಂ ಕೋರ್ಟ್ ವಕೀಲರ ಅಸಮಾಧಾನ

ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಸರಣಿ ಹತ್ಯೆಗಳು ಮತ್ತು ನೂರಾರು ಮೃತದೇಹಗಳನ್ನು ಹೂತಿರುವ ಪ್ರಕರಣದ ಪೊಲೀಸ್ ತನಿಖೆಯ ಕುರಿತು ಸುಪ್ರೀಂ ಕೋರ್ಟ್ ವಕೀಲ ಕೆ.ವಿ. ಧನಂಜಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತನಿಖಾಧಿಕಾರಿಯ ಅನುಭವದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿರುವ ಅವರು, ತನಿಖೆಗೆ ಸೂಕ್ತ ಮತ್ತು ಸಮರ್ಥ ಅಧಿಕಾರಿಯನ್ನು ನೇಮಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಧರ್ಮಸ್ಥಳದಲ್ಲಿ ನಡೆದಿರುವ ಈ ಘಟನೆಯು “ಅಪರೂಪದಲ್ಲಿ ಅಪರೂಪದ” ಪ್ರಕರಣವಾಗಿದ್ದು, ಕಳೆದ 100 ವರ್ಷಗಳಲ್ಲಿ ನ್ಯಾಯಾಲಯದ ಗಮನಕ್ಕೆ ಇಂತಹ ಘಟನೆ ಬಂದಿರಲಿಕ್ಕಿಲ್ಲ ಎಂದು ಕೆ.ವಿ. ಧನಂಜಯ […]

ಧರ್ಮಸ್ಥಳ: ಅಗತ್ಯ ಬಿದ್ದರೆ ಉನ್ನತ ತನಿಖೆ ನಡೆಸಲಾಗುವುದು; ಗೃಹ ಸಚಿವ ಜಿ. ಪರಮೇಶ್ವರ್

ಬೆಂಗಳೂರು : ʼಧರ್ಮಸ್ಥಳʼ ದೂರಿಗೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆಗೆ ವಕೀಲರು ಆಗ್ರಹಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ.ಪರಮೇಶ್ವರ್‌ ಅವರು,ಅಗತ್ಯ ಬಿದ್ದರೆ ಉನ್ನತ ತನಿಖೆ ನಡೆಸಲಾಗುವುದುʼ ಎಂದು ಸ್ಪಷ್ಟಪಡಿಸಿದ್ದಾರೆ. ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ದೂರುದಾರನ ದೂರಿಗೆ ಸಂಬಂಧಿಸಿದಂತೆ ಈಗಾಗಲೇ ಪ್ರಾಥಮಿಕ ತನಿಖೆ ಆರಂಭವಾಗಿದೆ. ಅಲ್ಲದೆ, ಈ ವಿಚಾರ ಸಂಬಂಧ ಹೆಚ್ಚಿನ ತನಿಖೆಯ ಆಗತ್ಯವಿದ್ದರೆ ಸರಕಾರ ತೀರ್ಮಾನ ತೆಗೆದುಕೊಳ್ಳುತ್ತದೆ. ಆದರೆ, ಪ್ರಾಥಮಿಕ ತನಿಖೆ ನಡೆಯುತ್ತಿರುವ ಮಧ್ಯೆಯೇ ಎಸ್‌ಐಟಿ ತನಿಖೆಗೆ ಒತ್ತಾಯಿಸಿದರೆ, ಪೊಲೀಸ್‌ ಇಲಾಖೆ ಇರುವುದೇಕೆ? ಎಂದು […]

ಬ್ರಹ್ಮಾವರ ತಾಲೂಕು ವಲಯದ ಸೌಹಾರ್ದ ಸಹಕಾರಿ ಸಂಘಗಳ ವಾರ್ಷಿಕ ಅವಲೋಕನ ಸಭೆ.

ಬ್ರಹ್ಮಾವರ: ಬ್ರಹ್ಮಾವರ ತಾಲೂಕು ವಲಯದ ಸೌಹಾರ್ದ ಸಹಕಾರಿ ಸಂಘಗಳ ವಾರ್ಷಿಕ ಅವಲೋಕನ ಸಭೆಯು ಜು.18 ರಂದು ಜೈ ಗಣೇಶ್ ಸೌಹಾರ್ದ ಸಹಕಾರಿ ಸಂಘದ ನೂತನ ಕಟ್ಟಡ”ಸೌಹಾರ್ದ ಸಿರಿ” ಯಲ್ಲಿ ನಡೆಯಿತು. ಸಂಸ್ಥೆಯ ಅಧ್ಯಕ್ಷ ಅಶೋಕ್ ಪ್ರಭು ಸಾಹೇಬರಕಟ್ಟೆ, ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಇದರ ನಿರ್ದೇಶಕ ಮಂಜುನಾಥ ಎಸ್ ಕೆ, ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ, ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ ಬಿ ಎಸ್, ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ಮುಖ್ಯ […]