ಬ್ರಹ್ಮಾವರ: ಅಂದರ್ ಬಾಹರ್ ಅಡ್ಡೆಗೆ ದಾಳಿ; ಆರು ಮಂದಿ ಪೊಲೀಸರ ವಶಕ್ಕೆ

ಉಡುಪಿ: ಬ್ರಹ್ಮಾವರ ತಾಲೂಕಿನ ಅಚ್ಲಾಡಿ ಗ್ರಾಮದ ಗರಿಕೆಮಠದ ಮನೆಯೊಂದರ ಬಳಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಗರಿಕೆಮಠ ನಿವಾಸಿ ರಾಜು ಶೆಟ್ಟಿ (71), ಮೊಗೆಬೆಟ್ಟು ನಿವಾಸಿ ರಾಜು ಶೆಟ್ಟಿ(57), ಬಾರ್ಕೂರು ರಂಗನಕೆರೆ ನಿವಾಸಿ ರಮಾನಂದ ಶೆಟ್ಟಿ (61), ವಾರಂಬಳ್ಳಿ ಗ್ರಾಮದ ನಿವಾಸಿ ಸಂತೋಷ(56), ಅಚ್ಲಾಡಿ ಗ್ರಾಮದ ನಿವಾಸಿ ರಾಜೀವ ಶೆಟ್ಟಿ(65) ಹಾಗೂ ಪಡುಮುಂಡು ನಿವಾಸಿ ಕೃಷ್ಣ(40) ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಇವರು ಗರಿಕೆಮಠದ ರಾಜು ಶೆಟ್ಟಿ ಎಂಬವರ ಮನೆಯ ಬಳಿ ಟೇಬಲ್ ಸುತ್ತ ಪ್ಲಾಸ್ಟಿಕ್ ಚೆರ್ ಹಾಕಿ ಅದರ ಸುತ್ತಲೂ ಕುಳಿತು ಅಂದರ್‌ ಬಾಹರ್‌ ಇಸ್ಪೀಟು ಜುಗಾರಿ ಆಟದಲ್ಲಿ ನಿರತರಾಗಿದ್ದರು‌.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದು ಹಾಗೂ ಇಸ್ಪೀಟು ಜುಗಾರಿ ಆಟಕ್ಕೆ ಬಳಸಿದ ಒಟ್ಟು ನಗದು 15450, ಕಾರು-3, ಸ್ಕೂಟರ್‌ -2, ರೌಂಡ್‌ ಟೇಬಲ್‌ -1, ಪ್ಲಾಸ್ಟೀಕ್‌ ಚೇರ ಗಳು-6, ಇಸ್ಪೀಟ್‌ ಎಲೆಗಳು-52 ನ್ನು ಸ್ವಾಧಿನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.