ಅಹಮದಾಬಾದ್ ವಿಮಾನ ದುರಂತ ಅತ್ಯಂತ ಬೇಸರದ ಸಂಗತಿ.

ಗುಜರಾತ್ ನ ಅಹಮದಾಬಾದಿನಿಂದ ಲಂಡನ್ನಿಗೆ ಹೊರಟ್ಟಿದ ವಿಮಾನ ಪತನಗೊಂಡು 241 ಪ್ರಯಾಣಿಕರು ಹಾಗೂ ದುರಂತಕ್ಕೀಡಾದ ವಿಮಾನ ಮೇಘಾನಿ ನಗರದ ವೈದ್ಯಕೀಯ ಕಾಲೇಜಿನ ವಸತಿ ನಿಲಯಕ್ಕೆ ಬಡಿದಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿರುವುದು ಅತ್ಯಂತ ನೋವಿನ ವಿಚಾರವಾಗಿದೆ.ಈ ದುರ್ಘಟನೆಯಲ್ಲಿ ಮೃತ ಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ.ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪರವಾಗಿ ಪ್ರಾರ್ಥಿಸುವುದಾಗಿ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದರು. ವಿಮಾನ ಟೇಕ್ ಆಫ್ ಆದ ಕೆಲವೇ […]
ಕುಂದಾಪುರ: ಹಿರಿಯ ಸ್ತ್ರೀವೇಷಧಾರಿ ಕೋಡಿ ಕುಷ್ಠ ಗಾಣಿಗ ನಿಧನ.

ಕುಂದಾಪುರ (ಉಡುಪಿ): ಯಕ್ಷಗಾನದ ತೆಂಕು, ಬಡಗು ತಿಟ್ಟುಗಳ ಪ್ರಸಿದ್ಧ ಸ್ತ್ರೀವೇಷಧಾರಿ ಕೋಡಿ ಕೃಷ್ಣ (ಕುಷ್ಟ) ಗಾಣಿಗ (78) ಅವರು ತಾಲ್ಲೂಕಿನ ಕೋಡಿಯಲ್ಲಿರುವ ಸ್ವಗೃಹದಲ್ಲಿ ಗುರುವಾರ ನಿಧನರಾದರು. ಅವರಿಗೆ ಪತ್ನಿ, ಮೂವರು ಪುತ್ರರು ಹಾಗೂ ಪುತ್ರಿ ಇದ್ದಾರೆ. ಕೋಡಿ ಕುಷ್ಟ ಗಾಣಿಗ ಅವರು ಅಮೃತೇಶ್ವರೀ, ಮಾರಣಕಟ್ಟೆ, ಕಲಾವಿಹಾರ, ರಾಜರಾಜೇಶ್ವರಿ ಮೇಳ ಹಾಗೂ ಕಟೀಲು ಮೇಳದಲ್ಲಿ ಮೂರುವರೆ ದಶಕಗಳ ಕಾಲ ತಿರುಗಾಟವನ್ನು ಮಾಡಿದ್ದರು. ಹೆರಂಜಾಲು ವೆಂಕಟರಮಣ ಗಾಣಿಗರಿಂದ ಬಡಗುತಿಟ್ಟಿನ ಹೆಜ್ಜೆಗಾರಿಕೆಯನ್ನು ಹಾಗೂ ಪಡ್ರೆ ಚಂದು ಅವರಿಂದ ತೆಂಕುತಿಟ್ಟಿನ ನಾಟ್ಯಭ್ಯಾಸವನ್ನು ಕಲಿತಿದ್ದ […]
ಬ್ರಹ್ಮಾವರದಲ್ಲಿ ಸೈಟ್ ಎಂಜಿನಿಯರ್ ಹುದ್ದೆಗೆ ನೇಮಕಾತಿ

ಉಡುಪಿ:ಬ್ರಹ್ಮಾವರದಲ್ಲಿ ಸೈಟ್ ಎಂಜಿನಿಯರ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಪ್ರಾಜೆಕ್ಟ್: ವಸತಿ ಕಟ್ಟಡಅನುಭವ: ಬಹುಮಹಡಿ ಕಟ್ಟಡ ಯೋಜನೆಯಲ್ಲಿ ಕನಿಷ್ಠ 2-5 ವರ್ಷಗಳ ಅನುಭವ ವಿರಬೇಕು ಹಾಗೂ ಸೈಟ್ ಮೇಲ್ವಿಚಾರಣೆ ಕಾರ್ಯಗತಗೊಳಿಸುವಿಕೆ ಮತ್ತು ಸಮನ್ವಯದ ಬಗ್ಗೆ ತಿಳಿದಿರಬೇಕು. ಜವಾಬ್ದಾರಿಗಳು: ▪️ಸೈಟ್ ಚಟುವಟಿಕೆಗಳ ದೈನಂದಿನ ಮೇಲ್ವಿಚಾರಣೆ. ▪️ಗುತ್ತಿಗೆದಾರರು, ಮಾರಾಟಗಾರರು ಮತ್ತು ಕಾರ್ಮಿಕ ತಂಡಗಳೊಂದಿಗೆ ಸಮನ್ವಯದಿಂದಿರಬೇಕು. ▪️ರೇಖಾಚಿತ್ರಗಳ ಪ್ರಕಾರ ಸಕಾಲಿಕ ಪ್ರಗತಿ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಬೇಕು. ▪ ಸೈಟ್ ನ ದಾಖಲೆಗಳು ಮತ್ತು ದೈನಂದಿನ ಪ್ರಗತಿಯ ವರದಿಗಳನ್ನು ನಿರ್ವಹಣೆ ಮಾಡಬೇಕು. ▪️ಸೈಟ್ ಅಳತೆಗಳು, […]
“ಯಶೋ ಮಾಧ್ಯಮ-2025” ಪ್ರಶಸ್ತಿಗೆ ಕಿರಣ್ ಮಂಜನಬೈಲು ಆಯ್ಕೆ

ಉಡುಪಿ: ಬೆಂಗಳೂರಿನ ಸ್ಪಂದನಾ ಸೇವಾ ಸಂಸ್ಥೆಯಿಂದ ಉಡುಪಿ ಜಿಲ್ಲೆಯ ಪತ್ರಕರ್ತರ ಸಾಧನೆ ಗುರುತಿಸಿ ಕೊಡಲ್ಪಡುವ “ಯಶೋ ಮಾಧ್ಯಮ- 2025” ಪ್ರಶಸ್ತಿಗೆ ಉಡುಪಿಯ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರರಾದ ಕಿರಣ್ ಮಂಜನಬೈಲು ಅವರು ಆಯ್ಕೆಯಾಗಿದ್ದಾರೆ. ಜೂ.14 ರಂದು ಬೆಳಿಗ್ಗೆ 10 ಗಂಟೆಗೆ ಕಲ್ಯಾಣಪುರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೀಡುವ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಕ್ರಷರ್ ಮತ್ತು ಕ್ವಾರಿ […]
ಅಹಮದಾಬಾದ್ ವಿಮಾನ ದುರಂತ: 10 ನಿಮಿಷ ತಡವಾಗಿ ಬಂದು ಪ್ರಾಣ ಉಳಿಸಿಕೊಂಡ ಮಹಿಳೆ.!

ಅಹಮದಾಬಾದ್: ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನದಲ್ಲಿ ಮಹಿಳೆಯೊಬ್ಬರು ಪಾರಾಗಿದ್ದು ಅಚ್ಚರಿ ಮೂಡಿಸಿದೆ. ಭೂಮಿ ಚೌಹಾಣ್ ಅವರು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದರು. ಆದರೆ, ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರಿಂದ ಅಹಮದಾಬಾದ್ ವಿಮಾನ ನಿಲ್ದಾಣವನ್ನು 10 ನಿಮಿಷ ತಡವಾಗಿ ತಲುಪಿದ್ದರು. ಇದರಿಂದ ಅವರಿಗೆ ವಿಮಾನ ಏರಲು ಅನುಮತಿ ನಿರಾಕರಿಸಲಾಗಿತ್ತು. ಇದಾದ ಕೆಲವೇ ನಿಮಿಷಗಳಲ್ಲಿ ವಿಮಾನ ಅಪಘಾತದ ಸುದ್ದಿ ಬಂದಿದ್ದು, ಮಹಿಳೆ, ಮಾಧ್ಯಮಗಳ ಮುಂದೆ ಗದ್ಗದಿತರಾಗಿದ್ದಾರೆ. ಏರ್ಪೋರ್ಟ್ಗೆ 10 ನಿಮಿಷ ತಡ:ಈ ವಿಚಾರ ಕೇಳಿ ನನಗೆ ಭಯವಾಗಿ ಕೈಕಾಲುಗಳು ನಡುಗಲು ಪ್ರಾರಂಭಿಸಿದವು. ನಾನು […]