ಉಡುಪಿ: ಮೇ 10ರಿಂದ ಪಿಪಿಸಿ ಕಾಲೇಜಿನಲ್ಲಿ “ಇಂಡೋ- ಕೀನ್ಯಾ ಅಂತಾರಾಷ್ಟ್ರೀಯ ಸಮ್ಮೇಳನ”

ಉಡುಪಿ:ಉಡುಪಿಯ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಪಿಐಎಂ)ನಲ್ಲಿ ಆಫ್ರಿಕಾ ನೈರೋಬಿಯ ದಿ ಮ್ಯಾನೇಜ್‌ ಮೆಂಟ್ ಯುನಿವರ್ಸಿಟಿ ಆಫ್ ಆಫ್ರಿಕಾ (ಎಂಯುಎ) ಸಹಯೋಗದಲ್ಲಿ ವ್ಯವಸ್ಥಾಪನ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಪ್ರಗತಿಗಳು ವಿಷಯದ ಮೇಲೆ `ಇಂಡೋ – ಕೀನ್ಯಾ ಸಮ್ಮೇಳನ’ ಮೇ 10 ಮತ್ತು 11 ರಂದು ನಡೆಯಲಿದೆ. ಮೇ 10ರಂದು ಸಮ್ಮೇಳನವನ್ನು ಪಿಐಎಂನ ಕಾರ್ಯದರ್ಶಿ ಡಾ.ಚಂದ್ರಶೇಖರ್ ಜಿ.ಸಿ. ಉದ್ಘಾಟಿಸುವರು. ಎಂಯುಎ ವಿವಿ ಕುಲಪತಿ ಡಾ.ವಾಷಿಂಗ್ಟನ್ ಒಕೆಯೋ ಉಪ ಕುಲಪತಿ ಡಾ.ಜಾನ್ ಚೆಲುಗಟ್,ಡೀನ್ ಡಾ.ಜಸ್ಟರ್ ನ್ಯಾಗ್, ಪಿಐಎಂ ಉಡುಪಿಯ ಪ್ರೊ.ಜೆ. […]

ಉಡುಪಿ:ಮೇ 9 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ

ಉಡುಪಿ: ಉಡುಪಿ ನಗರಸಭಾ ಅಧೀನದ ಬಜೆ ಶುದ್ಧೀಕರಣ ಘಟಕದಲ್ಲಿರುವ ಕ್ಲಿಯರ್ ವಾಟರ್ ಸಂಪ್ ಅನ್ನುಸ್ವಚ್ಛಗೊಳಿಸುವ ಕಾಮಗಾರಿಯನ್ನು ಮೇ 9 ರಂದು ಹಮ್ಮಿಕೊಂಡಿರುವ ಹಿನ್ನೆಲೆ, ಬಜೆಯಿಂದ ಉಡುಪಿ ನಗರಕ್ಕೆ ನೀರು ಸರಬರಾಜನ್ನು ಸ್ಥಗಿತಗೊಳಿಸಬೇಕಾಗಿರುವುದರಿಂದ, ಸದ್ರಿ ದಿನದಂದು ಉಡುಪಿ ನಗರಸಭಾ ವ್ಯಾಪ್ತಿಗೆ ಕುಡಿಯುವ ನೀರಿನ ಸರಬರಾಜು ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಉಡುಪಿ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

ಉಡುಪಿ:ವಿಕಲಚೇತನರಿಗೆ ಸಾಧನ ಸಲಕರಣೆ ಸೌಲಭ್ಯ : ಅರ್ಜಿ ಆಹ್ವಾನ

ಉಡುಪಿ: ಉಡುಪಿ ನಗರಸಭೆಯ 2022-23 ನೇ ಸಾಲಿನ ಎಸ್.ಎಫ್.ಸಿ. ಮುಕ್ತನಿಧಿಯ ಶೇ. 5 ರ ವಿಕಲಚೇತನರಕಲ್ಯಾಣ ಕಾರ್ಯಕ್ರಮದ ಅನುದಾನದಡಿ ಸಾಧನ ಸಲಕರಣೆಗಳನ್ನು ಪಡೆಯಲು ಅರ್ಹ ವಿಕಲಚೇತನ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ದೈಹಿಕ ವಿಕಲತೆಯ ಬಗ್ಗೆ ಜಿಲ್ಲಾ ಸರ್ಜನ್‌ರಿಂದ ಪಡೆದ ಪ್ರಮಾಣ ಪತ್ರ, ಆದಾಯ ದೃಢಪತ್ರ, ಪ್ರಸಕ್ತ ಸಾಲಿನ ಆಸ್ತಿತೆರಿಗೆ ಪಾವತಿ ರಶೀದಿ, ಪಡಿತರ ಚೀಟಿ ಪ್ರತಿ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಮೇ 19 ರ ಒಳಗಾಗಿ ಉಡುಪಿ ನಗರಸಭಾ ಕಛೇರಿಗೆ ಸಲ್ಲಿಸುವಂತೆ […]

ಆಪರೇಷನ್ ಸಿಂಧೂರ್: ಭಾರತದ ವಿವಿಧೆಡೆ ವಿಮಾನ ಸಂಚಾರ ವ್ಯತ್ಯಯ.!

ನವದೆಹಲಿ: ಪಾಕಿಸ್ತಾನ ಮತ್ತು ಪಿಒಕೆಯಲ್ಲಿರುವ 9 ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ಮೂಲಕ ವೈಮಾನಿಕ ದಾಳಿ ನಡೆಸಿವೆ ಎಂದು ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ. ದಾಳಿಯ ಕೆಲವೇ ಗಂಟೆಗಳ ನಂತರ, ಪಾಕಿಸ್ತಾನವು ಗಡಿಯಲ್ಲಿ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ. ಏತನ್ಮಧ್ಯೆ, ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಜಮ್ಮು ಮತ್ತು ಕಾಶ್ಮೀರ ವಾಯುನೆಲೆಯನ್ನು ಮುಚ್ಚಲಾಗಿದೆ ಎಂದು ಭಾರತೀಯ ವಾಯುಪಡೆಯ ಮೂಲಗಳು ತಿಳಿಸಿವೆ. ಪ್ರಯಾಣಿಕರಿಗೆ ವೆಬ್‌ಸೈಟ್‌’ನಲ್ಲಿ ಮಾಹಿತಿ:ಮೂಲಗಳ ಪ್ರಕಾರ, ಇಂದು ಶ್ರೀನಗರ ವಿಮಾನ ನಿಲ್ದಾಣದಿಂದ ಯಾವುದೇ ಪ್ರಯಾಣಿಕ ವಿಮಾನಗಳು […]

ಉಡುಪಿ: ‘ಕಾಂತಾರ ಚಾಪ್ಟರ್ 1’ ಸೆಟ್ ನಲ್ಲಿದ್ದ ಜೂನಿಯರ್ ಆರ್ಟಿಸ್ಟ್ ನೀರಿನಲ್ಲಿ ಮುಳುಗಿ ಮೃತ್ಯು.

ಉಡುಪಿ: ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ- 2 ಸೆಟ್ ನಲ್ಲಿದ್ದ ಜೂನಿಯರ್ ಆರ್ಟಿಸ್ಟ್ ನದಿಯಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ಕೊಲ್ಲೂರು ಸೌಪರ್ಣಿಕಾ ನದಿಯಲ್ಲಿ ನಡೆದಿದೆ. ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಎಂ.ಎಫ್ ಕಪಿಲ್ ನೀರಿನಲ್ಲಿ ಮುಳುಗಿ ಮೃತಪಟ್ಟ ಯುವಕ. ಇವರು ಇಂದು ಮಧ್ಯಾಹ್ನ ಊಟ ಮಾಡಿದ ಬಳಿಕ ಈಜಾಡಲು ನದಿಗೆ ಹಾರಿದ್ದರು. ನದಿಯ ಸುಳಿಗೆ ಸಿಲುಕಿದ ಕಪಿಲ್ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಸ್ಥಳೀಯರು ಹಾಗೂ ಪೊಲೀಸರು ಅಗ್ನಿಶಾಮಕ ದಳದ ಸಹಾಯದಿಂದ ಸಂಜೆ ಮೃತದೇಹ ಪತ್ತೆ […]