ಕುಂದಾಪುರ: ರಸ್ತೆ ಅಪಘಾತ; ಯಕ್ಷಗಾನ ಕಲಾವಿದ ಮೃತ್ಯು.

ಕುಂದಾಪುರ: ಕುಂದಾಪುರದ ಅರಾಟೆ ಸೇತುವೆ ಬಳಿ ಯಕ್ಷಗಾನ ಕಲಾವಿದರೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ. ಮೃತಪಟ್ಟ ಕಲಾವಿದರನ್ನು ಹಟ್ಟಿಯಂಗಡಿ ಮೇಳದ ಪ್ರಧಾನ ಮದ್ದಳೆಗಾರ ನಾರಾಯಣ ಪೂಜಾರಿ (40) ಎಂದು ಗುರುತಿಸಲಾಗಿದೆ. ಶಿರೂರಿನ ತೂದಳ್ಳಿಯಲ್ಲಿ ನಡೆಯಬೇಕಿದ್ದ ಹಟ್ಟಿಯಂಗಡಿ ಮೇಳದ ಆಟ ಭಾರೀ ಮಳೆಯಿಂದಾಗಿ ರದ್ದಾಗಿತ್ತು. ಕಾರ್ಯಕ್ರಮ ರದ್ದಾದ ನಂತರ ಮೇಳದ ಪ್ರಧಾನ ಮದ್ದಳೆಗಾರ ನಾರಾಯಣ ಪೂಜಾರಿ ಅವರು ಬೈಕ್ ನಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ಅರಾಟೆ ಸೇತುವೆಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದ ಕಾರಣ ಏಕಮುಖ ಸಂಚಾರ […]
ಉಡುಪಿ: ಇನ್ಸ್ಟಾಗ್ರಾಮ್ ಮೂಲಕ ಬಟ್ಟೆ ಆರ್ಡರ್; ಲಕ್ಷಾಂತರ ರೂ. ವಂಚನೆ.

ಕೋಟ: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇನ್ಸ್ಟಾಗ್ರಾಮ್ ಮೂಲಕ ಬಟ್ಟೆ ಆರ್ಡರ್ ಮಾಡಿ, ಲಕ್ಷಾಂತರ ರೂ. ಹಣ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಮುಸ್ಕಾನ್ ಅಫ್ಸಾರಿ(24) ಎಂಬವರು ಮಾ.18ರಂದು ಇನ್ಟಗ್ರಾಮ್ ಮೂಲಕ ವ್ಯವಹಾರಕ್ಕಾಗಿ ಬಟ್ಟೆಯನ್ನು ಆರ್ಡರ್ ಮಾಡಿದ್ದರು. ಮಾ.25ರಂದು ರಾಹುಲ್ ಶರ್ಮ ಎಂಬ ಹೆಸರಿನಿಂದ ಮುಸ್ಕಾನ್‌ಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದು, ಅದರಂತೆ ಮುಸ್ಕಾನ್ ಹಂತ ಹಂತವಾಗಿ ಆರೋಪಿಯ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು. ಎರಡು ದಿನಗಳ ನಂತರ ಮುಸ್ಕಾನ್ ಆರೋಪಿಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲ […]