ಉಡುಪಿ: ಇನ್ಸ್ಟಾಗ್ರಾಮ್ ಮೂಲಕ ಬಟ್ಟೆ ಆರ್ಡರ್; ಲಕ್ಷಾಂತರ ರೂ. ವಂಚನೆ.

ಕೋಟ: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇನ್ಸ್ಟಾಗ್ರಾಮ್ ಮೂಲಕ ಬಟ್ಟೆ ಆರ್ಡರ್ ಮಾಡಿ, ಲಕ್ಷಾಂತರ ರೂ. ಹಣ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಮುಸ್ಕಾನ್ ಅಫ್ಸಾರಿ(24) ಎಂಬವರು ಮಾ.18ರಂದು ಇನ್ಟಗ್ರಾಮ್ ಮೂಲಕ ವ್ಯವಹಾರಕ್ಕಾಗಿ ಬಟ್ಟೆಯನ್ನು ಆರ್ಡರ್ ಮಾಡಿದ್ದರು.

ಮಾ.25ರಂದು ರಾಹುಲ್ ಶರ್ಮ ಎಂಬ ಹೆಸರಿನಿಂದ ಮುಸ್ಕಾನ್‌ಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದು, ಅದರಂತೆ ಮುಸ್ಕಾನ್ ಹಂತ ಹಂತವಾಗಿ ಆರೋಪಿಯ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು. ಎರಡು ದಿನಗಳ ನಂತರ ಮುಸ್ಕಾನ್ ಆರೋಪಿಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲ ಎಂದು ದೂರಲಾಗಿದೆ. ಇವರು ಬಟ್ಟೆಯನ್ನು ಕಳುಹಿಸುವುದಾಗಿ ನಂಬಿಸಿ 1,06,273 ರೂ. ಹಣವನ್ನು ಪಡೆದು ವಂಚಿಸಿರುವುದಾಗಿ ದೂರಲಾಗಿದೆ.