ಕಾರ್ಕಳ:ವ್ಯಕ್ತಿ ನಾಪತ್ತೆ

ಉಡುಪಿ: ಮಾನಸಿಕ ಕಾಯಿಲೆಯಿಂದ ಬಳಲುತಿದ್ದ ಕಾರ್ಕಳ ತಾಲೂಕು ಮಿಯಾರು ಗ್ರಾಮದ ಬೋರ್ಕಟ್ಟೆಯಲ್ಲಿ ಒಬ್ಬರೇ ವಾಸವಿದ್ದ ಬಿ ವಿಜೇಂದ್ರ ಪ್ರಭು (56) ಎಂಬ ವ್ಯಕ್ತಿಯ ಸಹೋದರರು 2022 ರ ಫೆಬ್ರವರಿ 21 ರಂದು ಬೋರ್ಕಟ್ಟೆಯ ತಮ್ಮ ಮನೆಗೆ ಬಂದಾಗ ಬಿ. ವಿಜೇಂದ್ರ ಪ್ರಭು ಮನೆಯಲ್ಲಿ ಇಲ್ಲದೇ ಕಾಣೆಯಾಗಿರುತ್ತಾರೆ ಅಕ್ಕಪಕ್ಕದವರ ಬಳಿ ವಿಚಾರಿಸಿದಾಗ ಸುಮಾರು ದಿನಗಳಿಂದ ಅವರನ್ನು ನೋಡಿಲ್ಲವೆಂದು ತಿಳಿಸಿರುತ್ತಾರೆ. 5 ಅಡಿ 5 ಇಂಚು ಎತ್ತರ ಗೋಧಿ ಮೈಬಣ್ಣ, ದುಂಡು ಮುಖ ಹೊಂದಿರುವ ಕನ್ನಡ, ತುಳು ಹಾಗೂ ಕೊಂಕಣಿ […]

ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣ ಪರ್ವ ಉದ್ಘಾಟನೆ.

ಉಡುಪಿ: ಕರ್ನಾಟಕ ಯಕ್ಷಗಾನ ಅಕಾಡೆಮಿ ಮಕ್ಕಳಿಗೆ ಯಕ್ಷಗಾನ ಕಲಿಕೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ವಿದ್ಯಾವಂತರು ಯಕ್ಷಗಾನಕ್ಕೆ ಬರಬೇಕು ಎಂಬುದೇ ಇದರ ಉದ್ದೇಶ. ಈ ನಿಟ್ಟಿನಲ್ಲಿ ಸಾಲಿಗ್ರಾಮ ಮಕ್ಕಳ ಮೇಳ ಯಕ್ಷಸೇವೆಯಲ್ಲಿ 50 ವರ್ಷಗಳನ್ನು ಪೂರೈಸಿರುವುದನ್ನು ಎಷ್ಟು ಅಭಿನಂದಿಸಿದರೂ ಸಾಲದು. ಮಕ್ಕಳ ಮೇಳವನ್ನು ಕಟ್ಟಿ ದೇಶವಿದೇಶಗಳಲ್ಲಿ ಯಕ್ಷಗಾನ ಕಂಪನ್ನು ಹರಡಿದ ಶ್ರೀಧರ ಹಂದೆ ಅವರ ಕೊಡುಗೆಯನ್ನು ಯಕ್ಷಲೋಕ ಮರೆಯುವಂತಿಲ್ಲ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ಯಕ್ಷಗಾನ ಕಲಾರಂಗದ ಐವೈಸಿ […]

ಕರಂಬಳ್ಳಿ: ವಿಪ್ರ ಮಹಿಳಾ ದಿನಾಚರಣೆ – ಗಾರ್ಗಿ ಏನ್ ಶಬರಾಯ ಅವರಿಗೆ ಸನ್ಮಾನ.

ಉಡುಪಿ: ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯಿಂದ “ವಿಪ್ರ ಮಹಿಳಾ ದಿನಾಚರಣೆ 2025″ ನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತ್ತಿಯಾಗಿ ಆಗಮಿಸಿದ ಡಾ. ರಾಜೇಶ್ವರಿ ಜಿ. ಭಟ್, HOD, OBG ಡಿಪಾರ್ಟ್ಮೆಂಟ್ ಕೆಎಂಸಿ ಮಣಿಪಾಲ ಇವರು ಮಹಿಳೆಯರ PCOD ಸಮಸ್ಯೆ ಬಗ್ಗೆ ಉಪನ್ಯಾಸ ನೀಡಿದರು. ಬಹುಮುಖ ಪ್ರತಿಭೆಯ ವಿದುಷಿ ಶ್ರೀಮತಿ ಗಾರ್ಗಿ ಎನ್ ಶಬರಾಯ ಅವರಿಗೆ “ಸಂಗೀತ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕರಂಬಳ್ಳಿ ವಲಯದ ಅಧ್ಯಕ್ಷ ಕೀಳಂಜೆ ಶ್ರೀಕೃಷ್ಣರಾಜ್ ಭಟ್ ಸಭೆಯ ಅಧ್ಯಕ್ಷತೆ […]

ಮಜ್ಜಿಗೆ ಅಂದ್ರೆ ಸುಮ್ನೆ ಅಲ್ಲ:ಮಜ್ಜಿಗೆಯ ಪ್ರಯೋಜನ ಗೊತ್ತಾದ್ರೆ ಇನ್ಮುಂದೆ ನೀವು ಕುಡಿಯದೇ ಇರಲ್ಲ.

ಮಜ್ಜಿಗೆನಾ? ಯಾರಿಗೆ ಬೇಕು ಮಾರಾಯ, ಈ ಬೇಸಿಗೆಗೆ ಯಾವುದಾದ್ರೂ ಒಳ್ಳೆ ಸಾಫ್ಟ್ ಡ್ರಿಂಕ್ಸ್ ಕುಡಿದ್ರೆ ಆಹಾ ತಂಪಾಗುತ್ತೆ, ಮಜ್ಜಿಗೆಯಲ್ಲಿ ಏನಿದೆ ಎಂದು ಬಹುತೇಕ ಮಂದಿ ಮಜ್ಜಿಗೆಯನ್ನು ನಿರ್ಲಕ್ಷ ಮಾಡುವವರೇ ಜಾಸ್ತಿ. ಆದರೆ ಈ ಬೇಸಿಗೆಯಲ್ಲಿ ಮಜ್ಜಿಗೆ ಕುಡಿಯುದರಿಂದ ಆಗುವ ಆರೋಗ್ಯಲಾಭ ಕೇಳಿದ್ರೆ, ಇಷ್ಟೊಂದೆಲ್ಲಾ ಆಗುತ್ತಾ ಮಜ್ಜಿಗೆ ಕುಡಿದರೆ ಎಂದು ನೀವು ಹುಬ್ಬೇರಿಸಿಬಿಡಬಹುದು. ಹೌದು ಊಟದ ನಂತರ ಮಜ್ಜಿಗೆ ಕುಡಿಯುವುದು, ಅಥವಾ ಅನ್ನಕ್ಕೆ ಮಜ್ಜಿಗೆ ಕಲಸಿ ತಿನ್ನುವುದು ಬಹುತೇಕ ಮಂದಿ ರೂಢಿಯಲ್ಲಿಟ್ಟುಕೊಂಡಿರುವ ಅಭ್ಯಾಸ. ಈ ಅಭ್ಯಾಸ ಉತ್ತಮ ಆರೋಗ್ಯಕ್ಕೆ […]

ಮಣಿಪಾಲ: ನಗರಸಭೆ ಪಂಪ್ ಹೌಸ್‌ ಬಳಿ ಹೊಂಡಕ್ಕೆ ಬಿದ್ದ ಕಾರು- ಪ್ರಯಾಣಿಕರು ಪಾರು

ಉಡುಪಿ: ಮಣಿಪಾಲದ ಈಶ್ವರ ನಗರದಲ್ಲಿರುವ ನಗರಸಭೆಗೆ ಸೇರಿದ ಕುಡಿಯುವ ನೀರಿನ ಪಂಪ್‌ ಹೌಸ್ ಜಾಗ ಇದೀಗ ಅಪಘಾತದ ತಾಣವಾಗಿದ್ದು ತಡರಾತ್ರಿ ಸಮಯದಲ್ಲಿ ಮತ್ತೆ ಕಾರೊಂದು ಹೊಂಡಕ್ಕೆ ಬಿದ್ದಿದೆ. ಉಡುಪಿ ನೋಂದಣಿಯ ಕಾರು ಮಧ್ಯರಾತ್ರಿ ನಿಯಂತ್ರಣ ತಪ್ಪಿ ಪಂಪ್ ಹೌಸ್ ಬಳಿ ಹೊಂಡಕ್ಕೆ ಬಿದ್ದಿದೆ. ಕಾರಿನಲ್ಲಿ ನಾಲ್ಕು ಜನ ಪ್ರಯಾಣಿಕರಿದ್ದರು. ಮಧ್ಯರಾತ್ರಿ ಮಣಿಪಾಲ ಪೊಲೀಸರು ಬಂದು, ವಾಹನವನ್ನು ತೆಗೆಯುವಲ್ಲಿ ಸಹಕರಿಸಿದರು. ಕಳೆದ ಶನಿವಾರವಷ್ಟೇ ವಿವಿಧ ನಂಬರ್ ಪ್ಲೇಟ್ ಸಂಖ್ಯೆ ಇರುವ ಕಾರು ಇದೇ ಜಾಗದಲ್ಲಿ ಬಿದ್ದಿತ್ತು. ಇದೇ ಜಾಗದಲ್ಲಿ […]