ಬೆಳ್ತಂಗಡಿ: ನೇಣು ಬಿಗಿದು ನವವಿವಾಹಿತೆ ಆತ್ಮಹತ್ಯೆ.!

ಬೆಳ್ತಂಗಡಿ: ನವ ವಿವಾಹಿತೆಯೋರ್ವರು ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಪಡಂಗಡಿ ಗ್ರಾಮದ ಬದ್ಯಾರು ಬರಾಯ ಮನೆ ನಿವಾಸಿ ಪ್ರಕಾಶ್ ಅವರ ಪತ್ನಿ ಪೂಜಾಶ್ರೀ(23) ಎಂದು ಗುರುತಿಸಲಾಗಿದೆ. ಮಾ.1ರಂದು ಪೂಜಾಶ್ರೀ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸ ಹುಡುಕುತ್ತಿದ್ದ ಪೂಜಾರನ್ನು ಪತಿ ಪ್ರಕಾಶ್ ಅವರು ಬೆಂಗಳೂರಿನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಕಳುಹಿಸಿದ್ದರು. ಪ್ರಕಾಶ್ ಬದ್ಯಾರು ಬರಾಯದ ತಮ್ಮ ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದರು. […]
ಮಾ.6ರಂದು ಶೀರೂರು ಮಠದ ಪರ್ಯಾಯ ಅಕ್ಕಿ ಮುಹೂರ್ತ

ಉಡುಪಿ: 2026ರ ಜ.18ರಂದು ನಡೆಯಲಿರುವ ಶೀರೂರು ಮಠದ ಪರ್ಯಾಯದ ಪೂರ್ವಭಾವಿಯಾಗಿ ನಡೆಯುವ ಮುಹೂರ್ತಗಳಲ್ಲಿ ಎರಡನೇಯದಾದ ಅಕ್ಕಿ ಮುಹೂರ್ತ ಇದೇ ಮಾ.6ರ ಬೆಳಗ್ಗೆ 11:10ಕ್ಕೆ ಶೀರೂರು ಮಠದಲ್ಲಿ ನಡೆಯಲಿದೆ ಎಂದು ಶೀರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಶ್ರೀಪಾದರು ತಿಳಿಸಿದ್ದಾರೆ. ಶೀರೂರು ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರ್ಯಾಯದ ಎರಡು ವರ್ಷಗಳ ಅವಧಿಗೆ (2026ರ ಜ.18ರಿಂದ 2028ರ ಜ.17ರವರೆಗೆ) ಅನ್ನದಾನಕ್ಕೆ ಅಗತ್ಯವಿರುವ ಅಕ್ಕಿ ಸಂಗ್ರಹಕ್ಕಾಗಿ ಅಕ್ಕಿ ಮುಹೂರ್ತ ನಡೆಯುವುದು ಉಡುಪಿ ಅಷ್ಟಮಠಗಳ ಪರ್ಯಾಯದಲ್ಲಿ ನಡೆದುಕೊಂಡ ಬಂದ ಸಂಪ್ರದಾಯ ಎಂದರು. ಶೀರೂರು […]
ಉಡುಪಿ: ಮಾ.4ರಂದು ಬೃಹತ್ ಉದ್ಯೋಗ ಮೇಳ

ಉಡುಪಿ: ಬಿಲ್ಲಾಡಿಯ ಆತ್ಮಾನಂದ ಸರಸ್ವತಿ ಕೈಗಾರಿಕಾ ತರಬೇತಿ ಕೇಂದ್ರ(ಐಟಿಐ) ಮತ್ತು ಉಡುಪಿ ನಗರಸಭೆಯ ಪ್ರಾಯೋಜಕತ್ವದಲ್ಲಿ ಧರ್ಮಸ್ಥಳ ಶ್ರೀ ರಾಮಕ್ಷೇತ್ರ ಉಡುಪಿ ಸಮಿತಿ ಎಜ್ಯುಕೇಶನಲ್ ಟ್ರಸ್ಟ್(ರಿ.) ಉಡುಪಿ ಹಾಗು ಬಿಲ್ಲವ ಸೇವಾ ಸಂಘ ಬನ್ನಂಜೆ, ಉಡುಪಿ ಇವರ ಸಹಯೋಗದೊಂದಿಗೆ ಬೃಹತ್ ಉದ್ಯೋಗ ಮೇಳವನ್ನು ಮಾ.4 ರಂದು ಬನ್ನಂಜೆಯ ಬಿಲ್ಲವ ಸೇವಾ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ನಗರಸಭಾ ಅಧ್ಯಕ್ಷ ಪ್ರಭಾಕರ್ ಪೂಜಾರಿ ಮಾಹಿತಿ ನೀಡಿದರು. ಅಂದು ಬೆಳಗ್ಗೆ 9.30 ರಿಂದ 4.30 ರವರೆಗೆ ನಡೆಯುವ ಉದ್ಯೋಗ ಮೇಳದಲ್ಲಿ […]
ಕರಾವಳಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ ಡಿ.ಕೆ.ಶಿವಕುಮಾರ್.

ಉಡುಪಿ: ಉಪಮುಖ್ಯಮಂತ್ರಿಯಾಗಿ ಆಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿ ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಕೆಪಿಸಿಸಿ ರಾಜ್ಯಾಧ್ಯಕ್ಷ ಹಾಗೂ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕರಾವಳಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿವಿಮಾತು, ಸಲಹೆ, ಸೂಚನೆಗಳೊಂದಿಗೆ ಎಚ್ಚರಿಕೆಯ ಮಾತುಗಳನ್ನು ಹೇಳಿ ಹೋದರು. ‘ವ್ಯಕ್ತಿ ಪೂಜೆಯನ್ನು ಬಿಡಿ.. ಪಕ್ಷದ ಪೂಜೆ ಮಾಡಿ… ಜಾತಿ ಆಧಾರದ ರಾಜಕಾರಣವನ್ನು ಬಿಟ್ಟುಬಿಡಿ.. ಎಲ್ಲಾ ವರ್ಗದವರನ್ನು ಜೊತೆಯಲ್ಲಿ ಕರೆದೊಯ್ಯುವ ಸಂಕಲ್ಪ ಮಾಡಿ. ಆಗ ಪಕ್ಷ ಮತ್ತೆ ಗೆಲುವಿನ ಹಾದಿಗೆ ಬರಲು ಸಾಧ್ಯವಾಗುತ್ತದೆ.’ ಎಂದು ಡಿಕೆಶಿ ನುಡಿದರು.ಹಿಂದೆ […]
ಕಾಂಗ್ರೆಸ್ ಕಾರ್ಯಕರ್ತೆಯ ಮೃತದೇಹ ಸೂಟ್‍ಕೇಸ್‍ನಲ್ಲಿ ಪತ್ತೆ!

ರೋಹ್ಟಕ್: ಕಾಂಗ್ರೆಸ್ ಮುಖಂಡ ರಾಹುಲ್‍ಗಾಂಧಿ 2023ರಲ್ಲಿ ನಡೆಸಿದ ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದ 22 ವರ್ಷದ ಕಾಂಗ್ರೆಸ್ ಕಾರ್ಯಕರ್ತೆಯ ಮೃತದೇಹ ಸಂಪ್ಲಾ ಬಸ್ ನಿಲ್ದಾಣ ಬಳಿಯ ಫ್ಲೈಓವರ್ ಪಕ್ಕ ಬಿದ್ದಿದ್ದ ಸೂಟ್‍ಕೇಸ್‍ನಲ್ಲಿ ಶನಿವಾರ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಹಿಳೆಯ ಕೈಗಳಲ್ಲಿ ಮೆಹಂದಿ ವಿನ್ಯಾಸಗಳಿದ್ದು, ಯಾವುದೋ ಸಮಾರಂಭದಲ್ಲಿ ಭಾಗವಹಿಸಿರಬೇಕು ಎನ್ನುವುದನ್ನು ಇದು ಸೂಚಿಸುತ್ತದೆ. ಮಹಿಳೆಯನ್ನು ಉಸಿರುಗಟ್ಟಿಸಿ ಸಾಯಿಸಿ ಸೂಟ್‍ಕೇಸ್‍ನಲ್ಲಿ ತುಂಬಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ದಾರಿಹೋಕರು ಶವ ಇದ್ದ ಸೂಟ್‍ಕೇಸ್ ಪತ್ತೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.ಮೃತ […]