ANGELS ZUMBA ಫಿಟ್ನೆಸ್ ಕ್ಲಾಸ್ ನ ಉದ್ಘಾಟನೆ

ಉಡುಪಿಯ ರಾಜ್ ಟವರ್ಸ್ ನಲ್ಲಿ ANGELS ZUMBA ಫಿಟ್ನೆಸ್ ಕ್ಲಾಸ್ ನ ಉದ್ಘಾಟನೆ ಕಾರ್ಯಕ್ರಮವು ಭಾನುವಾರ ಸಂಜೆ ನಡೆಯಿತು.ಈ ಸಂದರ್ಭದಲ್ಲಿZUMBA ಕ್ಲಾಸ್ ನ ಸ್ಟೂಡೆಂಟ್ಸ್ ಹಾಗು ಕುಟುoಭಸ್ಥರು ಶುಭಹಾರೈಸಿದರು. ದಿನನಿತ್ಯ ಬೆಳ್ಳಿಗ್ಗೆ 06-07, 07-08, 10-11,11-12 ಹಾಗು ಸಂಜೆ 04-05, 05-06, 06.30-07.30,07.30-08.30, 08.30-9.30 ವರೆಗೆ ಫಿಟ್ನೆಸ್ ಕ್ಲಾಸ್ ನಡೆಯಲಿದೆ ಎಂದು ಸಂಸ್ಥೆಯ ಮಾಲಕಿ ಪೂರ್ಣಿಮಾ ಪೇರ್ಗನ್ನ ಈ ಸಂದರ್ಭದಲ್ಲಿ ತಿಳಿಸಿದರು .
ಕರ್ತವ್ಯದಿಂದ ನಾಯಕನ ವರ್ಚಸ್ಸು ಹೆಚ್ಚಳ – ಕಿರಣ್.ಎಸ್.ಗಂಗಣ್ಣನವರ್

ಉಡುಪಿ: ಉಡುಪಿ ವಕೀಲರ ಸಂಘದ 125 ನೇ ವರ್ಷದ ಶತಮಾನೋತ್ತರ ರಜತ ಮಹೋತ್ಸವದ ಮುಂದುವರಿದ ಭಾಗವಾಗಿ ಎಮ್‌ಜಿಎಮ್ ಮೈದಾನದಲ್ಲಿ ಎರಡು ದಿನ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರೀಡಾಕೂಟ ಮುಕ್ತಾಯಗೊಂಡಿತು. ಸಮಾರೋಪದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಕಿರಣ್.ಎಸ್.ಗಂಗಣ್ಣನವರ್ ಮಾತನಾಡಿ, ಉಡುಪಿ ವಕೀಲರ ಸಂಘವು ನಿತ್ಯದ ಕಾರ್ಯಗಳೊಂದಿಗೆ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ವಕೀಲರ ಬೇಡಿಕೆಗಳಿಗೆ ಕೊನೆ ಇರುವುದಿಲ್ಲ. ಕ್ರೀಡೆ ಹಾಗು ನ್ಯಾಯಾಂಗದಲ್ಲಿ ತುಡಿತ ಇದ್ದಾಗ, ಹೊಸ ವಿಚಾರಗಳು ಬರುತ್ತವೆ. ಅಂತಹ ಮನಸ್ಸುಗಳಿಂದ ಇಂತಹ ಬದಲಾವಣೆಗಳನ್ನು ತರಲು […]
ಉಡುಪಿಯ ಪ್ರಖ್ಯಾತ ಡಿಜಿಟಲ್ ಮಾರ್ಕೆಟಿಂಗ್ ಕಂಪೆನಿಯಲ್ಲಿ ಉದ್ಯೋಗವಕಾಶ.

ಉಡುಪಿ:ಉಡುಪಿಯ ಪ್ರಖ್ಯಾತ ಡಿಜಿಟಲ್ ಮಾರ್ಕೆಟಿಂಗ್ ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: ◾ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್ ◾ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ◾ಕಸ್ಟಮರ್ ರಿಲೇಷನ್ ಶಿಪ್ ಎಕ್ಸಿಕ್ಯೂಟಿವ್ ◾ರಿಸೆಪ್ಪನಿಸ್ಟ್ ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡಾಟವನ್ನು ಕಳುಹಿಸಿ: 📩[email protected] 📞9448379989
ಬದಲಾಗುತ್ತಿದೆ ಕಾಲ: ಮಾಧ್ಯಮದಲ್ಲಿ ಹೊಸ ಕ್ರಾಂತಿಗೆ ಇದು ಸಕಾಲ: ಕುದ್ಯಾಡಿ ಸಂದೇಶ್ ಸಾಲ್ಯಾನ್ ಬರಹ

ಪತ್ರಿಕೆಗೆ ಕಳುಹಿಸಿದ ವರದಿಯೊಂದು ಪ್ರಕಟವಾಗಿದೆಯೇ ಎಂದು ಆ ಪತ್ರಿಕೆಯ ವರದಿಗಾರರನ್ನು ಕೇಳಿದರೆ ಅವರಿಗೆ ಸಂತೋಷವೇನೂ ಆಗಲಿಕ್ಕಿಲ್ಲ. “ಬಂದಿರಬಹುದು, ನೋಡಿ” ಎನ್ನಬಹುದು ಅವರು. ಏಕೆಂದರೆ ತಮ್ಮ ಪತ್ರಿಕೆಯನ್ನು ಎಲ್ಲರೂ ಖರೀದಿಸಿ ಓದುತ್ತಾರೆ ಅಥವಾ ಓದಲಿ ಎಂಬ ನಿರೀಕ್ಷೆಯಲ್ಲಿ ಅವರಿರುತ್ತಾರೆ. ಬೇಕಾದರೆ ಕೊಂಡುಕೊಂಡು ಓದಲಿ ಎನ್ನುವುದು ಪತ್ರಿಕಾ ಕಚೇರಿಯ ಧೋರಣೆ. ಏಕೆಂದರೆ ಪತ್ರಿಕೆ ಇರುವುದು ಖರೀದಿಸಿ ಓದುವುದಕ್ಕಾಗಿಯೇ! ಉತ್ಪಾದನಾ ವೆಚ್ಚಕ್ಕಿಂತ ಹಲವು ಪಟ್ಟು ಕಡಿಮೆ ದರಕ್ಕೆ ಸಿಗುವ ಉತ್ಪನ್ನವೊಂದಿದ್ದರೆ ಅದು ಪತ್ರಿಕೆ. ಬಂದಿರಬಹುದು ನೋಡಿ ಎಂದರೆ ಖರೀದಿಸಿ ನೋಡಿ ಎಂದರ್ಥ. […]
MSDC ಮಣಿಪಾಲ ಕೌಶಲ್ಯ ಅಭಿವೃದ್ದಿ ಕೇಂದ್ರದ ವತಿಯಿಂದ ಪಟ್ಲದ ಯುಜಿ ನಾಯಕ್ ಪ್ರೌಢಶಾಲೆಯಲ್ಲಿ ತರಬೇತಿ

ಮಣಿಪಾಲ: ಮಣಿಪಾಲದ MSDC ಮಣಿಪಾಲ ಕೌಶಲ್ಯ ಅಭಿವೃದ್ದಿ ಕೇಂದ್ರದ ವತಿಯಿಂದ ಎಂಬ್ರ್ಯಾಂಡರಿ ತರಬೇತಿ ಫೆ. 23 ರಂದು ಪಟ್ಲದ ಯುಜಿ ನಾಯಕ್ ಪ್ರೌಢಶಾಲೆಯಲ್ಲಿ ನಡೆಯಿತು. ನೂರಾರು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡರು.