ಬ್ರಹ್ಮಾವರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ: ಉಪನ್ಯಾಸಕರಿಗೆ “ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ” ಕಾರ್ಯಕ್ರಮ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಎಲ್ಲಾ ಉಪನ್ಯಾಸಕರಿಗೆ “ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ” ಎಂಬ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಶ್ರೀ ಮಾಧವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಬಂಟಕಲ್ಲು ಉಡುಪಿ ಇದರ ಪ್ರೊಫೆಸರ್ ಸ್ಟೀವನ್ ರಾಬರ್ಟ್ ಟೆಲ್ಲಿಸ್ ಇವರು ಎಲ್ಲಾ ಉಪನ್ಯಾಸಕರಿಗೆ “ತರಬೇತಿದಾರರಿಗೆ ತರಬೇತಿ” ಎನ್ನುವ ವಿಷಯದ ಕುರಿತು ಅನೇಕ ಮಾಹಿತಿಗಳಾದ ತರಗತಿ ನಿರ್ವಹಣೆ, ವಿದ್ಯಾರ್ಥಿಗಳೊಂದಿಗೆ ಸಂವಹನ, ಪ್ರಚಲಿತ ವಿಷಯ, ಅನೇಕ ಚಟುವಟಿಕೆಗಳನ್ನು ನಡೆಸಿ ಸೂಕ್ತ ಮಾಹಿತಿ ನೀಡಿದರು. ಕಾಲೇಜಿನ […]
ಉಡುಪಿ: ಮೆಸ್ಕಾಂ ಸಿಬ್ಬಂದಿಗಳ ಕ್ವಾಟ್ರಸ್ ಗೆ ಕನ್ನ ಹಾಕಿದ ಕಳ್ಳರು

ಉಡುಪಿ: ನಿನ್ನೆಯಷ್ಟೇ ನಗರದ ಪೊಲೀಸ್ ಕ್ವಾಟ್ರಸ್ ಗೆ ಕನ್ನ ಹಾಕಿದ್ದ ಕಳ್ಳರು, ಇಂದು ಮೆಸ್ಕಾಂ ಸಿಬ್ಬಂದಿಗಳ ಕ್ವಾಟ್ರಸ್ ಗೆ ಕನ್ನ ಹಾಕಿದ್ದಾರೆ. ಉಡುಪಿಯ ಕುಂಜಿಬೆಟ್ಟುನಲ್ಲಿರುವ ಮೆಸ್ಕಾಂ ಸಿಬ್ಬಂದಿಯ ವಸತಿ ಗೃಹದ ಮೂರು ಮನೆಗಳಲ್ಲಿ ಕಳ್ಳತನ ನಡೆದಿದೆ. ಗಣೇಶ್ ಮತ್ತು ಮುರುಗೇಶ್ ಎಂಬ ಮೆಸ್ಕಾಂ ಸಿಬ್ಬಂದಿ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಮನೆಗೆ ಬೀಗ ಹಾಕಿದ್ದ ಸಂದರ್ಭ ಕಳ್ಳರು ಕೈಚಳಕ ತೋರಿದ್ದಾರೆ. ಆದರೆ ಮನೆಗಳಲ್ಲಿ ಹೆಚ್ಚಿನ ವಸ್ತುಗಳು ಕಳ್ಳರಿಗೆ ಸಿಕ್ಕಿಲ್ಲ. 3 ಮನೆಗಳಿಂದ ಒಟ್ಟಾರೆ 15 ಸಾವಿರ ಮೌಲ್ಯ […]
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಿಣ್ಣರು ಶ್ರೀಕೃಷ್ಣನ ಫ್ರೆಂಡ್ಸ್ ಇದ್ದಂತೆ: ಪುತ್ತಿಗೆ ಶ್ರೀ

ಉಡುಪಿ: ಶ್ರೀಕೃಷ್ಣನಿಗೆ ಮಕ್ಕಳು ಎಂದರೆ ಬಹಳ ಪ್ರೀತಿ. ಕೃಷ್ಣನು ತನ್ನ ಸಂಗಡಿಗರೊಂದಿಗೆ ಬಾಲ ಲೀಲೆಗಳ ಮುಖಾಂತರ ಎಲ್ಲರ ಮನಸೆಳೆದವನು. ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಶ್ರೀಕೃಷ್ಣನ ಫ್ರೆಂಡ್ಸ್ ಇದ್ದಂತೆ. ಇಂದು ಶ್ರೀ ಕೃಷ್ಣನ ಅಂಗಳದಲ್ಲಿ ಸ್ಕೌಟ್ ಮತ್ತು ಬುಲ್ ಬುಲ್ ಮಕ್ಕಳು ತಮ್ಮ ಪ್ರತಿಭಾ ಪ್ರದರ್ಶನ ಮಾಡಿ ಅವನ ಕೃಪೆಗೆ ಪಾತ್ರರಾಗಿದ್ದಾರೆ. ಅವರನ್ನು ಕೃಷ್ಣ ಸದಾ ಅನುಗ್ರಹಿಸಲಿ ಎಂದು ಪರ್ಯಾಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಜಿಲ್ಲಾ ಮಟ್ಟದ ಕ್ಲಬ್ ಬುಲ್ ಬುಲ್ ಉತ್ಸವವನ್ನು ಶ್ರೀಕೃಷ್ಣ […]
ಮಲ್ಪೆ: ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ವಿದೇಶಿ ಬೋಟ್ ವಶ; ಮೂವರು ಮೀನುಗಾರರ ಬಂಧನ

ಉಡುಪಿ: ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ವಿದೇಶಿ ಬೋಟನ್ನು ಕರಾವಳಿ ಕಾವಲು ಪೊಲೀಸ್(ಸಿಎಸ್ಪಿ) ಹಾಗೂ ಮಂಗಳೂರು ಕೋಸ್ಟ್ ಗಾರ್ಡ್ ವಶಕ್ಕೆ ಪಡೆದುಕೊಂಡ ಘಟನೆ ಮಲ್ಪೆ ಸೈಂಟ್ ಮೇರಿಸ್ ದ್ವೀಪದ ಬಳಿ ನಡೆದಿದೆ. ಬೋಟ್ ನಲ್ಲಿದ್ದ ಮೂವರು ತಮಿಳುನಾಡು ಮೂಲದ ಮೀನುಗಾರರನ್ನು ಬಂಧಿಸಲಾಗಿದೆ. ಬಂಧಿತರನ್ನು ಭಾರತೀಯ ಮೂಲದ ತಮಿಳುನಾಡು ನಿವಾಸಿಗಳೆನ್ನಲಾದ ಜೇಮ್ಸ್ ಫ್ರಾಂಕ್ಲಿನ್(50), ರಾಬಿನ್ ಸ್ಟನ್(50), ಡಿರೋಸ್ ಅಲ್ಫೋನ್ಸ್(38) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದ ಹೆಚ್ಚಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ. ಫೆ.17ರಂದು ಒಮಾನ್ […]
ಉಡುಪಿ: 14ನೇ ಮಹಡಿಯಿಂದ ಬಿದ್ದು ಯುವಕ ಮೃತ್ಯು

ಉಡುಪಿ: 14ನೇ ಮಹಡಿಯಿಂದ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಬ್ರಹ್ಮಗಿರಿಯ ಗ್ರಾಸ್ ಲ್ಯಾಂಡ್ ದಿ ಕಾಸ್ಟ್ಲೆ ಅಪಾರ್ಟ್ಮೆಂಟ್ ನಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಮೃತ ಯುವಕನನ್ನು ಲೇಕ್ ರಾಜ್ (29) ಎಂದು ಗುರುತಿಸಲಾಗಿದೆ. ಈತ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಆಯತಪ್ಪಿ 14ನೇ ಮಹಡಿಯಿಂದ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.