ಉಡುಪಿ: ಉಡುಪಿ- ಪ್ರಯಾಗ್ ರಾಜ್ ವಿಶೇಷ ರೈಲಿಗೆ ಪೇಜಾವರ ಶ್ರೀ ಚಾಲನೆ.

ಉಡುಪಿ: ಉಡುಪಿ ಜಿಲ್ಲೆಯಿಂದ ಮಹಾ ಕುಂಭಮೇಳಕ್ಕೆ ಪ್ರಯಾಗ್ ರಾಜ್ ಗೆ ತೆರಳುವವರಿಗೆ ಆಯೋಜಿಸಲಾದ “ಉಡುಪಿ – ಪ್ರಯಾಗ್ ರಾಜ್” ವಿಶೇಷ ರೈಲಿಗೆ ಇಂದು ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚಿಸಿ, ನಿಶಾನೆ ತೋರಿ ಚಾಲನೆ ನೀಡಿದರು. ಮಹಾ ಕುಂಭಮೇಳಕ್ಕೆ ತೆರಳುತ್ತಿರುವ ಕಾಪು ವಿಧಾನಸಭಾ ಕ್ಷೇತ್ರದ ಸುಮಾರು 170 ಜನರಿಗೆ ಕಾಪು ಶಾಸಕರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಯಶ್ […]

ಖರ್ಗೆ ಹೇಳಿದ ತಕ್ಷಣ ಕುಂಭಮೇಳಕ್ಕೆ ಹೋಗುವವರನ್ನು ನಿಲ್ಲಿಸಲು ಸಾಧ್ಯವಿಲ್ಲ

ಉಡುಪಿ: ಖರ್ಗೆಯವರು ಹೇಳಿದ ತಕ್ಷಣ ಕುಂಭಮೇಳಕ್ಕೆ ಹೋಗುವವರನ್ನು ನಿಲ್ಲಿಸಲು ಸಾಧ್ಯವಿಲ್ಲ. ಕುಂಭಮೇಳಕ್ಕೆ ಹೋಗುವವರು ಮುಕ್ತವಾಗಿದ್ದಾರೆ. ಎಲ್ಲರೂ ಹೋಗುತ್ತಿದ್ದಾರೆ. ಇದರಲ್ಲಿ ಏನೂ ಗೊಂದಲ ಆಗಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಕುಂಭಮೇಳ ಕುರಿತು ಖರ್ಗೆ ಹೇಳಿಕೆ ಹಾಗೂ ಡಿಕೆಶಿ ಭಾಗಿ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು, ಖರ್ಗೆ ಅವರದ್ದು ವೈಯಕ್ತಿಕ ಅಭಿಪ್ರಾಯ. ಅವರ ವರ್ಷನ್ ಅವರು ಹೇಳಿದ್ದಾರೆ. ಇವರ ವರ್ಷನ್ ಇವರು ಹೇಳಿದ್ದಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಭಕ್ತಿ ಇದ್ದವರು […]

ಉಡುಪಿ ಜನರೇ ಗಮನಿಸಿ: ದಿನನಿತ್ಯದ ತಾಜಾ ಉತ್ಪನ್ನಗಳನ್ನು ತರಲು ಹೊರಗೆ ಹೋಗುವ ಕಷ್ಟವಿಲ್ಲ: M Kart ಮಾಡುತ್ತೆ ತಾಜಾತನದ ಹೋಂ ಡೆಲಿವರಿ

ಮನೆಯಲ್ಲಿ ವಯಸ್ಸಾದವರಿದ್ದರೆ ದಿನಬಳಕೆಯ ವಸ್ತುಗಳನ್ನು ಪ್ರತೀ ದಿನವೂ ಅಂಗಡಿಗಳಿಂದ ಸೂಪರ್ ಮಾರ್ಕೆಟ್ ಗಳಿಂದ ತರುವುದು ದೊಡ್ಡ ಕಷ್ಟ, ತೀರಾ ಅರ್ಜೆಂಟ್ ಇರುವ  ತರಕಾರಿ ಸರಿಯಾದ ಸಮಯಕ್ಕೆ ಮುಗಿಯಿತೆನ್ನಿ, ಆಗ ಕೂಡಲೇ ಅಂಗಡಿಗೆ ಹೋಗುವುದರಂತೂ ಭಾರೀ ಕಷ್ಟದ ಕೆಲಸ. ಅದೂ ವಯಸ್ಸಾದವರಿಗಂತೂ ಇನ್ನೂ ಕಷ್ಟ. ಆದರೆ ಉಡುಪಿ ಜನರು ಇನ್ನು ಮುಂದೆ ಈ ಕಷ್ಟ ಪಡಬೇಕಾಗಿಲ್ಲ, ಯಾಕಂದ್ರೆ ನಿಮಗೆ ಅಗತ್ಯ ಇರುವ ಎಲ್ಲಾ ದಿನಬಳಕೆ ಉತ್ಪನ್ನಗಳನ್ನು ಮನೆಬಾಗಿಲಿಗೆ ನೀವು ಕರೆ ಮಾಡಿದ ಕೆಲವೇ ಕ್ಷಣಗಳಲ್ಲಿ ಪ್ರೀತಿಯಿಂದ ತಲುಪಿಸಲು ಉಡುಪಿಯ […]

ಉಡುಪಿ:ಡಾ.ಯು.ಎಂ ಫಾರೂಕ್ ಚಂದ್ರನಗರ ಇವರಿಗೆ ಪಣಿಯೂರಿನಲ್ಲಿ ಸನ್ಮಾನ

ಉಡುಪಿ:ಬದ್ರಿಯಾ ಜುಮ್ಮಾ ಮಸ್ಜಿದ್ (ರಿ)ಮಜೂರು-ಮಲ್ಲಾರು ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಮಾಜ ಸೇವಕ ಬಟರ್ ಫ್ಲೈ ಗೆಸ್ಟ್ ಹೌಸ್ ಆಡಳಿತ ನಿರ್ದೇಶಕರಾದ ಡಾ.ಯು.ಎಂ ಫಾರೂಕ್ ಚಂದ್ರನಗರ ಇವರಿಗೆ ಮಲನ್ಗೋಲಿ ಪಣಿಯೂರಿನ ಊರೂಸ್ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಜೂರು ಸಯ್ಯಿದ್ ಜಮಲುಲೈಯ್ಲಿ ತಂಗಲ್ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಉಪ ಖಾಝಿ ಅಬ್ದುಲ್ ರಹಿಮಾನ್ ಮದನಿ ಮೂಳೂರು ,ಬೆಳಪು ಜಾಮಿಯ ಮಸ್ಜಿದ್ ಕತಿಬರಾದ ಅಬ್ದುಲ್ ರಶೀದ್ ಸಖಾಫಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶರ್ಫುದ್ದೀನ್ ಶೇಕ್, ಅರಫಾ […]

ಕರಾವಳಿ ಸಹಿತ 12 ಜಿಲ್ಲೆಗಳ 300 ಕಾಲುಸಂಕಗಳಿಗೆ ಅನುದಾನ ಮಂಜೂರು

ಉಡುಪಿ: ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕರಾವಳಿ ಸೇರಿದಂತೆ 12 ಜಿಲ್ಲೆಗಳಿಗೆ 300 ಕಾಲುಸಂಕಗಳಿಗೆ ಅನುದಾನ ಮಂಜೂರು ಮಾಡಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.ಉಡುಪಿ ಜಿಲ್ಲೆಯ ಐವರು ಶಾಸಕರು 500 ಕಾಲುಸಂಕಗಳಿಗೆ ಬೇಡಿಕೆ ಇಟ್ಟಿದ್ದು, ಉಡುಪಿಯೂ ಸೇರಿದಂತೆ ಎಲ್ಲಾ ಜಿಲ್ಲೆಗಳ ಕಾಲುಸಂಕಗಳನ್ನುಮುಂದಿನ ಮೂರು ವರ್ಷಗಳಲ್ಲಿ ಆದ್ಯತೆಯ ಮೇರೆಗೆ ಪೂರ್ಣಗೊಳಿಸಲಾಗುವುದು ಎಂದರು. ಸರಕಾರದ ಗ್ಯಾರೆಂಟಿ ಯೋಜನೆಗಳಿಂದ ಲೋಕೋಪಯೋಗಿ […]