ಮನೆಯಲ್ಲಿ ವಯಸ್ಸಾದವರಿದ್ದರೆ ದಿನಬಳಕೆಯ ವಸ್ತುಗಳನ್ನು ಪ್ರತೀ ದಿನವೂ ಅಂಗಡಿಗಳಿಂದ ಸೂಪರ್ ಮಾರ್ಕೆಟ್ ಗಳಿಂದ ತರುವುದು ದೊಡ್ಡ ಕಷ್ಟ, ತೀರಾ ಅರ್ಜೆಂಟ್ ಇರುವ ತರಕಾರಿ ಸರಿಯಾದ ಸಮಯಕ್ಕೆ ಮುಗಿಯಿತೆನ್ನಿ, ಆಗ ಕೂಡಲೇ ಅಂಗಡಿಗೆ ಹೋಗುವುದರಂತೂ ಭಾರೀ ಕಷ್ಟದ ಕೆಲಸ. ಅದೂ ವಯಸ್ಸಾದವರಿಗಂತೂ ಇನ್ನೂ ಕಷ್ಟ. ಆದರೆ ಉಡುಪಿ ಜನರು ಇನ್ನು ಮುಂದೆ ಈ ಕಷ್ಟ ಪಡಬೇಕಾಗಿಲ್ಲ, ಯಾಕಂದ್ರೆ ನಿಮಗೆ ಅಗತ್ಯ ಇರುವ ಎಲ್ಲಾ ದಿನಬಳಕೆ ಉತ್ಪನ್ನಗಳನ್ನು ಮನೆಬಾಗಿಲಿಗೆ ನೀವು ಕರೆ ಮಾಡಿದ ಕೆಲವೇ ಕ್ಷಣಗಳಲ್ಲಿ ಪ್ರೀತಿಯಿಂದ ತಲುಪಿಸಲು ಉಡುಪಿಯ M Kart ತನ್ನ ಸೇವೆ ಶುರು ಮಾಡಿದೆ. ಹೌದು ನೀವು ನಿಮ್ಮ ಅಪ್ಪ, ಅಮ್ಮ, ಅಜ್ಜ ಇವರನ್ನೆಲ್ಲಾ ಬಿಟ್ಟು ಬೇರೆ ಊರಿನಲ್ಲಿ ನೆಲೆಸಿರಬಹುದು. ಆದರೆ ಅವರಿಗೆ ಬೇಕಾದ ದಿನಬಳಕೆ ವಸ್ತುಗಳನ್ನು ಲಿಸ್ಟ್ ಮಾಡಿಕೊಟ್ಟರೆ ನಿಮ್ಮಷ್ಟೇ ಪ್ರೀತಿಯಿಂದ M Kart ಅದನ್ನು ಅವರಿದ್ದಲ್ಲಿಗೆ ತಲುಪಿಸುತ್ತದೆ.
ಒಳ್ಳೆಯ ಉತ್ಪನ್ನ, ಭರವಸೆಯ ಡೆಲಿವೆರಿ:
M Kart ಗುಣಮಟ್ಟದ ಉತ್ಪನ್ನಗಳನ್ನು ಯಾವುದೇ ವ್ಯತ್ಯಯ ಇಲ್ಲದೇ ಕ್ಲಪ್ತ ಸಮಯಕ್ಕೆ ಡೋರ್ ಡೆಲಿವೆರಿ ನೀಡುವುದರಲ್ಲಿಎಂದೆಂದಿಗೂ ಎತ್ತಿದ ಕೈ. ಸುರಕ್ಷತೆಗೆ ಎಂ ಮಾರ್ಟ್ ಮೊದಲ ಆದ್ಯತೆ ನೀಡುತ್ತದೆ. ಮನೆಯಲ್ಲಿಯೇ ಕುಳಿತು ದಿನನಿತ್ಯ ಬಳಕೆಗೆ ಬೇಕಾಗಿರುವ ತಾಜಾ ವಸ್ತುಗಳನ್ನು ತರಿಸಿಕೊಳ್ಳಲು ಇದಕ್ಕಿಂತ ಒಳ್ಳೆಯ ಆಯ್ಕೆ ಬೇರೇನಿದೆ ಹೇಳಿ?
ನೀವು ದೂರದ ಊರಿನಲ್ಲಿದ್ದರೆ ನಿಮ್ಮ ಹೆತ್ತವರಿಗೆ ಯಾವಾಗಲೂ ಹೊರಗೆ ಹೋಗಿ ಶಾಪಿಂಗ್ ಮಾಡೋದು ತರಕಾರಿ ಮೊದಲಾದವುಗಳನ್ನು ಹೊತ್ತುಕೊಂಡು ಬರೋದು ಅದೆಷ್ಟು ಕಷ್ಟ ಎನ್ನುವ ಯೋಚನೆ, ಚಿಂತೆ ನಿಮಗೆ ಇದ್ದೇ ಇರುತ್ತದೆ. ಆದರೆ ಇನ್ನು ಮುಂದೆ ಈ ಚಿಂತೆ ಬಿಡಿ. ನಿಮ್ಮ ಹೆತ್ತವರು ಉಡುಪಿಯಲ್ಲಿದ್ದಲ್ಲಿ ಅವರಿದ್ದಲ್ಲಿಗೆ ತಾಜಾ ತಾಜಾ ತರಕಾರಿ, ಹಣ್ಣುಗಳನ್ನು ದಿನನಿತ್ಯದ ಉತ್ಪನ್ನಗಳನ್ನು M Kart ತಕ್ಷಣವೇ ತಲುಪಿಸುತ್ತದೆ. ಹಾಗಾದ್ರೆ ಕೂಡಲೇ ಏನು ಬೇಕೋ ಆರ್ಡರ್ ಮಾಡಿ – 9483929591












