ಇದು ಎಲೆ ಉದುರುವ ಕಾಲ: ತರಗೆಲೆಗಳ ಸುಟ್ಟರೆ ಜೋಕೆ!, ಎಲೆಗಳ ಕುರಿತು ಇಷ್ಟನ್ನುತಿಳಿದುಕೊಳ್ಳಿ: UDUPI XPRESS ಕಾಳಜಿ

ನಿಮ್ಮ ಮನೆ ಅಂಗಳದಲ್ಲಿ ಒಂದಷ್ಟು ಮರಗಳಿರಬಹುದು, ಅಥವಾ ತೋಟದಲ್ಲಿ ಒಂದಷ್ಟು ಗಿಡ ಮರಗಳಿರಬಹುದು. ಆ ಮರಗಳಿಂದ ಚಳಿಗಾಲದಿಂದ ಆರಂಭವಾಗಿ ಎಪ್ರಿಲ್ ವರೆಗೂ ಎಲೆಗಳು ಹಣ್ಣಾಗಿ ಉದುರುತ್ತಿರುತ್ತದೆ. ಇದು ಎಲೆ ಉದುರುವ ಕಾಲ, ಉದುರುವ ಎಲೆಗಳು ಕಸ ಎಂದು ಭಾವಿಸಬೇಡಿ,ಹಾಗಾದ್ರೆ ಉದುರುವ ಎಲೆಗಳು ಏನು? ಅವನ್ನು ಏನ್ ಮಾಡ್ಬೇಕು? ಉದುರುವ ಎಲೆಗಳ ಕುರಿತು ನಮಗೆ ಮಾಹಿತಿ ಇರಲೇಬೇಕು. ಆ ಮಾಹಿತಿಯನ್ನು ನಾವು ನೀಡಿದ್ದೇವೆ. ಇದು ಉಡುಪಿ xpress ಪರಿಸರ ಕಾಳಜಿ ಇನ್ನೇನು ಬೇಸಿಗೆ ಬರುವ ಹೊತ್ತು. ಈಗಾಗಲೇ ಗಿಡ […]

ಹೊಸದಿಲ್ಲಿ: ತೆರಿಗೆ ಮಿತಿ ಹೆಚ್ಚಳದಿಂದ, 1 ಕೋಟಿ ಜನರಿಗೆ ಅನುಕೂಲವಾಗಿದೆ: ನಿರ್ಮಲಾ ಸೀತಾರಾಮನ್‌ ಹೇಳಿಕೆ.

ಹೊಸದಿಲ್ಲಿ: ಆದಾಯ ತೆರಿಗೆ ವಿನಾಯ್ತಿ ಮಿತಿ12ಲಕ್ಷ ರೂ. ಗೆ ಏರಿಸಿರುವುದು “ಜನರ ಧ್ವನಿಗೆ ನೀಡಿರುವ ಸ್ಪಂದನೆ’ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಬಣ್ಣಿಸಿದ್ದಾರೆ. ಬಜೆಟ್‌ ಮಂಡನೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾವು ಮಂಡಿಸಿದ ಆಯವ್ಯಯಕ್ಕೆ ಸಂಬಂಧಿಸಿ ಹಲವು ಮಾಹಿತಿಗಳನ್ನು ನೀಡಿದ್ದಾರೆ. ಆದಾಯ ತೆರಿಗೆ ಮಿತಿಯನ್ನು 12 ಲಕ್ಷ ರೂ.ಗೆ ಏರಿಸಿರುವ ಕಾರಣ ಸರಿಸುಮಾರು 1 ಕೋಟಿ ತೆರಿಗೆದಾರರಿಗೆ ಅನುಕೂಲವಾಗಲಿದ್ದು, ರಿಬೇಟ್‌ ಹೆಚ್ಚಳದಿಂದಾಗಿ ಇವರೆಲ್ಲರೂ ಇನ್ನು ಮುಂದೆ ಆದಾಯ ತೆರಿಗೆ ಪಾವತಿಸಬೇಕಾಗಿರುವುದಿಲ್ಲ ಎಂದಿದ್ದಾರೆ.ನಮ್ಮದು ಸಕಾರಾತ್ಮಕವಾಗಿ ಸ್ಪಂದಿಸುವ […]

ಮುಂಬೈ:ಯಾರ ಪಾಲಾಗಲಿದೆ ʼಐಫಾʼ ಅವಾರ್ಡ್ಸ್ -2025:ಇಲ್ಲಿದೆ ಸಂಪೂರ್ಣ ಪಟ್ಟಿಯ ವಿವರ

ಮುಂಬಯಿ: ಬಾಲಿವುಡ್‌ ಚಿತ್ರರಂಗದ ಜನಪ್ರಿಯ ಪ್ರಶಸ್ತಿ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ (IIFA) ಅವಾರ್ಡ್ಸ್‌ನ ಸಂಪೂರ್ಣ ನಾಮಿನೇಷನ್‌ ಪಟ್ಟಿ ಭಾನುವಾರ (ಫೆ.2ರಂದು) ಹೊರಬಿದ್ದಿದೆ. ಲಾಪತಾ ಲೇಡೀಸ್ʼ, ʼಭೂಲ್ ಭುಲೈಯಾ 3ʼ , ʼಸ್ತ್ರೀ 2ʼ ಚಿತ್ರಗಳು ಜನಪ್ರಿಯ ವಿಭಾಗಗಳಲ್ಲಿ ಹೆಚ್ಚು ನಾಮಿನೇಟ್‌ ಆಗಿದೆ.ಈ ಬಾರಿ ತನ್ನ ʼಐಫಾʼ 25ನೇ ವರ್ಷವನ್ನು ಸಂಭ್ರಮಿಸಲಿದೆ. ಜೈಪುರದಲ್ಲಿ ಮಾರ್ಚ್ 8 ಮತ್ತು 9 ರಂದು ಕಾರ್ಯಕ್ರಮ ನಡೆಯಲಿದೆ. ಬೆಸ್ಟ್‌ ಪಿಕ್ಚರ್, ಬೆಸ್ಟ್ ಡೈರೆಕ್ಷನ್ ‌, ಬೆಸ್ಟ್ ಪರ್ಫಾರ್ಮೆನ್ಸ್ […]

ಫೆ.12, 13ಕ್ಕೆ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೆಂಡಸೇವೆ ಹಾಗೂ ಶ್ರೀ ಮನ್ಮಹಾರಥೋತ್ಸವ ಕಾರ್ಯಕ್ರಮ

ಮಂದಾರ್ತಿ :ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಮನ್ಮಹಾರಥೋತ್ಸವ ಫೆ.13ರಂದು ನಡೆಯಲಿದೆ. ಫೆ.9ರಂದು ಆದಿತ್ಯವಾರ ಬೆಳಿಗ್ಗೆ 9ಗ೦ಟೆ ಯಿ೦ದ ಬಾರಾಳಿ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಗಣಹೋಮ, ರಾತ್ರಿ 8 ಗಂಟೆಯಿಂದ ಶ್ರೀ ಕ್ಷೇತ್ರದಲ್ಲಿ ವಿಶ್ಲೇಶ್ವರ ಪ್ರಾರ್ಥನೆ, ರಂಗಪೂಜೆ (ಹೆಗ್ಗುಂಜೆ ದೊಡ್ಡಮನೆಯವರಿಂದ ಕಟ್ಟುಕಟ್ಟಳೆ) ಫೆ.10 ಸೋಮವಾರ ರಾತ್ರಿ 8 ಗಂಟೆಯಿಂದ ವಿಶೇಷ ಪೂಜೆ, ರಂಗಪೂಜೆ (ಹೆಗ್ಗುಂಜೆ ದೊಡ್ಡಮನೆಯವರಿಂದ ಕಟ್ಟುಕಟ್ಟಳೆ ) ಕಟ್ಟೆಪೂಜೆ, ಫೆ.11 ಮಂಗಳವಾರ ರಾತ್ರಿ 8 ಗಂಟೆಗೆ ರಂಗಪೂಜೆ (ಹೆಗ್ಗಂಜೆ ಹೊಸ ಮನೆಯವರಿಂದ ಕಟ್ಟುಕಟ್ಟಳೆ) ಕಟ್ಟೆಪೂಜೆ, ವಸಂತ […]

ಉಡುಪಿ: ಡಾ.ಭಾಸ್ಕರಾನಂದ ಕುಮಾರ್‌ಗೆ ರಂಗಭೂಮಿ ಪ್ರಶಸ್ತಿ ಪ್ರದಾನ.

ಉಡುಪಿ: ಉಡುಪಿ ರಂಗಭೂಮಿ ವತಿಯಿಂದ ವೈದ್ಯ, ನಾಟಕಕಾರ, ಯಕ್ಷಗಾನ ಕಲಾವಿದ ಡಾ.ಭಾಸ್ಕರಾನಂದ ಕುಮಾರ್ ಅವರಿಗೆ ರಂಗಭೂಮಿ ಪ್ರಶಸ್ತಿಯನ್ನು ರವಿವಾರ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಪ್ರದಾನ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಮಂಗಳೂರು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್, ಕಾಲೇಜಿನ ಪ್ರಾಂಶು ಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ್, ಕಸಾಪ ದ.ಕ. ಜಿಲ್ಲಾ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿದರು. ಉಡುಪಿ ಕೋ ಆರಪೇಟಿವ್ ಟೌನ್ ಬ್ಯಾಂಕಿನ ಅಧ್ಯಕ್ಷ ಎಚ್.ಜಯಪ್ರಕಾಶ್ ಕೆದ್ಲಾಯ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿ […]