ಮನು ಸಂವಿಧಾನದ ವಿರುದ್ಧ ಅಂಬೇಡ್ಕರ್ ಸಂವಿಧಾನ ಮಾತ್ರ ನಮ್ಮ ರಕ್ಷಿಸಲು ಸಾಧ್ಯ

ಉಡುಪಿ: ಇಂದು ದೇಶ ಸಂದಿಗ್ಧ ಸ್ಥಿತಿಯಲ್ಲಿದೆ. ಗಾಂಧಿಯನ್ನು ಕಳೆದುಕೊಂಡ ಈ ದೇಶ ಅನಾಥವಾಗಿ ಹೋಗಿದೆ. ಇಡೀ ದೇಶವನ್ನು ಜಾತಿಧರ್ಮ ಮೀರಿ ಒಂದಾಗಿಸುವಲ್ಲಿ ಗಾಂಧಿ ಹೋರಾಟ ಮಾಡಿದರು. ಈ ಸಮಾಜದಲ್ಲಿನ ಜಾತೀಯತೆ ದೂರವಾಗ ಬೇಕೆಂದು ಧ್ವನಿ ಎತ್ತಿದ್ದ ಗಾಂಧಿಯನ್ನು ಅದೇ ಧ್ವೇಷದಿಂದ ಗುಂಡಿಟ್ಟು ಕೊಲ್ಲಲಾಯಿತು. ಆ ಮೂಲಕ ನಾವು ಮಹಾನ್ ತ್ಯಾಗಿಯನ್ನು ಕಳೆದುಕೊಂಡಿದ್ದೇವೆ ಎಂದು ಕೆಪಿಸಿಸಿ ವಕ್ತಾರ ನಿಕೇತ್‌ ರಾಜ್ ಮೌರ್ಯ ಹೇಳಿದ್ದಾರೆ. ಗಾಂಧಿ ಭಾರತ ಹಿರಿಯಡ್ಕ ಇದರ ಆಶ್ರಯದಲ್ಲಿ ಜೈ ಬಾಪು ಜೈ ಭೀಮ್ ಜೈ ಸಂವಿಧಾನ […]

ಉಡುಪಿ:ಮಕ್ಕಳ ಸಂಬಂಧಿತ ಕಾಯ್ದೆಗಳ ಕುರಿತು ತರಬೇತಿ ಕಾರ್ಯಾಗಾರ

ಉಡುಪಿ: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ ಶಿಕ್ಷಣ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ “ಉಡುಪಿ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ಮಕ್ಕಳ ಸಂಬಂಧಿತ ಕಾಯ್ದೆಗಳ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ” ವು ಬುಧವಾರ ನಗರದ ಮಣಿಪಾಲ್‌ನ ರಜತಾದ್ರಿ ಜಿಲ್ಲಾ ಪಂಚಾಯತ್‌ನ […]

ಕಾರ್ಕಳ ಅತ್ತೂರು ಬಸಿಲಿಕಾ ಮಹೋತ್ಸವಕ್ಕೆ ಅದ್ದೂರಿ ತೆರೆ:  ಸೌಹಾರ್ದತೆ, ಪ್ರೀತಿ, ಸಾಮರಸ್ಯದ ಸಂದೇಶ ಸಾರಿದ ವೈಭವದ ಜಾತ್ರೆ

ಕಾರ್ಕಳ: ಪ್ರಸಿದ್ಧ ಅತ್ತೂರು ಬಸಿಲಿಕಾ ಮಹೋತ್ಸವ ಜನವರಿ 30 ರಂದು ಅದ್ದೂರಿ ತೆರೆಕಂಡಿತು. ಐದು ದಿನಗಳ ಕಾಲ ನಡೆದ ಸಂಭ್ರಮದ ಅತ್ತೂರು ಸಾಂತಮಾರಿ ಲಕ್ಷಾಂತರ ಭಕ್ತರ ತನುಮನವನ್ನು ತಂಪಾಗಿಸಿತು. ಮೊಂಬತ್ತಿ ಹಚ್ಚಿ ತಮ್ಮ ಹರಕೆಗಳನ್ನು ಈಡೇರಿಸುವಂತೆ ಸಂತ ಲಾರೆನ್ಸರಲ್ಲಿ ಪ್ರಾರ್ಥಿಸಿ ಪಾವನರಾದರು. ಈ ಸಲದ ಮಹೋತ್ಸವದ ಸಂದೇಶ “ಭರವಸೆ ನಿಮ್ಮನ್ನು ನಿರಾಶೆ ಮಾಡುವುದಿಲ್ಲ”ಎಂದಾಗಿತ್ತು. ಮಹೋತ್ಸವದ ಅಷ್ಟೂ ದಿನ ಬಲಿಪೂಜೆಗಳ ಮೂಲಕ, ವಿಶೇಷ ಪೂಜೆಗಳ ಮೂಲಕ, ದಿವ್ಯ ಸಂದೇಶಗಳ ಮೂಲಕ ಮಹೋತ್ಸವ ಈ ಘೋಷವಾಕ್ಯವನ್ನು ಸಾರ್ಥಕಗೊಳಿಸಿತು. ಜ. 30 […]

ಉಡುಪಿ:ಕೌಶಲ್ಯಾಭಿವೃದ್ಧಿ ತರಬೇತಿ : ಅರ್ಜಿ ಆಹ್ವಾನ

ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ.ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು ಎಂಟರ್‌ಪ್ರಿನೋರ್‌ಶಿಪ್ ವಿಷಯದ ಬಗ್ಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ತಿಂಗಳ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡುವುದು ಹಾಗೂ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟೀನ್ ನಡೆಸಲು ಗರಿಷ್ಟ 5 ಲಕ್ಷ ರೂ. ಗಳ ಸಹಾಯಧನ ನೀಡಲು ಉದ್ದೇಶಿಸಲಾಗಿದ್ದು, ಸದರಿ ತರಬೇತಿ ಹಾಗೂ ಸಹಾಯಧನಕ್ಕಾಗಿ ಜಿಲ್ಲೆಯ ಪ.ಜಾತಿಗೆ ಸೇರಿದ 04 ಅಭ್ಯರ್ಥಿಗಳಿಗೆ ಹಾಗೂ ಪ.ಪಂಗಡಕ್ಕೆ ಸೇರಿದ 03 […]

ಉಡುಪಿ:ಪತ್ರ ಲೇಖನ ಸ್ಪರ್ಧೆ

ಉಡುಪಿ: ಅಂಚೆ ಇಲಾಖೆಯ ವತಿಯಿಂದ ಯು.ಪಿ.ಯು ಇಂಟರ್‌ನ್ಯಾಷನಲ್ ಲೆಟರ್ ರೈಟಿಂಗ್ ಕಾಂಫಿಟೇಶನ್ ಪ್ರಯುಕ್ತ 9 ರಿಂದ 15 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಇಮ್ಯಾಜಿನ್ ಯು ಆರ್ ದ ಓಷನ್. ರೈಟ್ ಎ ಲೆಟರ್ ಟು ಸಮ್‌ಒನ್ ಎಕ್ಸ್ಪ್ಲೇನಿಂಗ್ ವೈ ಅಂಡ್ ಹೌ ದೇ ಶುಡ್ ಟೇಕ್ ಗುಡ್ ಕೇರ್ ಆಫ್ ಯು ವಿಷಯದ ಕುರಿತು ಪತ್ರಲೇಖನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧಾಳುಗಳು ಪತ್ರಲೇಖನವನ್ನು ಹಿಂದಿ, ಇಂಗ್ಲೀಷ್ ಅಥವಾ ಪ್ರಾದೇಶಿಕ ಭಾಷೆಯಲ್ಲಿ 800 ಶಬ್ದಗಳು ಮೀರದಂತೆ ಕೈಬರಹದಲ್ಲಿ ನಿಗಧಿಪಡಿಸಿದ ಕೇಂದ್ರದಲ್ಲಿ ಬರೆಯಬಹುದಾಗಿದೆ. […]