ಕಟಪಾಡಿ:ನಾವು ಸರಿದಾರಿಯಲ್ಲಿ ಸಾಗಿದಾಗ ದೇಶ ವಿಶ್ವ ಗುರುವಾಗುತ್ತದೆ

ಕಟಪಾಡಿ: ಕಟಪಾಡಿಯಯ ಎಸ್.ವಿ.ಎಸ್ ವಿದ್ಯಾವರ್ಧಕ ಸಂಘ ಹಾಗೂ ತ್ರಿಶಾ ಸಂಸ್ಥೆಯ ವತಿಯಿಂದ 76ನೇ ಗಣರಾಜ್ಯೋತ್ಸವನ್ನು ಕಟಪಾಡಿಯ ಎಸ್.ವಿ.ಎಸ್ ಶಾಲಾ ಮೈದಾನದಲ್ಲಿ ಧ್ವಜಾರೋಹಣ ಮಾಡುವುದರ ಮುಖಾಂತರ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಶಿವಕುಮಾರ್ ಅವರು ದ್ವಜಾರೋಹಣ ನೆರ ವೇರಿಸಿ, ನಮ್ಮ ದೇಶ ಒಗ್ಗೂಡುವುದ್ದಕ್ಕೆ‌ ಕಾರಣೀಕರ್ತರಾದ ನಮ್ಮೆಲ್ಲಾ ಹಿರಿಯರನ್ನು ಸದಾ ಸ್ಮರಿಸುತ್ತಾ, ನಾವು ಸರಿದಾರಿಯಲ್ಲಿ ಸಾಗಿದಾಗ ದೇಶ ವಿಶ್ವಗುರುವಾಗುತ್ತದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸಿಎ […]

ಉಡುಪಿಯ ಶಾರದಾ ವಸತಿ ಶಾಲೆಗೆ ಬಂದಿರುವುದು ಹುಸಿ ಬಾಂಬ್ ಬೆದರಿಕೆ ಕರೆ – ಎಸ್ಪಿ ಡಾ. ಕೆ ಅರುಣ್ ಸ್ಪಷ್ಟನೆ

ಉಡುಪಿ: ಉಡುಪಿ ನಗರ ಠಾಣಾ ವ್ಯಾಪ್ತಿಯ ಶಾರದಾ ವಸತಿ ಶಾಲೆಗೆ ಇಮೇಲ್ ನಲ್ಲಿ ಅನಾಮಧೇಯ ವ್ಯಕ್ತಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಪ್ರಾಂಶುಪಾಲರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದು, ತಕ್ಷಣ ಬಿಡಿಡಿಎಸ್ ತಂಡದಿಂದ ಪರಿಶೀಲನೆ ನಡೆಸಿದ್ದೇವೆ. ಈ ವೇಳೆ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಮೇಲ್ನೋಟಕ್ಕೆ ಇದೊಂದು ಹುಸಿ ಬಾಂಬ್ ಕರೆ ಎಂದು ತಿಳಿದುಬಂದಿದೆ ಎಂದು ಎಸ್ಪಿ ಡಾ. ಅರುಣ್ ತಿಳಿಸಿದ್ದಾರೆ. ಹುಸಿ ಬಾಂಬ್ ಬೆದರಿಕೆಯ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದೇವೆ. ಇಮೇಲ್ […]

ಉಡುಪಿ: ಬಸ್ಸಿನಿಂದ ಇಳಿಯುವಾಗ ಆಯತಪ್ಪಿ ಬಿದ್ದ ಮಹಿಳೆ: ಅದೇ ಬಸ್ಸಿನಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ ವಿಶು ಶೆಟ್ಟಿ

ಉಡುಪಿ: ಉಡುಪಿ ನಗರದ ಪುತ್ತೂರು ಬಳಿ ಸರಕಾರಿ ಬಸ್ ನಿಂದ ಕೆಳಗಿಳಿಯುವ ಸಂದರ್ಭದಲ್ಲಿ ಪ್ರಯಾಣಿಕ ಮಹಿಳೆಯೋರ್ವರು ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಸಂಭವಿಸಿದೆ. ವಿಷಯ ತಿಳಿದ ಸಮಾಜ ಸೇವಕ ವಿಶು ಶೆಟ್ಟಿ ಅವರು ಗಾಯಾಳು ಮಹಿಳೆಯನ್ನು ಅದೇ ಬಸ್‌ನ ಮೂಲಕ ಕರೆ ತಂದು ಜಿಲ್ಲಾಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಹಿಳೆಯನ್ನು ಉಡುಪಿ ಹನುಮಂತ ನಗರದ ನಿವಾಸಿ ಶಾಂತಾ (55) ಎಂದು ಗುರುತಿಸಲಾಗಿದೆ. ಮಹಿಳೆ ಕೆಳಕ್ಕೆ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಅವರ ಬಲತೋಳಿನ ಮೂಳೆ […]

ಪುಷ್ಪಾ 2, ಜ. 30 ರಂದು OTT ಯಲ್ಲಿ ರಿಲೀಸ್: ದಾಖಲೆ ಮೊತ್ತಕ್ಕೆ ಸೇಲ್ ಆಯ್ತಾ ಸಿನಿಮಾ!

ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರ ಇನ್ನೂ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಸದ್ದು ಮಾಡುತ್ತಲೇ ಇದೆ. ಆದ್ರೂ ಚಿತ್ರ ರಿಲೀಸಾಗಿ ತುಂಬಾ ದಿನಗಳಾಗಿರುದರಿಂದ ಓಟಿಟಿಯಲ್ಲಿ ಆದಷ್ಟು ಬೇಗ ಚಿತ್ರ ನೋಡಲು ಅಭಿಮಾನಿಗಳು ಕಾತರಗೊಂಡಿದ್ದಾರೆ, ಈ ನಡುವೆ ಜನವರಿ ಅಂತ್ಯದ ವೇಳೆಗೆ ನೆಟ್‌ಫ್ಲಿಕ್ಸ್ನಲ್ಲಿ ಪುಷ್ಪ 2 ಸಿನಿಮಾ ಸ್ಟ್ರೀಮ್ ಆಗುವ ಸಾಧ್ಯತೆಯಿದೆ. ಸಿನಿಮಾ ಬಿಡುಗಡೆಯಾಗಿ 56 ದಿನಗಳಾದ ಬಳಿಕ ಓಟಿಟಿಗೆ ಬರಲಿದೆ. ಜನವರಿ 17 ರಂದು ಚಿತ್ರತಂಡ 20 ನಿಮಿಷಗಳ ಹೆಚ್ಚುವರಿ ದೃಶ್ಯಗಳನ್ನು ಪುಷ್ಪ 2 ಗೆ […]

ಹೆಮ್ಮಾಡಿ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಗಣೇಶ ಮೊಗವೀರ ಅವರಿಗೆ ಮಂತ್ರಾಲಯ ಮಠದ ಶ್ರೀ ಪರಿಮಳ ಪ್ರಶಸ್ತಿ 2025.

ಕುಂದಾಪುರ: DCX ಸಿಸ್ಟಮ್ಸ್ ಲಿಮಿಟೆಡ್ ಅರ್ಪಿಸುವ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲಮಹಾಸಂಸ್ಥಾನ,ಶ್ರೀರಾಘವೇಂದ್ರ ಸ್ವಾಮಿಗಳವರ ಮಠ, ಮಂತ್ರಾಲಯದ ಪರಮ ಪೂಜ್ಯ ಪೀಠಾದಿಪತಿಗಳಾದ ಡಾ|| ಪರಮಪೂಜ್ಯ ಶ್ರೀ ಶ್ರೀ ಶ್ರೀ 108 ಶ್ರೀಮತ್ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ದಿವ್ಯ ಸಾನಿಧ್ಯದಲ್ಲಿ ಕೊಡಮಾಡುವ ಪ್ರತಿಷ್ಠಿತ ಶ್ರೀ ಪರಿಮಳ ಪ್ರಶಸ್ತಿ 2025 ಈ ಪ್ರಶಸ್ತಿಗೆ ಹೆಮ್ಮಾಡಿ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ರೂವಾರಿ, ಶಿಕ್ಷಣ ಕ್ಷೇತ್ರದ ಕನಸುಗಾರ ಗಣೇಶ್ ಮೊಗವೀರ ಅವರನ್ನು ಆಯ್ಕೆ ಮಾಡಲಾಗಿದ್ದು, ಇದುವರೆಗೆ ಇವರು ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ […]