ಉಡುಪಿ:ಕ್ಲಿನಿಕ್‌ನಲ್ಲಿ ವಿವಿಧ ಹುದ್ದೆ: ಅರ್ಜಿ ಆಹ್ವಾನ

ಉಡುಪಿ: ಆರೋಗ್ಯ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪಿ.ಎಂ.ಎ.ಬಿ.ಹೆಚ್.ಐ.ಎಂ ಯೋಜನೆಯಡಿ ಹೊಸದಾಗಿ ಅನುಮೋದನೆಗೊಂಡ ನಮ್ಮ ಕ್ಲಿನಿಕ್‌ಗಳಲ್ಲಿ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜನವರಿ 28 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ udupi.nic.in ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕು.ಕ ಸಂಘದ ಕಚೇರಿ ಪ್ರಕಟಣೆ ತಿಳಿಸಿದೆ.

ಅಮೆರಿಕದ 47 ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕಾರ.

ವಾಶಿಂಗ್ಟನ್ : ಡೊನಾಲ್ಡ್ ಟ್ರಂಪ್ ಅಮೆರಿಕದ 47 ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಾಂಪ್ರದಾಯಿಕವಾಗಿ ಕ್ಯಾಪಿಟಲ್‌ನ ರಮಣೀಯ ವೆಸ್ಟ್ ಲಾನ್‌ನಲ್ಲಿರುವ ಬೃಹತ್ ತಾತ್ಕಾಲಿಕ ವೇದಿಕೆಯಲ್ಲಿ ನಡೆಯುತ್ತಿದ್ದ ನೂತನ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಶೀತ ಮುನ್ಸೂಚನೆಯಿಂದಾಗಿ ಒಳಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ನೂತನ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೂಡ ಪ್ರಮಾಣ ವಚನ ಸ್ವೀಕರಿಸಿದರು. ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾದ ಬಳಿಕ 100 ಆದೇಶಗಳಿಗೆ ಸಹಿ ಮಾಡುವ ನಿರೀಕ್ಷೆಯಿದೆ.

ಉಡುಪಿ: “ಬೃಂದಾವನದಿಂದ ಉಡುಪಿಯೆಡೆಗೆ” ಕಲಾಕೃತಿಗಳ ಕಲಾ ಪ್ರದರ್ಶನ

ಉಡುಪಿ: ಭಾವನಾ ಪೌಂಡೇಶನ್(ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ, ಉಡುಪಿಯ ಮಧುರಂ ವೈಟ್ ಲೋಟಸ್ ಹೋಟೇಲ್‌ನ ಸಹಯೋಗದಲ್ಲಿ “ಬೃಂದಾವನದಿ೦ದ ಉಡುಪಿಯೆಡೆಗೆ” ಶೀರ್ಷಿಕೆಯಡಿಯಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶ್ರೀರಾಮ ಸೋನಿಯವರ ಮಥುರಾದ ಸಾಂಝಿ ಪೇಪರ್ ಕಲಾಕೃತಿಗಳ ಕಲಾ ಪ್ರದರ್ಶನವನ್ನು ಹತ್ತು ಮೂರು ಇಪ್ಪತ್ತೆಂಟು, ಬಡಗುಪೇಟೆಯ ಗ್ಯಾಲರಿಯಲ್ಲಿ ಆಯೋಜಿಸುತ್ತಿದೆ. ದಿನಾಂಕ 22ನೇ ಬುಧವಾರ ಸಂಜೆ 4.30ಕ್ಕೆ ಉಡುಪಿಯ ಆರ್ಕಿಟೆಕ್ಟ್ ಶ್ರೀಜಾ ಜಯಕುಮಾರ್ ಕಲಾಪ್ರದರ್ಶನವನ್ನು ಉದ್ಘಾಟಿಸಲಿದ್ದು, ಫೌಂಡೇಶನ್‌ನ ನಿರ್ದೇಶಕರಾದ ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿರುತ್ತಾರೆ. ಭಾರತೀಯ ದೇಶೀಯ ಕಲೆಯಾದ […]

ಕಾರ್ಕಳ ಯಕ್ಷ ರಂಗಾಯಣದ ನಾಟಕೋತ್ಸವದಲ್ಲಿ ಹೀಗೊಂದು ಅದ್ವಾನ: ರಾಶಿ ರಾಶಿ ಮಕ್ಕಳನ್ನು ಸೇರಿಸಿ ನಿಜವಾದ ನಾಟಕ ಪ್ರಿಯರಿಗೆ ಮೋಸ, ಪ್ರೇಕ್ಷಕರ ಆಕ್ರೋಶ

ಕಾರ್ಕಳ: ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ಕಾರ್ಕಳದ ಯಕ್ಷ ರಂಗಾಯಣ ನಾಟಕೋತ್ಸವ ಈಗ ಸುದ್ದಿಯಲ್ಲಿದೆ. ಅಂದ ಹಾಗೆ ನಾಟಕಗಳ ಕಾರಣಕ್ಕೆ ಸುದ್ದಿಯಲ್ಲಿಲ್ಲ, ಬದಲಾಗಿ  ಸಣ್ಣ ಮಕ್ಕಳನ್ನು ಸಭಾಂಗಣದ ತುಂಬ ತುಂಬಿಸಿ ಸದಭಿರುಚಿ ಪ್ರೇಕ್ಷಕರನ್ನು ನಿರಾಶೆ ಮಾಡುತ್ತಿರುವುದಕ್ಕೆ ಕಾರ್ಕಳ ರಂಗಾಯಣ ಸುದ್ದಿಯಲ್ಲಿದೆ. ಸ್ಥಳೀಯ ಖಾಸಗಿ  ಶಾಲೆಯ, ವಸತಿ ಶಾಲೆಯ, ಕಾಲೇಜಿನ ಪ್ರಾಂಶುಪಾಲರು, ಮುಖ್ಯಸ್ಥರು ಕೆಲವು ವಿದ್ಯಾರ್ಥಿಗಳನ್ನು ವತ್ತಾಯಪೂರ್ವಕವಾಗಿ ಸಭಾಂಗಣದಲ್ಲಿ ತುಂಬಿಸಿರುವ ಮಾಹಿತಿ ವಿದ್ಯಾರ್ಥಿಗಳಿಂದಲೇ ದೊರೆತಿದ್ದು ರಂಗಾಸಕ್ತರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಹೌದು ಜ. 19 […]

ಮಂಗಳೂರು: ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಅಂತರ-ಕಾಲೇಜು ಉತ್ಸವ ಸಿಂಟ್ಯಾಕ್ಸಿಯಾ-2025 ಉದ್ಘಾಟನೆ.

ಮಂಗಳೂರು: ಸೇಂಟ್ ಜೋಸೆಫ್ ವಿಶ್ವವಿದ್ಯಾನಿಲಯದ ಮಾಹಿತಿ ತಂತ್ರಜ್ಞಾನ ಶಾಲೆಯ ಕಂಪ್ಯೂಟರ್ ಸೈನ್ಸ್ ವಿಭಾಗವು ಜನವರಿ 16ರಂದು ಅಂತರ-ಕಾಲೇಜು ಉತ್ಸವವಾದ ಸಿಂಟ್ಯಾಕ್ಸಿಯಾ-2025ರ ಭವ್ಯ ಉದ್ಘಾಟನೆಯನ್ನು ಆಯೋಜಿಸಿತು. ಈ ಕಾರ್ಯಕ್ರಮವು ನವೀನತೆ, ಸಹಯೋಗ ಮತ್ತು ಪ್ರತಿಭೆಯ ಆಚರಣೆಗೆ ಒಂದು ವೇದಿಕೆಯಾಯಿತು. ಮುಖ್ಯ ಅತಿಥಿಯಾಗಿ ಗಣ್ಯ ತಂತ್ರಜ್ಞರಾದ ಅಶೋಕ್ ಪಿರೇರಾ ಅವರು ಈ ಸಂದರ್ಭದಲ್ಲಿ ಭಾಗವಹಿಸಿದರು. ಇದರೊಂದಿಗೆ ಫಾದರ್ ಡೆನ್ಸಿಲ್ ಲೋಬೋ ಎಸ್.ಜೆ., ಡಾ. ಬಿ.ಜಿ. ಪ್ರಶಾಂತಿ, ಡಾ. ನಿತ್ಯಾ ಬಿ, ಸೈಬರ್ನೆಟಿಕ್ಸ್ ಕೋರ್ಡಿನೇಟರ್ ಡಾ. ಶಶಿಕಲಾ ಮತ್ತು ಟೆಕ್ನೋಫೈಟ್ ಕೋರ್ಡಿನೇಟರ್ […]