ಅಪ್ರಾಪ್ತ ಬಾಲಕಿಯ ಅತ್ಯಾಚಾರ: ಆರೋಪಿಗೆ 20 ವರ್ಷ ಕಠಿನ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ.

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಅದನ್ನು ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್ಟಿಎಸ್‌ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಮಾನು ಕೆ.ಎಸ್‌. ಅವರು 20 ವರ್ಷಗಳ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಹೆಬ್ರಿ ಮುದ್ರಾಡಿಯ ಅಶ್ವತ್ಥ್ (22) ಶಿಕ್ಷೆಗೊಳಗಾದ ಆರೋಪಿ. ಇನ್‌ಸ್ಟಾಗ್ರಾಂ ಮೂಲಕ ಬಾಲಕಿಯ ಸ್ನೇಹ ಬೆಳೆಸಿದ ಅಶ್ವತ್ಥ್ ಆಕೆಯನ್ನು ಭೇಟಿಯಾಗುವಂತೆ […]

ಮಂಗಳೂರು: ತ್ರಿಶಾ ಕ್ಲಾಸಸ್‌ ವತಿಯಿಂದ ಸಿಎ ಫೈನಲ್ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಮಂಗಳೂರು: ಸಿ.ಎ ಸಿ.ಎಸ್ ಮೊದಲಾದ ವೃತ್ತಿಪರ ಕೋರ್ಸ್‌ಗಳಿಗಾಗಿ ತರಬೇತಿ ನೀಡುತ್ತಿರುವ ತ್ರಿಶಾ ಕ್ಲಾಸಸ್ ವತಿಯಿಂದ ಸಿಎ ಫೈನಲ್ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಮಂಗಳೂರಿನ ತ್ರಿಶಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತ್ರಿಶಾ ಸಂಸ್ಥೆಯ ಸಂಸ್ಥಾಪಕರು ಸಿಎ ಗೋಪಾಲ್ ಕೃಷ್ಣಭಟ್‌ ಅವರು, ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಸಿ ಎ ಪದವೀಧರರಿಗೆ ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ತ್ರಿಶಾ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಡಾ. ನಾರಾಯಣ್ ಕಾಯರ್ ಕಟ್ಟೆ ಅವರು “ಹೊಸ ವಿಷಯಗಳ […]

ಉಡುಪಿ:ಆಶಾ ಜುವೆಲ್ಲರ್ಸ್ ನಲ್ಲಿ ಮಾರಾಟ ಸಿಬ್ಬಂದಿ(Sales staff)ಕೆಲಸಕ್ಕೆ ಬೇಕಾಗಿದ್ದಾರೆ.

ಉಡುಪಿ:ಆಶಾ ಜುವೆಲ್ಲರ್ಸ್ ನಲ್ಲಿ ಮಾರಾಟ ಸಿಬ್ಬಂದಿ(Sales staff)ಕೆಲಸಕ್ಕೆ ನೇಮಕಾತಿ ನಡೆಯಲಿದೆ. ಅರ್ಹತೆಗಳು: ◼ ಜ್ಯುವೆಲರಿ ಕ್ಷೇತ್ರದಲ್ಲಿ 1-2 ವರ್ಷಗಳ ಕೆಲಸದ ಅನುಭವ ಇರಬೇಕು. ◼ ವಿದ್ಯಾರ್ಹತೆ B.COM & ಬೇಸಿಕ್ ಕಂಪ್ಯೂಟರ್ ಕಾರ್ಯಾಚರಣೆಗಳ ಜ್ಞಾನ ಹೊಂದಿರಬೇಕು. ನಿಮ್ಮ ಆಧಾರ್ ಕಾರ್ಡ್‌ನ ಫೋಟೋ ಕಾಪಿಯೊಂದಿಗೆ ರೆಸ್ಯಮ್ (CV )ಅನ್ನು ತರತಕ್ಕದ್ದು. ಸ್ಥಳ: ಕನಕದಾಸ ರಸ್ತೆ ಉಡುಪಿ-01 📩[email protected] 0820-2526514

ಪ್ರೇಕ್ಷಕನ ಎದೆಯೊಳಗೆ ವಿಭಿನ್ನ ಲೋಕ ಸೃಷ್ಟಿಸಿದ “ದಸ್ಕತ್”: ನೋಡಿದ ಮೇಲೂ ಮತ್ತೆ ಮತ್ತೆ ಕಾಡುವ ಒಂದು ಅದ್ಬುತ ಅನುಭವ

ಬರಹ: ಪ್ರಸಾದ ಶೆಣೈ ” ದಸ್ಕತ್” ತನ್ನ ಗ್ರಾಮ್ಯ ಜೀವನದ ಸಮೃದ್ಧ ಫೀಲ್ ಕೊಡುವ, ನಮ್ಮೂರಿನ ಕತೆಯೇ ಇದು ಅನ್ನುವ ಭಾವ ಮೂಡಿಸುವ ಒಂದೊಳ್ಳೆಯ ತುಳು ಸಿನಿಮಾ. ಸತ್ವಯುತವಾದ ಕತೆಯನ್ನು ಅದೆಷ್ಟು ಸಹಜವಾಗಿ, ಹೃದ್ಯವಾಗಿ ಕಟ್ಟಿಕೊಟ್ಟಿದ್ದಾರೆಂದರೆ ಕೇಪುಳಪಲ್ಕೆಯ ಹಸಿರು, ಅಲ್ಲಿನ ರಾತ್ರಿ, ಅಲ್ಲಿನ ಭಾಷೆ, ಅಲ್ಲಿನ ಹಾಡು, ಅಲ್ಲಿನ ಮೌನ, ಅಲ್ಲಿನ ಪಂಚಾಯತ್ ಕಚೇರಿ, ಎಲ್ಲಿಗೋ ಕರೆದೊಯ್ಯುವ ಅಲ್ಲಿನ ಪುಟ್ಟ ಪುಟ್ಟ ಮನೆಗಳು, ಅಲ್ಲಿನ ಆಚರಣೆ, ಅಲ್ಲಿನ ಹುಲಿವೇಷ, ಎಲ್ಲವೂ ನೋಡುತ್ತ ನೋಡುತ್ತ ನಮ್ಮದಾಗುತ್ತ ಹೋಗುತ್ತದೆ. ಅದೆಷ್ಟು […]

ಗುಲ್ವಾಡಿ ಹಾಡಿದೈವದ ಮನೆಯ ಪರಿವಾರ ದೈವಗಳ ನೂತನ ಶಿಲಾಮಯ ಗುಡಿ ಉದ್ಘಾಟನೆ, ಬ್ರಹ್ಮಕಲಶಾಭಿಷೇಕ

ಉಡುಪಿ: ದೈವ ದೇವರ ಬಗ್ಗೆ ನಮ್ಮಲ್ಲಿ ಭಯಭಕ್ತಿಗಳು ತುಂಬಿರಬೇಕು. ಯಾರಿಗೂ ಕಾಣಿಸದಿರುವ ಹಾಗೆ ಅಪರಾಧಗಳನ್ನು ಮಾಡಿದರೂ ಅದು ದೈವದೇವರಿಗೆ ಮೋಸ ಮಾಡಲು ಸಾಧ್ಯವಿಲ್ಲ ಎಂಬ ಸತ್ಯ ಅರಿತಾಗ ಮಾನವ ನ್ಯಾಯ, ಧರ್ಮದ ದಾರಿಯಲ್ಲಿ ನಡೆಯುತ್ತಾನೆ. ದೈವದೇವರ ಭಯ ಸನ್ಮಾರ್ಗದಲ್ಲಿ ನಡೆಸಲು ಪ್ರೇರಣೆ ನೀಡುತ್ತದೆ. ನಮ್ಮ ಭಕ್ತಿ , ಶೃದ್ಧೆ, ನಂಬಿಕೆಗಳು ಗಟ್ಟಿಯಾಗಿ ಬೆಳೆಯಬೇಕಾದರೆ ಆ ಶೃದ್ಧಾ ಕೇಂದ್ರಗಳು ಚೆನ್ನಾಗಿ ಅಭಿವೃದ್ಧಿ ಹೊಂದಿರಬೇಕು ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥರು ಹೇಳಿದರು. ಅವರು ಬುಧವಾರ ಕುಂದಾಪುರ ಗುಲ್ವಾಡಿ […]