ಉಡುಪಿ: ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಭೋವಿ ಜನಾಂಗದಿಂದ ಧರಣಿ

ಉಡುಪಿ: ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಭೋವಿ ಸಮಾಜ ಸೇವಾ ಸಂಘದ ವತಿಯಿಂದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಂದು ಧರಣಿ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕರ್ನಾಟಕ ರಾಜ್ಯ ಮೂಲ ಭೋವಿ ಜನಾಂಗದವರು ಸರಕಾರದ ವಿರುದ್ಧ ದಿಕ್ಕಾರ ಕೂಗಿದರು. ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯ 101 ಜಾತಿಗಳ ಪೈಕಿ ಕ್ರಮ ಸಂಖ್ಯೆ 23ರಲ್ಲಿ ಭೋವಿ ಜನಾಂಗದ ಬಗ್ಗೆ ಉಲ್ಲೇಖವಿದೆ. ಅದರಂತೆ 1977ರಿಂದ ನಾವು ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದೇವೆ. […]
ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸಾರ್ವಜನಿಕರಿಗಾಗಿ ಮುದ್ದುಕೃಷ್ಣ ಸ್ಪರ್ಧೆ.

ಉಡುಪಿ: ಪದ್ಮಶಾಲಿ ಯುವ ವೇದಿಕೆ, ಆದಿಶಕ್ತಿ ಪದ್ಮಶಾಲಿ ಮಹಿಳಾ ವೇದಿಕೆ, ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನ ಅಂಚೆ ಸಂತೆಕಟ್ಟೆ ಕಲ್ಯಾಣಪುರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸಾರ್ವಜನಿಕರಿಗಾಗಿ ಮುದ್ದುಕೃಷ್ಣ ಸ್ಪರ್ಧೆ. ದಿನಾಂಕ : 18-08-2024, ಆದಿತ್ಯವಾರ, ಅಪರಾಹ್ನ ಗಂಟೆ 2-30ಕ್ಕೆ, ಸ್ಥಳ : ದೇವಸ್ಥಾನದ ಸಭಾಂಗಣ. ಸ್ಪರ್ಧಾ ವಿಭಾಗಗಳು : 2 ವರ್ಷಗಳ ವರೆಗೆ, 2 ವರ್ಷಕ್ಕೆ ಮೇಲ್ಪಟ್ಟು 4 ವರ್ಷಗಳ ವರೆಗೆ, 4 ವರ್ಷಕ್ಕೆ ಮೇಲ್ಪಟ್ಟು 6 ವರ್ಷಗಳ ವರೆಗೆ ನಿಯಮಗಳು:- 1. ಸ್ಪರ್ಧಾಳುಗಳು ಸ್ಪರ್ಧೆ […]
ಉಡುಪಿಯಲ್ಲಿ ನಾಗರಪಂಚಮಿ ಹಬ್ಬಕ್ಕೆ ಭರದ ಸಿದ್ಧತೆ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ನಾಗರಪಂಚಮಿ ಉತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ದೇವರಿಗೆ ಹೂ, ಹಣ್ಣು ಖರೀದಿ ಭರಾಟೆ ಜೋರಾಗಿದೆ. ವ್ಯಾಪಾರ ಚಟುವಟಿಕೆ ಚುರುಕುಗೊಂಡಿದ್ದು, ಹೊರ ಜಿಲ್ಲೆಗಳಿಂದ ಆಗಮಿಸಿದ ವ್ಯಾಪಾರಿಗಳು ರಥಬೀದಿ, ಸರ್ವಿಸ್ ಬಸ್ ನಿಲ್ದಾಣ, ಆದಿ ಉಡುಪಿ, ಕೆ.ಎಂ. ಮಾರ್ಗ, ಚಿತ್ತರಂಜನ್ ವೃತ್ತ, ಮಣಿಪಾಲ ಮೊದಲಾದ ಕಡೆ ಟೆಂಟ್ ಹಾಕಿ ಕೇದಗೆ, ಸಿಂಗಾರ ಹೂವು, ಸೀಯಾಳ, ಕೆಂದಾಳೆ ಮಾರಾಟದಲ್ಲಿ ತೊಡಗಿದ್ದಾರೆ. ಪ್ರಮುಖವಾಗಿ ನಾಗದೇವರಿಗೆ ಪ್ರಿಯವಾಗಿರುವ ಹಿಂಗಾರ, ಅರಿಶಿಣ ಎಲೆ, ಕೇದಗೆ ಹೂ ಬೇಡಿಕೆ ಹೆಚ್ಚಿದೆ. ಈ ವರ್ಷ […]
ಕೋಟದಲ್ಲಿ ನೆರೆ ಸಂತ್ರಸ್ತರು, ರೈತರಿಂದ ಧರಣಿ ಸತ್ಯಾಗ್ರಹ; ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹ

ಉಡುಪಿ: ಮಣೂರು, ಗಿಳಿಯಾರು, ಚಿತ್ರಪಾಡಿ, ಬನ್ನಾಡಿ, ಕಾರ್ಕಡ ಗ್ರಾಮದ ಕೃತಕ ನೆರೆ ಸಂತ್ರಸ್ತ ರೈತರು ವಿವಿಧ ಹಕ್ಕೋತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೋಟ ಶ್ರೀಹಿರೇಮಹಾಲಿಂಗೇಶ್ವರ ದೇವಾಲಯದ ಜಾತ್ರಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು. ತೆಕ್ಕಟ್ಟೆ ಗ್ರಾಮದ ಮಲ್ಯಾಡಿಯಿಂದ ಹೊಸಾಳ ಗ್ರಾಮದ ನಾಗರಮಠ ಚೆಕ್ ಡ್ಯಾಮ್‌ವರೆಗೆ, ಸೂಲಡ್ಪು- ಮಡಿವಾಳಸಾಲು ಹೊಳೆಯ ನದಿಪಾತ್ರ ಗುರುತಿಸಿ ಅದರ ಹೂಳು ತೆಗೆಯಬೇಕು. ಮಣೂರು ಗ್ರಾಮದ ಕೊಕೂರು, ಗಿಳಿಯಾರು ಗ್ರಾಮದಜ ಸೂಲಡ್ಪು, ಚಿತ್ರಪಾಡಿ ಗ್ರಾಮದ ಕೋಟ- ಸಾಬ್ರಕಟ್ಟೆ ರಸ್ತೆ ಮತ್ತು ಬೈಕೂರು ಬೈಲು ಎಂಬಲ್ಲಿ ಈಗಿರುವ […]
ಉಡುಪಿ: ಎರಡು ವರ್ಷದ ಮಗಳೊಂದಿಗೆ ತಾಯಿ ನಾಪತ್ತೆ.

ಉಡುಪಿ: ಮಹಿಳೆಯೊಬ್ಬರು ತನ್ನ ಎರಡು ವರ್ಷದ ಹೆಣ್ಣು ಮಗುವಿನೊಂದಿಗೆ ನಾಪತ್ತೆಯಾಗಿರುವ ಘಟನೆ ಕಾಪು ತಾಲೂಕಿನ ಮಲ್ಲಾರು ಫಕೀರಣಕಟ್ಟೆ ಎಂಬಲ್ಲಿ ನಡೆದಿದೆ. ನಾಪತ್ತೆಯಾದ ಮಹಿಳೆಯನ್ನು ಮಲ್ಲಾರು ಫಕೀರಣಕಟ್ಟೆ ನಿವಾಸಿ ನಸೀದಾ (27) ಎಂದು ಗುರುತಿಸಲಾಗಿದೆ. ನಸೀದಾ ಅವರು ಗಂಡನೊಂದಿಗೆ ವಿಚ್ಛೇದನ ಪಡೆದುಕೊಂಡು, ಕಳೆದ ಒಂದು ವರ್ಷದಿಂದ ಮಗಳೊಂದಿಗೆ ತಾಯಿ ಮನೆಯಲ್ಲಿ ವಾಸವಾಗಿದ್ದರು. ಆ.4ರಂದು ಬೆಳಿಗ್ಗೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಚಿನ್ನ, ಹಣ ಮತ್ತು ಮೊಬೈಲ್ ತೆಗೆದುಕೊಂಡು ತನ್ನ ಎರಡು ವರ್ಷದ ಮಗುವಿನೊಂದಿಗೆ ಕಾಣೆಯಾಗಿದ್ದಾರೆ. ಅವರ ಮೊಬೈಲ್ ಕೂಡ […]