ಕುಂದಾಪುರ: ಕಟ್ಟಡದಿಂದ ಬಿದ್ದು ವ್ಯಕ್ತಿ ಮೃತ್ಯು.

ಕುಂದಾಪುರ: ತಾಲೂಕಿನ ಕುಂಭಾಶಿ ಗ್ರಾಮದಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಕಳದ ಕಾರ್ತಿಕ್‌ ರಾವ್‌ (46) ಮೃತಪಟ್ಟಿದ್ದಾರೆ. ಅವರು ಮಣಿಪಾಲದ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ನಿರ್ಮಾಣ ಹಂತದ ಅಪಾರ್ಟ್‌ಮೆಂಟ್‌ನ ಕಾಂಕ್ರೀಟ್‌ ಕೆಲಸದ ಉಸ್ತುವಾರಿ ನೋಡಿಕೊಂಡಿದ್ದರು. ಮೃತರ ಪುತ್ರ ಕೀರ್ತಿವರ್ಧನ್‌ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಕಾನೂನು ಪದವೀಧರರಿಗೆ ಶಿಷ್ಯವೇತನ: ಅರ್ಜಿ ಆಹ್ವಾನ

ಉಡುಪಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ವಕೀಲಿ ವೃತ್ತಿಯಲ್ಲಿ ತರಬೇತಿ ನೀಡಿ, ಶಿಷ್ಯವೇತನ ಮಂಜೂರು ಮಾಡಲು ಅರ್ಹ ಮತ್ತು ಆಸಕ್ತ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 22 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಕಚೇರಿಗಳ ಸಂಕೀರ್ಣ, ರಜತಾದ್ರಿ, ಬಿ.ಬ್ಲಾಕ್, ಕೊಠಡಿ ಸಂಖ್ಯೆ: 304, ಎರಡನೇ ಮಹಡಿ, ಮಣಿಪಾಲ, ಉಡುಪಿ […]

ಉಡುಪಿ: ಶೀತಲ್ ರಾವ್ ದೂರದರ್ಶನ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆ.

ಉಡುಪಿ: ಖ್ಯಾತ ಭರತನಾಟ್ಯ ಕಲಾವಿದೆ ವಿದುಷಿ ಶೀತಲ್ ರಾವ್ ದೂರದರ್ಶನದ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿರುತ್ತಾರೆ. ಈಕೆ ಉಡುಪಿಯ ಪ್ರದೀಪ್ ಹಾಗೂ ಗೀತಾಂಜಲಿ ದಂಪತಿಗಳ ಪುತ್ರಿಯಾಗಿದ್ದು, ನೃತ್ಯನಿಕೇತನ (ರಿ.) ಕೊಡವೂರು ಸಂಸ್ಥೆಯ ಗುರುಗಳಾದ ಕೊಡವೂರು ಸುಧೀರ್ ರಾವ್ ಹಾಗೂ ಮಾನಸಿ ಸುಧೀರ್ ರವರ ಶಿಷ್ಯೆಯಾಗಿರುತ್ತಾರೆ.

ಉಡುಪಿ: ಸೈಂಟ್ ಮೇರಿಸ್ ಹೈಸ್ಕೂಲ್ ಇಂಟರಾಕ್ಟ ಪದಗ್ರಹಣ

ಉಡುಪಿ: ರೋಟರಿ ಉಡುಪಿ ಪ್ರಾಯೋಜಿತ ಸೈಂಟ್ ಮೇರಿಸ್ ಇಂಟರಾಕ್ಟ ಕ್ಲಬ್ ನ ಪದಗ್ರಹಣ ಸಮಾರಂಭ ವು ಶಾಲಾವಠಾರದಲ್ಲಿ ನೆರವೇರಿತು. ಮಾಜಿ ಅಸಿಸ್ಟೆಂಟ್ ಗವರ್ನರ್ ರೋ. ಡಾ. ಸುರೇಶ್ ಶೆಣೈ ಅವರು ಇಂಟರಾಕ್ಟ್ ಅಧ್ಯಕ್ಷ ರಚನ್ ಮತ್ತು ಕಾರ್ಯದರ್ಶಿ ನಾಗರಾಜ್ ಅವರಿಗೆ ಪದಪ್ರಧಾನ ನೆರೆವೆರಿಸಿ ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಜೋಯ್ಸ್ ಡೀಸ ಎಲ್ಲರನ್ನೂ ಸ್ವಾಗತಿಸಿದರು. ರೋಟರಿ ಅದ್ಯಕ್ಷ ರೋ. ಗುರುರಾಜ ಭಟ್, ಇಂಟರಾಕ್ಟ ಸಭಾಪತಿ ರೋ. ಸಾದನಾ ಮುಂಡ್ಕೂರ್, ಶುಭ ಹಾರೈಸಿದರು. ರೋ.ಡಾ. ಸುರೇಶ್ ಶೆಣೈ ವಿದ್ಯಾರ್ಥಿಗಳಿಗೆ ರಸ್ತೆ […]

ಉಡುಪಿ: ಹಿರಿಯ ಪತ್ರಕರ್ತ ಜಯಕರ್ ಸುವರ್ಣ ಇನ್ನಿಲ್ಲ

ಉಡುಪಿ: ದೂರದರ್ಶನ ಉಡುಪಿ ಜಿಲ್ಲಾ ವರದಿಗಾರ, ಕಲ್ಮಾಡಿ ನಿವಾಸಿ ಜಯಕರ್ ಸುವರ್ಣ ಅವರು ಹೃದಯಾಘಾತದಿಂದ ಸೋಮವಾರ ತಡರಾತ್ರಿ‌ ನಿಧನ ಹೊಂದಿದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿ, ಮಲ್ಪೆ ಬಿಲ್ಲವ ಸಂಘ, ಎಸ್.ಕೆ.ಪಿ.ಎ. ಸಹಿತ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದರು.