ಮಲ್ಪೆ ಪಡುಕರೆ ಕಡಲ್ಕೊರೆತ ಪ್ರದೇಶಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ
![](https://udupixpress.com/wp-content/uploads/2024/08/WhatsApp-Image-2024-08-06-at-6.57.28-PM.jpeg)
ಉಡುಪಿ: ಮಲ್ಪೆ ಶಾಂತಿ ನಗರ, ಅಂಬಲಪಾಡಿ ಕಿದಿಯೂರು ಪಡುಕರೆ ಮತ್ತು ಕಡೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಪಾಡಿ ಪಡುಕರೆಯ ಕಡಲ್ಕೊರೆತ ಪ್ರದೇಶಗಳಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡಲ್ಕೊರೆತ ಸಮಸ್ಯೆಯ ಗಂಭೀರತೆಯ ಬಗ್ಗೆ ಈಗಾಗಲೇ ಮೀನುಗಾರಿಕೆ ಸಚಿವರಾದ ಶ್ರೀ ಮಾಂಕಾಳ ವೈದ್ಯರ ಗಮನಕ್ಕೆ ತಂದಿದ್ದು, ಕಡಲ್ಕೊರೆತ ತಡೆಗೆ ತಕ್ಷಣ ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಲಾಗಿದೆ. ಇಲಾಖೆಯ […]
ಉಡುಪಿ: ಹೆಜಮಾಡಿ ಟೋಲ್ ಪ್ಲಾಝಾದಲ್ಲಿ ಯುವಕನ ಗೂಂಡಾಗಿರಿ: ಟೋಲ್ ಸಿಬ್ಬಂದಿಗೆ ಹಲ್ಲೆ..!
![](https://udupixpress.com/wp-content/uploads/2024/08/Screenshot-2024-08-06-185306-1.png)
ಉಡುಪಿ: ಹೆಜಮಾಡಿಯ ಒಳ ರಸ್ತೆಯ ಕಿರು ಟೋಲ್ ಗೇಟ್ ನಲ್ಲಿ ಯುವಕನೊಬ್ಬ ಸಿಬ್ಬಂದಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.ಕೆಂಪು ಬಣ್ಣದ ಕಾರು ಟೋಲ್ ನಿಯಮ ಉಲ್ಲಂಘಿಸಿ ಗೇಟ್ ದಾಟಿ ಮುಂದೆ ಹೋಗಿದ್ದು ಅದನ್ನು ಪ್ರಶ್ನಿಸಿದ ಸಿಬ್ಬಂದಿಯೊಂದಿಗೆ ಉಢಾಪೆಯಾಗಿ ವರ್ತಿಸಿದ ಕಾರು ಚಾಲಕ ಡಿಕ್ಕಿಯಾಗುವಂತೆ ಕಾರು ಚಲಾಯಿಸಿಕೊಂಡು ಮುಂದೆ ಹೋಗಿದ್ದಾನೆ. ಮತ್ತೆ ಕಾರು ನಿಲ್ಲಿಸಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಆ ಸಂದರ್ಭ ಮಹಿಳಾ ಸಿಬ್ಬಂದಿಗಳು ಸಹಿತ ಸ್ಥಳೀಯರು ಹಲ್ಲೆಗೊಳಗಾದ ಸಿಬ್ಬಂದಿಯ ನೆರವಿಗೆ ಬರುತ್ತಿದಂತೆ ಕಾರನ್ನೇರಿ ಪಲಾಯನ […]
ಹಿರಿಯ ಪತ್ರಕರ್ತ ಜಯಕರ ಸುವರ್ಣ ನಿಧನ
![](https://udupixpress.com/wp-content/uploads/2024/08/IMG-20240806-WA0029-1024x576.jpg)
ಉಡುಪಿ: ಹಿರಿಯ ಪತ್ರಕರ್ತ, ದೂರದರ್ಶನ ಉಡುಪಿ ಜಿಲ್ಲಾ ವರದಿಗಾರ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಜಯಕರ ಸುವರ್ಣ ಸೋಮವಾರ ರಾತ್ರಿ ಹೃದಯಾಘಾತದಿಂದ ಕಲ್ಮಾಡಿಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯ ದರ್ಶಿಯಾಗಿ, 2014-17ನೇ ಸಾಲಿನಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಇವರು, ಪ್ರಸ್ತುತ ಸಂಘದ ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯ ದರ್ಶಿ ಹಾಗೂ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ. ಉಡುಪಿ […]
ನಾಪತ್ತೆಯಾಗಿದ್ದ ಮಂಗಳೂರು ಬಿಜೈಯ ಯುವತಿ ಕಾರ್ಕಳದ ಯುವಕನ ಮನೆಯಲ್ಲಿ ಪತ್ತೆ.
![](https://udupixpress.com/wp-content/uploads/2024/08/1000007785.jpg)
ಮಂಗಳೂರು: ಕೆಲ ದಿನಗಳ ಹಿಂದೆ ನಗರದ ಬಿಜೈಯಿಂದ ನಾಪತ್ತೆಯಾಗಿದ್ದ 18 ವರ್ಷದ ಯುವತಿಯೋರ್ವಳು ಉಡುಪಿ ಜಿಲ್ಲೆಯ ಕಾರ್ಕಳದ ಮನೆಯೊಂದರಲ್ಲಿ ಪತ್ತೆಯಾಗಿದ್ದಾಳೆ. ಡಿಪ್ಲೋಮಾ ಕಲಿಯುತ್ತಿದ್ದ ಬಿಜೈಯ ಕ್ಯಾಲಿಸ್ಟರ್ ಫೆರಾವೋ ನಾಪತ್ತೆಯಾಗಿರುವುದಾಗಿ ಜುಲೈ 30ರಂದು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಯುವತಿ ಕಾರ್ಕಳದ ಸೂರಜ್ ಪೂಜಾರಿ (23) ಎಂಬಾತನ ಮನೆಯಲ್ಲಿ ಇರುವುದು ತಿಳಿದು ಬಂದಿದೆ. ಬರ್ಕೆ ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆ ತಂದಿದ್ದು, ಈ ವೇಳೆ ಇಬ್ಬರೂ ಪರಸ್ಪರ ಪ್ರೀತಿಸಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ […]
ಉಡುಪಿ: ವಿಪರೀತ ಮಳೆ ಹಾಗೂ ಹಾನಿಯಾಗದಂತೆ ಅನಂತೇಶ್ವರ ಸನ್ನಿಧಿಯಲ್ಲಿ ‘ಚಿತ್ರಾನ್ನ ಸೇವೆ’
![](https://udupixpress.com/wp-content/uploads/2024/08/IMG_20240806_154419-1024x566.jpg)
ಉಡುಪಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಆಗುತ್ತಿರುವ ಅತಿವೃಷ್ಟಿ ಕಡಿಮೆ ಮಾಡುವುದಕ್ಕಾಗಿ ಸಂಪ್ರದಾಯದಂತೆ ಉಡುಪಿ ರಥಬೀದಿಯಲ್ಲಿರುವ ಅನಂತೇಶ್ವರ ದೇವಾಲಯದಲ್ಲಿ ಚಿತ್ರಾನ್ನ ಸೇವೆ ನಡೆಸಲಾಯಿತು. ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ನಡೆದ ಈ ಸೇವೆಯ ಸಂದರ್ಭದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಆಗಮಿಸಿ, ಅನಂತೇಶ್ವರ ದೇವರಿಗೆ ವಿಶೇಷ ಪೂಜೆ ನೆರೆವೇರಿಸಿ, ಪ್ರಾರ್ಥನೆ ಸಲ್ಲಿಸಿದರು. ನಂತರ ಮಾತನಾಡಿದ ಶ್ರೀಗಳು, ಅತಿವೃಷ್ಟಿಯಿಂದ ನಾನಾ ರೀತಿಯ ಅನಾಹುತಗಳು ನಾಡಿನಾದ್ಯಂತ ಸಂಭವಿಸುತ್ತಿವೆ. ಅವುಗಳನ್ನೆಲ್ಲಾ ಪರಿಹರಿಸಿ, […]