ಉಡುಪಿ: ತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಂತೆ ನಗರಸಭೆ ಸೂಚನೆ

ಉಡುಪಿ: ಮಳೆಗಾಲದಲ್ಲಿ ಡೆಂಗ್ಯೂ, ಮಲೇರಿಯಾದಂತಹ ಸಾಕಷ್ಟು ಸಾಂಕ್ರಮಿಕ ರೋಗಗಳು ಹರಡುವ ಸಂಭವವಿರುವುದರಿಂದ ಸಾರ್ವಜನಿಕರು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಗೂಡಂಗಡಿ ಮಾಲೀಕರು ತಮ್ಮಲ್ಲಿರುವ ಎಳನೀರು ಬೊಂಡವನ್ನು ಅದೇ ದಿನ ವಿಲೇವಾರಿ ಮಾಡಬೇಕು. ಚರಂಡಿಗೆ ಕಸ ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇತರೆ ಯಾವುದೇ ರೀತಿಯ ತ್ಯಾಜ್ಯಗಳನ್ನು ಎಸೆಯದೇ ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ನಗರಸಭೆಯು ತನ್ನ ವ್ಯಾಪ್ತಿಯಲ್ಲಿ ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ನಿರಂತರ ಶ್ರಮಿಸುತ್ತಿದ್ದು, ಸರ್ವೆ ನಡೆಸಿ ಸ್ವಚ್ಛತೆ ವಹಿಸುವ ಕುರಿತು ಜಾಗೃತಿ ಮೂಡಿಸುವ ಜೊತೆಗೆ ಅಂಗಡಿಯ ಸುತ್ತಮುತ್ತಲು ಇರುವ ಕಸ […]

ಮಂಗಳೂರು: ವಿದ್ವತ್ ಸ್ಪೂರ್ತಿ ಸಂಚಿಕೆಯ ಮೊದಲನೇ ಭಾಗದ ಅನಾವರಣ.

ಮಂಗಳೂರು: ಮಕ್ಕಳಿಗೆ ಸ್ಫೂರ್ತಿ ತುಂಬಿ ಓದಿನಡೆಗೆ ಹುರಿದುಂಬಿಸಿ, ಪಿಯುಸಿಯಲ್ಲಿಯೇ ಮಹತ್ತರವಾದುದ್ದನ್ನ ಸಾಧಿಸಿ, ಭವಿಷ್ಯ ರೂಪಿಸಿಕೊಳ್ಳುವ ದೃಷ್ಠಿಯಿಂದ ನಿನ್ನೆ ವಿದ್ವತ್ ಪಿಯು ಕಾಲೇಜಿನಲ್ಲಿ ಮಹತ್ವದ ಓರಿಯಂಟೇಷನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ವತ್ ಸ್ಫೂರ್ತಿ ಸಂಚಿಕೆಯ ( Motivational Edition) ಮೊದಲನೇ ಭಾಗವಾದ ಈ ಕಾರ್ಯಕ್ರಮವನ್ನು ವಿದ್ವತ್ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಶ್ರೀ ಗಂಗಾಧರ ಈ ಮಂಡಗಳಲೆ ಇವರು ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಸ್ಫರ್ಧಾತ್ಮಕ ಪರೀಕ್ಷೆಗೆ ಓದುವ ವಿಧಾನ ಹಾಗೂ ನೆನಪಿನ ಶಕ್ತಿ ವೃದ್ಧಿಯ ಬಗ್ಗೆ ಕೆಲವು ವೈಜ್ಞಾನಿಕ ಸಲಹೆ ಗಳನ್ನೊಳಗೊಂಡಿದ್ದಲ್ಲದೇ, ಪಿಯು […]

ದೈಹಿಕ ಮತ್ತು ದೇಹದಾಡ್ಯತೆ ಪರೀಕ್ಷೆ ಮುಂದೂಡಿಕೆ

ಉಡುಪಿ: ಜಿಲ್ಲಾ ಪೊಲೀಸ್ ಘಟಕದ 2022-23 ನೇ ಸಾಲಿನ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (ಸಿ.ಎ.ಆರ್/ ಡಿ.ಎ.ಆರ್) ಪುರುಷ ಮತ್ತು ತೃತೀಯ ಲಿಂಗ ಪುರುಷ -3064 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ ಜುಲೈ 10 ರಂದು ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಿಗಧಿಪಡಿಸಲಾಗಿದ್ದ ದೈಹಿಕ ಮತ್ತು ದೇಹದಾಢ್ಯತೆ ಪರೀಕ್ಷೆಯನ್ನು ಮಳೆ ಹಿನ್ನೆಲೆ, ಮುಂದೂಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.

ಶ್ರೀ ರಾಮಾಶ್ರಮ ಪಿಯು ಕಾಲೇಜು: ನೂತನ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಫ್ರೆಶರ್ಸ್ ಡೇ.

ಮಂಗಳೂರು: ಮಂಗಳೂರು ಶ್ರೀ ರಾಮಾಶ್ರಮ ಪಿಯು ಕಾಲೇಜು (ತ್ರಿಶಾ ಸಂಸ್ಥೆಯ ಸಂಯೋಗದೊಂದಿಗೆ) ವತಿಯಿಂದ ನೂತನ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಫ್ರೆಶರ್ಸ್ ಡೇ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು. ಜ್ಯೋತಿ ಬೆಳಗಿಸುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾಗಿ ತ್ರಿಶಾ ಕಾಲೇಜಿನ ಪ್ರೊ.ಶೈನಿ ವಿ.ಪಿ. ಅವರು ವಿದ್ಯಾರ್ಥಿಗಳು ವಾಣಿಜ್ಯ, ವ್ಯವಹಾರ ಕ್ಷೇತ್ರ ದಲ್ಲಿ ಜ್ಞಾನ ಬೆಳೆಸಿಕೊಳ್ಳಬೇಕು. ದಿನಪತ್ರಿಕೆ ಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು. ತ್ರಿಶಾ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಡಾ. ನಾರಾಯಣ ಕಾಯರ್ಕಟ್ಟೆ ಅವರು ವಿದ್ಯಾರ್ಥಿಗಳು […]

ನಾಟಾ ಫಲಿತಾಂಶದಲ್ಲಿ ಕಾರ್ಕಳದ ಕ್ರಿಯೇಟಿವ್ ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ

ಕಾರ್ಕಳ: ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನವರು ನಡೆಸಿದ ನಾಟಾ ಪರೀಕ್ಷೆಯ ಫಲಿತಾಂಶವನ್ನು 6 ಜುಲೈ 2024ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊರಹಾಕಿದ್ದು, ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆಗೈದಿದ್ದಾರೆ. ಕಾರ್ಕಳ ಕ್ರಿಯೇಟಿವ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕ್ರಮ ಪ್ರಕಾರವಾಗಿ ಪೂರ್ಣಚಂದ್ರ ಪಿ.ಎಚ್ 55, ಆದಿತ್ಯ ಪಾಟೀಲ್ 74, ನೇಹ. ಎನ್ 76, ಶ್ರೀ ಹರಿ 109, ಸಾನ್ವಿ ಕುಮಾರ್ 120, ಕಿಶನ್ ಬಿ ಗೌಡ 133, ಅಂಕುಶ್. ವಿ 148, ಆತ್ಮಿಕ ನಾಯಕ್ 157, ಹರಿದ್ವರ್ಣ ಸಿ […]