ಬೈಂದೂರು: ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು.

ಬೈಂದೂರು: ತೋಟದಲ್ಲಿ ತೆಂಗಿನ ಕಾಯಿ ಹೆಕ್ಕಲು ಹೋದ ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಜು.10ರಂದು ಬೆಳಗ್ಗೆ ನಡೆದಿದೆ. ಮೃತರನ್ನು ಬಡಾಕೆರೆ ನಿವಾಸಿ ಮಂಜುನಾಥ(85) ಎಂದು ಗುರುತಿಸಲಾಗಿದೆ. ತೋಟಕ್ಕೆ ತೆಂಗಿನಕಾಯಿ ಹೆಕ್ಕಲು ಹೋದ ಇವರು, ಬಾವಿಯ ಬದಿಯಲ್ಲಿ ಬಿದ್ದಿರುವ ತೆಂಗಿನಕಾಯಿಯನ್ನು ಹೆಕ್ಕುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಚ್ಛೇದಿತ ಮುಸ್ಲಿಂ ಮಹಿಳೆಗೂ ಜೀವನಾಂಶದ ಹಕ್ಕು: ಮಹತ್ವದ ಆದೇಶ ಹೊರಡಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಸುಪ್ರೀಂ ಕೋರ್ಟ್ ಇಂದು (ಬುಧವಾರ) ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೂ ಜೀವನಾಂಶದ ಹಕ್ಕು ಅನ್ವಯಿಸುತ್ತದೆ ಎಂದು ಮಹತ್ವದ ಆದೇಶವನ್ನು ಹೊರಡಿಸಿದೆ.ಪತ್ನಿಯ ಜೀವನಾಂಶದ ಕಾನೂನುಬದ್ಧ ಹಕ್ಕನ್ನು ವ್ಯವಹರಿಸುವ ಸೆಕ್ಷನ್ 125 CrPC ಎಲ್ಲಾ ಮಹಿಳೆಯರಿಗೆ ಅನ್ವಯಿಸುತ್ತದೆ ಮತ್ತು ವಿಚ್ಛೇದಿತ ಮುಸ್ಲಿಂ ಮಹಿಳೆ ತನ್ನ ಪತಿಯಿಂದ ಜೀವನಾಂಶಕ್ಕಾಗಿ ಈ ನಿಬಂಧನೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ವಿಚ್ಛೇದಿತ ಮುಸ್ಲಿಂ ಮಹಿಳೆ ತನ್ನ ಪತಿಯಿಂದ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 125 ರ ಅಡಿಯಲ್ಲಿ ಜೀವನಾಂಶವನ್ನು […]

ಭಾರತದ ಸ್ಟಾರ್ ಕ್ರಿಕೆಟಿಗ ಸೂರ್ಯ ಕುಮಾರ್ ಯಾದವ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಉಡುಪಿಯ ಪ್ರಸಿದ್ಧ ವಸತಿ ಸಮುಚ್ಚಯದ ನಿವಾಸಿಗಳು.

ಉಡುಪಿ: ಕಾಪು ಮಾರಿಗುಡಿಯ ದರ್ಶನಕ್ಕಾಗಿ ಉಡುಪಿಗೆ ಬಂದಿದ್ದ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಅವರು, ಉಡುಪಿಯ ಪ್ರಸಿದ್ಧ ವಸತಿ ಸಮುಚ್ಚಯಕ್ಕೆ ಭೇಟಿ ನೀಡಿದರು. ಕೆಲಹೊತ್ತು ಅಲ್ಲಿಂದ ತಂಗಿದ್ದ ಸೂರ್ಯ ಕುಮಾರ್ ಅವರೊಂದಿಗೆ ವಸತಿ ಸಮುಚ್ಚಯದ ನಿವಾಸಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಯಾವುದೇ ಹಮ್ಮುಬಿಮ್ಮಿಲ್ಲದೆ ಸಾಮಾನ್ಯರಂತೆ ನಿಂತು ಪೋಟೊಗೆ ಪೋಸ್ ಕೊಟ್ಟರು. ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಜೊತೆ ಪೋಟೊ ತೆಗೆಸಿಕೊಂಡು ನಿವಾಸಿಗಳು ಸಂಭ್ರಮಿಸಿದರು.

ಯಕ್ಷಗಾನ ಕಲಾವಿದ ಕಪ್ಪೆಕೆರೆ ಮಹಾದೇವ ಹೆಗಡೆ ವಿಧಿವಶ.

ಉಡುಪಿ: ಬಡಗುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದ ಕಪ್ಪೆಕೆರೆ ಮಹಾದೇವ ಹೆಗಡೆ (75) ಮಂಗಳವಾರ ರಾತ್ರಿ ಹೊನ್ನಾವರದಲ್ಲಿ ನಿಧನರಾದರು. ಅವರು ಪತ್ನಿ ನಾಲ್ವರು ಪುತ್ರರನ್ನು ಅಗಲಿದ್ದಾರೆ. ಪ್ರಸಿದ್ಧ ಭಾಗವತರಾದ ಅಣ್ಣ ಕಪ್ಪೆಕೆರೆ ಸುಬ್ರಾಯ ಹೆಗಡೆಯವರಲ್ಲಿ ಯಕ್ಷಗಾನ ಕಲಿತು, ಕೆರೆಮನೆ ಮಹಾಬಲ ಹೆಗಡೆಯವರ ಗರಡಿಯಲ್ಲಿ ಶ್ರೇಷ್ಠ ಕಲಾವಿದರಾಗಿ ಅವರು ರೂಪುಗೊಂಡಿದ್ದರು. ಗುಂಡುಬಾಳ, ಇಡಗುಂಜಿ, ಬಚ್ಚಗಾರು, ಶಿರಸಿ,ಪಂಚಲಿಂಗ, ಮಂದಾರ್ತಿ ಮೇಳಗಳಲ್ಲಿ ಐದು ದಶಕಗಳ ಕಲಾ ಸೇವೆ ಗೈದಿದ್ದರು. ಶಿರಸಿ ಮೇಳದಲ್ಲಿ ವ್ಯವಸ್ಥಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದರು.ಖಳ ಮತ್ತು ಸಾತ್ವಿಕ ಎರಡೂ ರೀತಿಯ ಪಾತ್ರಗಳನ್ನೂ […]

ರೋಟರಿ ಮಣಿಪಾಲ ಟೌನ್ ಪದ ಪ್ರದಾನ ಸಮಾರಂಭ

ಮಣಿಪಾಲ: ರೋಟರಿ ಕ್ಲಬ್ ಮಣಿಪಾಲ ಟೌನ್ ಇದರ 2024-25 ರ ಸಾಲಿನ ನೂತನ ಅಧ್ಯಕ್ಷರಾಗಿ ಡಾ.ಮನೋಜ್ ಕುಮಾರ್, ನಾಗಸಂಪಿಗೆ ಕಾರ್ಯದರ್ಶಿಯಾಗಿ ಡಾ.ನವೀನ್ ಕುಮಾರ್ ಕೊಡಮರ ಇವರಿಗೆ ಜು.9 ರಂದು ಶಾರದ ಸಭಾಂಗಣ ಎಂ.ಸಿ.ಹೆಚ್.ಪಿ ಮಣಿಪಾಲದಲ್ಲಿ ರೋಟರಿ ಮಾಜಿ ಗವರ್ನರ್ ಮೇಜರ್ ಡೋನರ್ ಬಿ.ಎನ್ ರಮೇಶ್ ಪದ ಪ್ರದಾನಗೈದರು. ಸಮಾಜ ಸೇವೆ, ಸಾಮಾಜಿಕ ಜಾಗೃತಿ, ಆರೋಗ್ಯ, ಶಿಕ್ಷಣ, ಪರಿಸರ ಇದರ ಬಗ್ಗೆ ಕಾಳಜಿ, ಅರಿವು ಸಹಕಾರ ಇಂತಹ ಮನುಕುಲದ ಸೇವೆಗೈಯುವಲ್ಲಿ ರೋಟರಿಯ ಪಾತ್ರ ಮಹತ್ವವಾಗಿದೆ ಎಂದು ನುಡಿದರು. ಮುಖ್ಯ […]