ಭಾರತ ತಂಡಕ್ಕೆ ಪಾಕ್ ವಿರುದ್ಧ ಆರು ರನ್ ಅಂತರದ ಗೆಲುವು: ಪಂದ್ಯ ಸೋತ ಬಳಿಕ ಅಳುತ್ತಿದ್ದ ಪಾಕ್ ಆಟಗಾರನನ್ನು ಸಂತೈಸಿದ ನಾಯಕ ರೋಹಿತ್ ಶರ್ಮಾ.

ನ್ಯೂಯಾರ್ಕ್: ಐಸಿಸಿ ಟಿ20 ವಿಶ್ವಕಪ್ ನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ನ್ಯೂಯಾರ್ಕ್ ನ ನಸ್ಸೌ ಸ್ಟೇಡಿಯಂನಲ್ಲಿ ರವಿವಾರ ಮುಖಾಮುಖಿಯಾಗಿ, ಲೋ ಸ್ಕೋರಿಂಗ್ ಪಂದ್ಯದಲ್ಲಿ ರೋಹಿತ್ ಶರ್ಮಾ ಟೀಮ್ ಆರು ರನ್ ಅಂತರದಲ್ಲಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 19 ಓವರ್ ಗಳಲ್ಲಿ 119 ರನ್ ಗೆ ಆಲೌಟಾದರು. ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು 113 ರನ್ ಮಾತ್ರ ಗಳಿಸಲು ಶಕ್ತವಾಯಿತು. ಕೊನೆಯ ಓವರ್ ನಲ್ಲಿ ನಸೀಂ ಶಾ ಪ್ರಯತ್ನಪಟ್ಟರಾದರೂ […]

ತ್ರಿಶಾ ವಿದ್ಯಾ ಪಿಯು ಕಾಲೇಜು: ವಿಶ್ವ ಪರಿಸರ ದಿನಾಚರಣೆ

ಪುಸ್ತುತ ದಿನಮಾನದಲ್ಲಿ ಹಾಳಾಗುತ್ತಿರುವ ಪರಿಸರವನ್ನು ಉಳಿಸುವುದು ನಮ್ಮ ಕರ್ತವ್ಯ. ನಮ್ಮ ಮುಂದಿನ ಜನಾಂಗಕ್ಕೂ ಪರಿಸರವನ್ನು ಕಾಪಾಡಿಕೊಳ್ಳುವುದು ಅನಿವಾರ್ಯ. ನಾವೆಲ್ಲರೂ ಈ ಪರಿಸರವನ್ನು ಉಳಿಸುವ ಯೋಚನೆಯನ್ನು ಮಾಡಲೇಬೇಕು ಎಂದು ಇತ್ತೀಚಿಗೆ ತ್ರಿಶಾ ವಿದ್ಯಾ ಪಿಯು ಕಾಲೇಜು ಕಟಪಾಡಿಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಜೆಸಿಐ ಕಟಪಾಡಿಯ ಅಧ್ಯಕ್ಷರಾದ ಪ್ರಶಾಂತ್ ಆರ್ ಎಸ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತ್ರಿಶಾ ವಿದ್ಯಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ.ಅನಂತ್ ಪೈ ಇವರು ಜಾಗತಿಕ ತಾಪಮಾನ ಏರಿಕೆ, ಭೂದೇವಿಗೆ […]

ತ್ರಿಶಾ ಕ್ಲಾಸಸ್ ಸಿಎ ಫೌಂಡೇಶನ್ ತರಗತಿ ಆರಂಭ

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ಸಿಎ, ಸಿಎಸ್ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ಉತ್ತಮ ತರಬೇತಿಯನ್ನು ನೀಡುತ್ತಾ ಬಂದಿರುವ ತ್ರಿಶಾ ಸಂಸ್ಥೆಯು ಅಖಿಲ ಭಾರತ ಮಟ್ಟದಲ್ಲಿ ಸಿಎ ಫೌಂಡೇಶನ್, ಸಿಎ ಇಂಟರ್ಮೀಡಿಯೇಟ್, ಸಿಎ ಫೈನಲ್, ಸಿಎಸ್ಇಇಟಿ, ಸಿ ಎಸ್ ಎಕ್ಸಿಕ್ಯೂಟಿವ್ ವಿಭಾಗದಲ್ಲಿ ಅತ್ಯುತ್ತಮ ಫಲಿತಾಂಶವನ್ನು ಗಳಿಸಿಕೊಂಡಿದೆ. ಜೂನ್ 19 ರಂದು ಉಡುಪಿ ಹಾಗೂ 20 ರಂದು ಮಂಗಳೂರಿನಲ್ಲಿ ಸಿಎ ಫೌಂಡೇಶನ್ ತರಗತಿಗಳು ಆರಂಭವಾಗುತ್ತಿದೆ. ತರಗತಿಯ ವಿಶೇಷತೆಗಳು: ▪️ರಾಷ್ಟ್ರದ ಬೇರೆ ಬೇರೆ ಭಾಗದ […]

ಜ್ಞಾನಸುಧಾದ 12 ವಿದ್ಯಾರ್ಥಿಗಳು ಐಐಟಿ ಪ್ರವೇಶಕ್ಕೆ ಅರ್ಹತೆ.

ಕಾರ್ಕಳ: ರಾಷ್ಟ್ರ ಮಟ್ಟದಲ್ಲಿ ಐ.ಐ.ಟಿ ಪ್ರವೇಶಕ್ಕೆ ಎನ್.ಟಿ.ಎ ನಡೆಸುವ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯು ಮೇ ತಿಂಗಳ 26ರಂದು ನಡೆದಿದ್ದು, ಪರೀಕ್ಷೆ ಬರೆದ 1,80,200 ವಿದ್ಯಾರ್ಥಿಗಳಲ್ಲಿ 48,248 ವಿದ್ಯಾರ್ಥಿಗಳು ಅರ್ಹತೆ ಗಿಟ್ಟಿಸಿಕೊಂಡಿದ್ದು, ಜ್ಞಾನಸುಧಾದ 12 ವಿದ್ಯಾರ್ಥಿಗಳು ಐ.ಐ.ಟಿ ಪ್ರವೇಶಕ್ಕೆ ಅರ್ಹತೆ ಪಡೆದಿರುತ್ತಾರೆ. ರಾಷ್ಟಮಟ್ಟದ ಜನರಲ್ ಕೆಟಗರಿಯಲ್ಲಿ ವಿದ್ಯಾರ್ಥಿಗಳಾದ ಬಿಪಿನ್ ಜೈನ್ 5161ನೇ ರ್ಯಾಂಕ್, ಚಿರಂತನ ಜೆ.ಎ. 5374ನೇ ರ್ಯಾಂಕ್, ಪ್ರಿಯಾಂಶ್ ಎಸ್.ಯು. 6128ನೇ ರ್ಯಾಂಕ್, ಸಮ್ಮಿತ್ ಕೃಷ್ಣ ಯು 12564ನೇ ರ್ಯಾಂಕ್, ಕನ್ನಿಕಾ ದೀಪಕ್ ಶೆಟ್ಟಿ 13994ನೇ ರ್ಯಾಂಕ್, […]

ಉಡುಪಿ: ಝೇಂಕಾರ ಟ್ರೂಪ್‌ನ ದಶಮಾನೋತ್ಸವ; ಗುರುವಂದನೆ.

ಉಡುಪಿ : ಉಡುಪಿ ತೆಂಕಪೇಟೆಯ ಯುವಕಲಾವಿದರ ಝೇಂಕಾರ ಟ್ರೂಪ್‌ನ 10 ನೇ ವಾರ್ಷಿಕೋತ್ಸವ ಜೂ.9 ರಂದು ಉಡುಪಿಯ ಪುರಭವನದಲ್ಲಿ ನಡೆಯಿತು. ಗುರುವಂದನೆ ; ತಂಡದ ಸದಸ್ಯರಿಗೆ ಸಂಗೀತ ವಿದ್ಯೆ ಕಲಿಸಿಕೊಟ್ಟು ಸದಾ ಯುವ ಸಂಗೀತ ದಾರಿಗೆ ಪ್ರೋತ್ಸಹ ನೀಡುತ್ತಿರುವ ಗುರುಗಳಿಗೆ ಗುರುವಂದನೆಯ ಗೌರವ ಅರ್ಪಣೆ ನಡೆಯಿತು. ಗುರುಗಳಾದ ಸುಧೀರ್ ನಾಯಕ್ , ಶ್ರೀ ಶಂಕರ್ ಶೆಣೈ , ಸತ್ಯವಿಜಯ ಭಟ್ , ಮಾಧವ ಆಚಾರ್ಯ , ಮಹಾಬಲೇಶ್ವರ ಭಾಗವತ್ , ಸತ್ಯಚರಣ್ ಶೆಣೈ , ವಿಠ್ಠಲದಾಸ ಭಟ್ […]