ನೀಟ್ ಫಲಿತಾಂಶ- 2024ಹೆಮ್ಮಾಡಿ ಜನತಾ ಕಾಲೇಜಿನ ವಿದ್ಯಾರ್ಥಿಗಳ ಅದ್ಭುತ ಸಾಧನೆ‌.

ಹೆಮ್ಮಾಡಿ: ದೇಶದ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಮೇ 05 ರಂದು ನಡೆಸಿದ ನೀಟ್ ಪರೀಕ್ಷೆಯ ಫಲಿತಾಂಶಪ್ರಕಟಗೊಂಡಿದ್ದು, ಹೆಮ್ಮಾಡಿಯ ಜನತಾ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಅಂಕಗಳಿಸುವ ಮೂಲಕ ಅದ್ಭುತ ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳಾದ ಸುಬ್ರಹ್ಮಣ್ಯ ಜಿ.553, ಆಕಾಶ್ ಹೆಬ್ಬಾರ್ 552, ಕ್ಷಮಾ ಪಡಿಯಾರ್ 496, ರಿಷಿಕಾ ಮೊಂಟೆರಿಯೊ456, ಪವಿತ್ರಾ 444 ಅಂಕಗಳನ್ನು ಪಡೆದು ಅರ್ಹತೆ ಪಡೆದಿರುತ್ತಾರೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜನತಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ರೀತಿಯಲ್ಲಿ ತರಬೇತುಗೊಳಿಸಿ ಕಾಲೇಜು ಪ್ರಾರಂಭದ ದ್ವಿತೀಯ […]

ಉಡುಪಿ: ಶ್ರೀ ಶನಿ ಕ್ಷೇತ್ರ ಬನ್ನಂಜೆ – ಶನೈಶ್ಚರ ಜಯಂತಿ ಹಾಗೂ ವಾರ್ಷಿಕ ಶನೈಶ್ವರ ಉತ್ಸವ ಸಂಪನ್ನ.

ಉಡುಪಿ: ಬನ್ನಂಜೆ ಗರಡಿ ರಸ್ತೆ ಶ್ರೀ ಶನಿ ಕ್ಷೇತ್ರ ಬನ್ನಂಜೆ ಮಠದ ಕರ್ನಾಟಕದ ಅತೀ ದೊಡ್ಡ ಶ್ರೀ ಶನಿ ದೇವರ 23 ಅಡಿ ಎತ್ತರ ದ ಏಕಶಿಲಾ ಮೂರ್ತಿ ಸನ್ನಿಧಾನ ದಲ್ಲಿ ಗುರುವಾರ ಶನೈಶ್ಚರ ಜಯಂತಿ ಹಾಗೂ ವಾರ್ಷಿಕ ಶನೈಶ್ವರ ಉತ್ಸವವು ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು. ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಶ್ರೀ ರಾಮ ವಿಠ್ಠಲ್ ಹಾಗು ಶನೈಶ್ಚರ ಸ್ವಾಮಿಯ ಸನ್ನಿದಿಯಲ್ಲಿ ಸಗ್ರಹ ಮಖ ಶನಿಶಾಂತಿ ಪುರಸ್ಪರ ಯಕ್ಷ್ಮನಾಶನ ಸೂಕ್ತ ಯಾಗದ […]

ಕಾರ್ಕಳ: ಬಾಣಂತಿ ಮಹಿಳೆ ಮೃತ್ಯು.

ಕಾರ್ಕಳ: ಕಾರ್ಕಳ ತಾಲೂಕು ಇರ್ವತ್ತೂರಿನ ಜಂಗರಬೆಟ್ಟುವಿನಲ್ಲಿ ಬಾಣಂತಿ ಮಹಿಳೆಯೊಬ್ಬರು ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ಗುರುವಾರ ಸಂಭವಿಸಿದೆ. ಮೃತಪಟ್ಟ ಮಹಿಳೆ ಇರ್ವತ್ತೂರಿನ ಸಂಪ್ರೀತಾ (34). ಸಂಪ್ರೀತಾ ಅವರು ಮೇ 30ರಂದು ತಮ್ಮ 2ನೇ ಮಗುವಿಗೆ ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದು, ಬಳಿಕ ಮಗುವಿನ ಜತೆಯಲ್ಲಿ ತವರು ಮನೆಯಾದ ಇರ್ವತ್ತೂರು ಗ್ರಾಮದ ಜಂಗರಬೆಟ್ಟುವಿನಲ್ಲಿದ್ದು, ಜೂ. 6ರಂದು ಸಂಜೆ ಮನೆಯಲ್ಲಿದ್ದಾಗ ಅಸ್ವಸ್ಥಗೊಂಡ ಅವರನ್ನು ಅವರ ತಾಯಿ ಕುಶಲಾ ಮತ್ತು ಗಂಡ ಹರೀಶ್‌ ಅವರು ಕಾರ್ಕಳದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. […]

ಮಣಿಪಾಲ: ವ್ಯಕ್ತಿ ನಾಪತ್ತೆ.

ಮಣಿಪಾಲ: ಉಡುಪಿ- ಮಣಿಪಾಲ ಭಾಗದಲ್ಲಿ ಪರೋಟ ಮಾರಾಟ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ವ್ಯಕ್ತಿ ಮಹೇಶ್‌ (43). ಇವರು ಮನೆಯಲ್ಲಿಯೇ ಪರೋಟ ತಯಾರಿಸಿ ಉಡುಪಿ-ಮಣಿಪಾಲದ ಹೊಟೇಲ್‌ಗ‌ಳಿಗೆ ಮಾರಾಟ ಮಾಡಿಕೊಂಡಿದ್ದರು. ಜೂ. 5ರಂದು ಬೆಳಗ್ಗೆ ಸ್ಕೂಟರ್‌ನಲ್ಲಿ ಮಣಿಪಾಲಕ್ಕೆ ಪರೋಟಾ ಮಾರಾಟ ಮಾಡಲು ತನ್ನ ಮನೆಯಿಂದ ಹೊರಟು ಮಣಿಪಾಲ ಆಸ್ಪತ್ರೆಯ ಕ್ಯಾಂಟೀನ್‌ಗೆ ಪರೋಟ ನೀಡಿ ಸ್ಕೂಟರ್‌ ಅನ್ನು ಅಲ್ಲಿಯೇ ನಿಲ್ಲಿಸಿ ಹೋದವರು ನಾಪತ್ತೆಯಾಗಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಮಂತ್ರಿ ಆರೋಗ್ಯ ವಿಮಾ ಕಾರ್ಡ್ ನವೀಕರಣ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕುಟುಂಬದ ಸದಸ್ಯರಿಗೆ ನೀಡಲಾದ ಮುಖ್ಯಮಂತ್ರಿ ಆರೋಗ್ಯ ವಿಮಾ ಕಾರ್ಡನ್ನು ಪ್ರಸಕ್ತ ಸಾಲಿಗೆ ನವೀಕರಿಸಲಾಗುತ್ತಿದ್ದು, ಕಾರ್ಡ್ ಹೊಂದಿರುವ ಕುಟುಂಬದ ಯಾವುದೇ ಒಬ್ಬ ಸದಸ್ಯರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಬಗ್ಗೆ ಮುಚ್ಚಳಿಕೆ ಪತ್ರ ಹಾಗೂ ಹಳೆ ಆರೋಗ್ಯ ಕಾರ್ಡ್ ಪ್ರತಿಯೊಂದಿಗೆ ಜುಲೈ 31 ರ ಒಳಗಾಗಿ ನಗರಸಭಾ ಕಚೇರಿಗೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸಬೇಕು. ದಾಖಲೆ ಸಲ್ಲಿಸಿದವರ ಕಾರ್ಡ್ಗಳನ್ನು ಮಾತ್ರ ನವೀಕರಿಸಲಾಗುವುದು ಎಂದು ನಗರಸಭೆ […]