ಹಾಸನದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಭರ್ಜರಿ ಜಯಭೇರಿ: ಪ್ರಜ್ವಲ್‌ಗೆ ಹೀನಾಯ ಸೋಲು

ಹಾಸನ : ಹಾಸನ ಲೋಕಸಭಾ ಚುನಾವಣಾ ಮತ ಎಣಿಕೆ ಮುಗಿದಿದ್ದು, ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಸುಮಾರು 1ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ 25 ವರ್ಷಗಳ ಬಳಿಕ ಈ ಕ್ಷೇತ್ರವನ್ನು ಜೆಡಿಎಸ್‌ನಿಂದ ಕಸಿದುಕೊಳ್ಳುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ.ಪೆನ್‌ಡ್ರೈವ್‌ ಹಗರಣದಲ್ಲಿ ಸಿಲುಕಿರುವ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಸೋಲುವ ಮೂಲಕ ದೇವೇಗೌಡ ಕುಟುಂಬವೂ ಆಘಾತ ಅನುಭವಿಸಿದೆ.

ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯ ಮಟ್ಟದ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಸಭೆ.

ಕುಂದಾಪುರ: ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಸಭೆಯು ಜೂನ್ 01 ರಂದು ಶ್ರೀವೆಂಕಟರಮಣ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಕೆ ರಾಧಾಕೃಷ್ಣ ಶೆಣೈ ಅವರು ವಹಿಸಿದ್ದರು. ಖ್ಯಾತ ವಾಗ್ಮಿ ಹಾಗೂ ನಿರೂಪಕರಾದ ದಾಮೋದರ ಶರ್ಮ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಹೆತ್ತವರು ತಮ್ಮ ಮಕ್ಕಳಿಗೆ ಸದ್ವಿಚಾರ, ಸಂಸ್ಕೃತಿ, ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಯಾವ ರೀತಿ ಕಾರ್ಯ ಪ್ರವೃತ್ತರಾಗಬೇಕು ಎನ್ನುವುದರ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ 2023- 24 […]

ಪಡುಬಿದ್ರಿ: ಮಹಿಳೆ ನಾಪತ್ತೆ

ಪಡುಬಿದ್ರಿ: ಮಹಿಳೆ ಒಬ್ಬರು ನಾಪತ್ತೆಯಾಗಿರುವ ಘಟನೆ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಸೋಮವಾರ ಬೆಳಗ್ಗೆ ಕಾಪು ಮಾರಿಗುಡಿ ಬಳಿ ಸ್ಕೂಟರ್‌ ಇಟ್ಟು ಹೋಗಿರುವ ಎರ್ಮಾಳು ಗ್ರಾಮದ ನಿವಾಸಿ ವರ್ಷಾ (27) ನಾಪತ್ತೆಯಾಗಿರುವ ಬಗ್ಗೆ ಅವರ ಅಣ್ಣ ದೂರು ನೀಡಿದ್ದಾರೆ. ವರ್ಷಾ ಅವರ ಪತಿ ಪಾದೂರು ಐಎಸ್‌ಪಿಆರ್‌ಎಲ್‌ನಲ್ಲಿ ಎಲೆಕ್ಟ್ರಿಷಿಯನ್‌ ಆಗಿದ್ದು, ಕೆಲಸಕ್ಕೆ ಹೋಗಿದ್ದರು. ಮನೆ ಬಿಟ್ಟು ತೆರಳುವ ವೇಳೆ ಅತ್ತೆ, ಮಾವ ಕೂಡ ಮನೆಯಲ್ಲಿ ಇರಲಿಲ್ಲ. ವರ್ಷಾ ಅವರು 5.2 ಅಡಿ ಎತ್ತರ, ಗೋಧಿ ಮೈಬಣ್ಣ, ದಪ್ಪ […]

ಲೋಕಸಭಾ ಚುನಾವಣೆ ಫಲಿತಾಂಶ: ಉಡುಪಿ ಚಿಕ್ಕಮಗಳೂರು-ಕೋಟಾ ಶ್ರೀನಿವಾಸ್ ಪೂಜಾರಿ, ದ.ಕ.- ಕ್ಯಾ. ಬ್ರಿಜೇಶ್‌ ಚೌಟ ಮುನ್ನಡೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಮುನ್ನಡೆ ಸಾಧಿಸಿದ್ದಾರೆ.ದಕ್ಷಿಣ ಕನ್ನಡ:ಬಿಜೆಪಿ ಅಭ್ಯರ್ಥಿ ಚೌಟಗೆ 188203 ಮತ.ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ 154192 ಮತ.ಜಿಲ್ಲೆಯಲ್ಲಿ ನೋಟಕ್ಕೆ 6240 ಮತಬಿಜೆಪಿ ಅಭ್ಯರ್ಥಿ ಚೌಟ 34011 ಅಂತರದಲ್ಲಿ ಮುನ್ನಡೆ. ಉಡುಪಿ ಚಿಕ್ಕಮಗಳೂರು:ಬಿಜೆಪಿ ಕೋಟಾ ಶ್ರೀನಿವಾಸ್ ಪೂಜಾರಿ – 204952ಕಾಂಗ್ರೆಸ್ ಜಯಪ್ರಕಾಶ್ ಹೆಗ್ಡೆ – 127690ಬಿಜೆಪಿ ಅಂತರ – 77262

ಉತ್ತರಪ್ರದೇಶದಲ್ಲಿ ಬಿಜೆಪಿ – ಸಮಾಜವಾದಿ ಪಕ್ಷದ ನಡುವೆ ಹಾವು-ಏಣಿ ಆಟ , 10 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ.

ದೇಶದಲ್ಲಿಯೇ ಅತಿ ಹೆಚ್ಚು ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಬಿಜೆಪಿ ಹಾಗೂ ಸಮಾಜವಾದಿ ಪಕ್ಷದ ನಡುವೆ ಹಾವು-ಏಣಿ ಆಟ ಮುಂದುವರೆದಿದೆ.ಪ್ರಸ್ತುತ ಲಭ್ಯವಿರುವ ಮಾಹಿತಿಗಳ ಪ್ರಕಾರ ಉತ್ತರ ಪ್ರದೇಶದಲ್ಲಿ 38 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ, ಸಮಾಜವಾದಿ ಪಕ್ಷ 28 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಐಎನ್’ಸಿ 7 ಕ್ಷೇತ್ರಗಳಲ್ಲಿ, ರಾಷ್ಟ್ರೀಯ ಲೋಕ ದಳ ಪಕ್ಷ 2 ಸ್ಥಾನಗಳಲ್ಲಿ ಹಾಗೂ ಇತರೆ ಪಕ್ಷಗಳು 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.ಲೋಕಸಭೆ ಚುನಾವಣೆಯ ಫಲಿತಾಂಶದಲ್ಲಿ ಉತ್ತರಪ್ರದೇಶ ರಾಜ್ಯದ ಪಾತ್ರ ಬಹಳ ನಿರ್ಣಾಯಕವಾಗಿದ್ದು, ಒಟ್ಟು […]