ಕರಾವಳಿ ಜಿಲ್ಲೆ ಹಿಂದುತ್ವದ ಭದ್ರಕೋಟೆ ಎಂಬುದನ್ನು ಜನತೆ ಸಾಬೀತು ಮಾಡಿದ್ದಾರೆ: ಉಡುಪಿ ಶಾಸಕ ಯಶ್ಪಾಲ್ ಸುವರ್ಣ

ಉಡುಪಿ: ಕರ್ನಾಟಕ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವ ಮೂಲಕ ಕರಾವಳಿ ಜಿಲ್ಲೆ ಹಿಂದುತ್ವದ ಭದ್ರಕೋಟೆ ಎಂಬುದನ್ನು ಜನತೆ ಸಾಬೀತು ಮಾಡಿದ್ದಾರೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸಂತೋಷ ವ್ಯಕ್ತಪಡಿಸಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿಯವರನ್ನು 2,58,903 ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಕ್ಷೇತ್ರದ ಜನತೆ ಕಾಂಗ್ರೆಸ್ ಸರಕಾರದ ಅವೈಜ್ಞಾನಿಕ ಗ್ಯಾರಂಟಿ ಭಾಗ್ಯಗಳನ್ನು ವಿರೋಧಿಸಿ, ಹಿಂದೂ ವಿರೋಧಿ ನೀತಿಗೆ ದಿಟ್ಟ ಉತ್ತರ […]

ಉಡುಪಿ ಪ್ರಕೃತಿ ಲಯನ್ಸ್ ಕ್ಲಬ್ ಗೆ ನೂತನ ಅಧ್ಯಕ್ಷರಾಗಿ ಶೇಖರ್ ಡಿ. ಶೆಟ್ಟಿ ಆಯ್ಕೆ.

ಉಡುಪಿ: ಉಡುಪಿ – ಪ್ರಕೃತಿ, ಕ್ಲಬ್‌ನ 2024-25ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯಾದ ನೂತನ ಅಧ್ಯಕ್ಷರಾಗಿ ಲ| ಶೇಖರ್ ಡಿ. ಶೆಟ್ಟಿ, ಕಾರ್ಯದರ್ಶಿಯಾಗಿ ಲ|ಸೋಮ್‌ನಾಥ್‌, ಖಜಾಂಜಿಯಾಗಿ ಲ| ಭಾಸ್ಕರ ಶೆಟ್ಟಿಗಾರ್ ಮತ್ತು ಉಪಾಧ್ಯಕ್ಷರುಗಳಾಗಿ ಲ|ಸುಧಾಕ‌ರ್ ವಿ. ಶೆಟ್ಟಿ ಹಾಗೂ ಲ| ಮುರಳೀಧರ್ ರಾವ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ಜೂನ್ 7 ಮತ್ತು 8ರಂದು ‘ಆಳ್ವಾಸ್‌ ಪ್ರಗತಿ-2024 ಉದ್ಯೋಗ ಮೇಳ’

ಮೂಡುಬಿದಿರೆ: ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ಜೂ. 7 ಮತ್ತು 8ರಂದು ʼಆಳ್ವಾಸ್‌ ಪ್ರಗತಿ-2024 ಉದ್ಯೋಗ ಮೇಳ’ ನಡೆಯಲಿದ್ದು, 20 ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದೆ. ಐಟಿ ವಲಯ, ಉತ್ಪಾದನಾ ವಲಯ, ಬಿಎಫ್‌ಎಸ್‌ಐ, ಐಟಿಇಎಸ್‌, ಫಾರ್ಮಾ, ಆರೋಗ್ಯ, ಮಾರಾಟ, ಮಾಧ್ಯಮ, ನಿರ್ಮಾಣ, ಹಾಸ್ಪಿಟಾಲಿಟಿ ವಲಯದ ಕಂಪನಿಗಳು ಭಾಗವಹಿಸಲಿವೆ. ರಾಜ್ಯದವರ ಜತೆಗೆ ಹೊರ ರಾಜ್ಯದವರೂ ಭಾಗವಹಿಸಲಿದ್ದಾರೆ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಳೆದ 13 ಆಳ್ವಾಸ್‌ ಪ್ರಗತಿ […]

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಭರ್ಜರಿ ಗೆಲುವು ಸಾಧಿಸಿದ ಕೋಟ ಶ್ರೀನಿವಾಸ್ ಪೂಜಾರಿ.

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಅವರು ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆ ಅವರನ್ನು ಸೋಲಿಸಿ ಭರ್ಜರಿ ಅಂತರದೊಂದಿಗೆ ಗೆಲುವು ಸಾಧಿಸಿದ್ದು, ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್ ಅವರು ಕಾಂಗ್ರೆಸ್ ಅಭ್ಯರ್ಥಿ ಆರ್‌ ಪದ್ಮರಾಜ್‌ ಅವರನ್ನು ಸೋಲಿಸಿದ್ದಾರೆ. ಉಡುಪಿಯಲ್ಲಿ ಗೆಲುವಿನ ಸಂಭ್ರಮಾಚರಣೆ: ಮತ ಎಣಿಕೆ ಪ್ರಕ್ರಿಯೆ ಆರಂಭವಾದಾಗಿನಿಂದಲೂ ಕೋಟ ಶ್ರೀನಿವಾಸ್ ಪೂಜಾರಿ ಅವರು ಸತತವಾಗಿ ಮುನ್ನಡೆ ಸಾಧಿಸಿದ್ದರು. ಇದೀಗ ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರನ್ನು ಸೋಲಿಸುವ […]

ಕೇರಳದಲ್ಲಿ ಮೊದಲ ಬಾರಿಗೆ ಅರಳಿದ ಕಮಲ: ಕಾಂಗ್ರೆಸ್‌ಗೆ ಹೀನಾಯ ಸೋಲು.

ಕೇರಳ : ಲೋಕಸಭಾ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಕೇರಳದ ತ್ರಿಶ್ಶೂರ್ ನಲ್ಲಿ ಭಾರತೀಯ ಜನತಾ ಪಕ್ಷದ ಸುರೇಶ್ ಗೋಪಿ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಕೇರಳದಲ್ಲಿ ಕಮಲ ಅರಳಿದೆ.ಕೇರಳದ ತ್ರಿಶ್ಶೂರ್ ಲೋಕಸಭಾ ಕ್ಷೇತ್ರದಲ್ಲಿ ನಟ, ರಾಜಕಾರಣಿ, ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಗೆಲುವಿನ ನಗು ಬೀರಿದ್ದಾರೆ. ಪ್ರತಿಸ್ಪರ್ಧಿ ಸಿಪಿಐನ ವಿಎಸ್ ಸುನೀಲ್ ಕುಮಾರ್ ಮತ್ತು ಕಾಂಗ್ರೆಸ್‌ನ ಕೆ.ಮುರಳೀಧರನ್‌ ಅವರನ್ನು ಸೋಲಿಸಿ ಸಾಧನೆ ಮಾಡಿದ್ದಾರೆ. ಇದೀಗ ಎರಡನೇ ಪ್ರಯತ್ನದಲ್ಲಿ ಗೆಲುವು ತನ್ನದಾಗಿಸಿಕೊಂಡಿದ್ದಾರೆ.ಸುಮಾರು 30 ಸಾವಿರ ಮತಗಳ […]