ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ, ಸರಕಾರಿ ಸವಲತ್ತುಗಳನ್ನು ಸದುಪಯೋಗಿಸಿ ಎಂದು ಪೋಷಕರಿಗೆ ವಿನಂತಿ: ತುಳುನಾಡ ತುಡರ್ ಕೀರ್ತಿ ಕಾರ್ಕಳ

ಕಾರ್ಕಳ: ಅಜೆಕಾರು ಗುಡ್ಡೆಅಂಗಡಿ ಸರಕಾರಿ ಶಾಲೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವಕ್ಕೆ ನಮ್ಮ ತುಳುನಾಡು ಟ್ರಸ್ಟಿನ ರಾಜ್ಯ ಸಂಚಾಲಕ ತುಳುನಾಡ ತುಡರ್ ಕೀರ್ತಿ ಕಾರ್ಕಳ ಅಗಮಿಸಿದರು.ಸರಕಾರಿ ಶಾಲೆಯ ಸವಲತ್ತುಗಳ ಬಗ್ಗೆ ವಿಚಾರಿಸಿ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಹಾಗೂ ಸರಕಾರಿ ಸವಲತ್ತುಗಳನ್ನು ಸದುಪಯೋಗಿಸಿ ಎಂದು ಪೋಷಕರಿಗೆ ವಿನಂತಿಸಿದರು.ಶಾಲಾ ಮಕ್ಕಳ ಮುಂದಿನ ಜೀವನಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಬಸವರಾಜ್, ಶಾಲಾ ಮುಖ್ಯೋಪಾಧ್ಯಾಯನಿ ಜಯಂತಿ ಎಸ್ ಡಿ […]
ಕಾರ್ಕಳ ಎಂ.ಪಿ.ಎಂ ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವ ಸಮಾರಂಭ

ಕಾರ್ಕಳ : ಒಳ್ಳೆಯ ಸಂಗತಿಗಳನ್ನು ಸ್ವೀಕರಿಸುವ ಮನಸ್ಸು ವಿದ್ಯಾರ್ಥಿಗಳಲ್ಲಿ ಮೊದಲಾಗಿ ಇರಬೇಕು. ಸಾಧನೆ ಮಾಡಲು ಪ್ರತಿಯೊಬ್ಬರಿಗೂ ತಯಾರಿ ಮುಖ್ಯ ವಿಷಯವಾಗಿದೆ. ಪೋಷಕರ ಸಮರ್ಪಣೆ ಮತ್ತು ತ್ಯಾಗವು ಇನ್ನಷ್ಟು ಸದೃಢರನ್ನಾಗಿ ಮಾಡುತ್ತದೆ ಎಂದು ಆಳ್ವಾಸ್ ಕಾಲೇಜು ಮೂಡುಬಿದಿರೆ ಇಲ್ಲಿನ ಪ್ರಾಂಶುಪಾಲರಾದ ಡಾ.ಕುರಿಯನ್ ಅವರು ಹೇಳಿದ್ದಾರೆ. ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿನ 2023-24ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಪ್ರತಿಭೆ ಎಲ್ಲರಲ್ಲಿಯೂ ಇರುತ್ತದೆ, ಆದರೆ ಅದನ್ನು […]
ಕಾಪು: ಮೀನುಗಾರ ಮೃತ್ಯು.

ಕಾಪು: ಉದ್ಯಾವರ ಪಿತ್ರೋಡಿಯಲ್ಲಿ ಹೊಳೆಯಲ್ಲಿ ಬಲೆ ಬೀಸುತ್ತಿದ್ದಾಗ ದೋಣಿಯ ವಾಡಿ ಮೇಲೆ ಬಿದ್ದು ಮೀನುಗಾರ ಮೃತಪಟ್ಟ ಘಟನೆ ಮೇ.30ರಂದು ನಡೆದಿದೆ. ಮೃತ ಮೀನುಗಾರನನ್ನು ಪಿತ್ರೋಡಿಯ ಉದ್ಯಾವರ ನಿವಾಸಿ ಅನಿಲ್ (46) ಎಂದು ಗುರುತಿಸಲಾಗಿದೆ. ವಾಸು ಅವರಿಗೆ ಸೇರಿದ ದೋಣಿಯಲ್ಲಿ ಪಿತ್ರೋಡಿ ಪಾಪನಾಶಿನಿ ಹೊಳೆಯಲ್ಲಿ ಮೀನು ಹಿಡಿಯಲೆಂದು ತೆರಳಿದ್ದು, ಹೊಳೆಯಲ್ಲಿ ಬಲೆ ಬೀಸುತ್ತಿದ್ದಾಗ ಆಯತಪ್ಪಿ ದೋಣಿಯೊಳಗೆ ಅಳವಡಿಸಿರುವ ವಾಡಿ ಮೇಲೆ ತಲೆಕೆಳಗಾಗಿ ಬಿದ್ದು ಗಂಭೀರ ಗಾಯಗೊಂಡಿದ್ದು, ಅವರ ಜತೆಗಿದ್ದ ಭರತೇಶ್ ಅನಿಲ್ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. […]
ಕುಂದಾಪುರ: ಆಸ್ಪತ್ರೆಯ ವೈದ್ಯೆಗೆ ಲೈಂಗಿಕ ಕಿರುಕುಳ – ವೈದ್ಯಾಧಿಕಾರಿ ವಜಾ.

ಕುಂದಾಪುರ: ಸರಕಾರಿ ಆಸ್ಪತ್ರೆಯ ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ ಡಾ| ರಾಬರ್ಟ್ ರೆಬೆಲ್ಲೋ ವಿರುದ್ಧ ವೈದ್ಯೆ ಒಬ್ಬರಿಗೆ ಮಾನಸಿಕ, ಲೈಂಗಿಕ ಕಿರುಕುಳ ನೀಡಿ ಬೆದರಿಕೆ ಹಾಕಿದ ಪ್ರಕರಣ ದಾಖಲಾಗಿದೆ. ಆಸ್ಪತ್ರೆಯ ಕರ್ತವ್ಯಕ್ಕೆ ಹೊಸದಾಗಿ ಸೇರಿದ ವೈದ್ಯೆಗೆ ಕಳೆದ 8 ತಿಂಗಳಿನಿಂದ ವಾಟ್ಸಾಪ್‌ನಲ್ಲಿ ತಡರಾತ್ರಿ ನಿರಂತರ ಅಶ್ಲೀಲ ಚಾಟ್‌ಗಳನ್ನು ಮಾಡುತ್ತಾ, ಸ್ಟೇಟಸ್‌ನ ಫೋಟೊಗಳನ್ನು ಸೇವ್ ಮಾಡಿ ಅದಕ್ಕೆ ಅಶ್ಲೀಲ ಕಮೆಂಟ್‌ಗಳನ್ನು ಕಳುಹಿಸಿ, ದುಬಾರಿ ಹೊಟೇಲ್‌ಗೆ ಕರೆದೊಯ್ಯುತ್ತೇನೆ ಎಂದು ಕರೆಯುತ್ತಿದ್ದರು. ಪ್ರಭಾವಿಗಳ ಜತೆ, ರಾಜಕಾರಣಿಗಳ ಜತೆ ಇರುವ ಫೋಟೊಗಳನ್ನು, ವಿದೇಶದಲ್ಲಿ ಹೊಟೇಲ್‌ನಲ್ಲಿ […]
ಬಂಜಾರ ಕನ್ವೆನ್ಷನ್ ಹಾಲ್ ನಲ್ಲಿ ಪದವೀಧರ ಮತದಾರರ ಸಮಾವೇಶ: ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮತಯಾಚನೆ

ಶಿವಮೊಗ್ಗ: ಗ್ರಾಮಾಂತರ ಬಿಜೆಪಿ ವತಿಯಿಂದ ನೈರುತ್ಯ ಪದವೀಧರ ಕ್ಷೇತ್ರದ ಮತದಾರರೊಂದಿಗೆ ಜಿಲ್ಲಾ ಬಂಜಾರ ಸಭಾಭವನದಲ್ಲಿ ಶುಕ್ರವಾರ ಸಮಾವೇಶ ನಡೆಸಿ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರ ಪರವಾಗಿ ಮತ ಯಾಚಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮಾಂತರ ಮಾಜಿ ಶಾಸಕರಾದ ಕೆ.ಬಿ.ಅಶೋಕ್ ನಾಯ್ಕ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೆಗೌಡ್ರು, ಡಿ.ಎಸ್.ಅರುಣ್, ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ಎಸ್.ದತ್ತಾತ್ರಿ, ತಾಲ್ಲೂಕು ಅಧ್ಯಕ್ಷ ಸಿಂಗನಹಳ್ಳಿ ಸುರೇಶ್, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಬಸವರಾಜಪ್ಪ,ಮಾಜಿ ಜಿಲ್ಲಾ ಪಂಚಾಯಿತಿ […]