ಕಾರ್ಕಳ ಎಂ.ಪಿ.ಎಂ ಕಾಲೇಜಿನಲ್ಲಿ  ಕಾಲೇಜು ವಾರ್ಷಿಕೋತ್ಸವ ಸಮಾರಂಭ

ಕಾರ್ಕಳ : ಒಳ್ಳೆಯ ಸಂಗತಿಗಳನ್ನು ಸ್ವೀಕರಿಸುವ ಮನಸ್ಸು ವಿದ್ಯಾರ್ಥಿಗಳಲ್ಲಿ ಮೊದಲಾಗಿ ಇರಬೇಕು. ಸಾಧನೆ ಮಾಡಲು ಪ್ರತಿಯೊಬ್ಬರಿಗೂ ತಯಾರಿ ಮುಖ್ಯ ವಿಷಯವಾಗಿದೆ. ಪೋಷಕರ ಸಮರ್ಪಣೆ ಮತ್ತು ತ್ಯಾಗವು ಇನ್ನಷ್ಟು ಸದೃಢರನ್ನಾಗಿ ಮಾಡುತ್ತದೆ ಎಂದು ಆಳ್ವಾಸ್ ಕಾಲೇಜು ಮೂಡುಬಿದಿರೆ ಇಲ್ಲಿನ ಪ್ರಾಂಶುಪಾಲರಾದ ಡಾ.ಕುರಿಯನ್ ಅವರು ಹೇಳಿದ್ದಾರೆ.

ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿನ  2023-24ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಪ್ರತಿಭೆ ಎಲ್ಲರಲ್ಲಿಯೂ ಇರುತ್ತದೆ, ಆದರೆ ಅದನ್ನು ಪೋಷಿಸಿ ಸಾಧಿಸುವ ಛಲ, ಸ್ಪಷ್ಟತೆ ನಮ್ಮಲ್ಲಿರಬೇಕು ನಮ್ಮ ಭವಿಷ್ಯದ ಶಿಲ್ಪಿಗಳು ನಾವೇ. ಅವಕಾಶ ಸಿಕ್ಕಾಗ ಕೈ ಚೆಲ್ಲಿ ಕುಳಿತುಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ್ಯ ಅತಿಥಿಯಾದ ಭಾಗವಹಿಸಿದ ವಾಣಿಜ್ಯ ತೆರಿಗೆ (ಜಾರಿ) ,ಪಶ್ಚಿಮ ವಲಯ , ಮಂಗಳೂರು ಇಲ್ಲಿನ ಜಂಟಿ ಆಯುಕ್ತರಾದ ಡಾ.ಕುಮಾರ್ ನಾಯ್ಕ್ ಜಿ. ಮಾತನಾಡಿ, ಶಿಕ್ಷಣ ಮತ್ತು ಕ್ರೀಡೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದರೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ನಮ್ಮ ಗುರಿಯನ್ನು ತಲುಪಲು ಅನುಕೂಲವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಕಿರಣ್ ಎಂ ಇವರು ಮಾತನಾಡಿ, ಸಾಮಾಜಿಕ ಜಾಲತಾಣದಿಂದ ದೂರ ಇರಿ ಎನ್ನುವ ಸಲಹೆ ನೀಡಿದರು. ಶೈಕ್ಷಣಿಕ ಮತ್ತು ಕ್ರೀಡಾ ವಿಭಾಗದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಸಹಾಯಕ ಪ್ರಾಧ್ಯಾಪಕರಾದ ಮಂಜುನಾಥ್ ಬಿ., ಉಪನ್ಯಾಸಕರಾದ ನಮಿತಾ ಆಚಾರ್ಯ, ದಿವ್ಯಶ್ರೀ, ದೈಹಿಕ  ಶಿಕ್ಷಣ ನಿರ್ದೇಶಕರಾದ ಡಾ. ಜಯಭಾರಾತಿ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ಚಂದ್ರಾವತಿ ಬಹುಮಾನಿತರ ಪಟ್ಟಿ ವಾಚಿಸಿದರು. ಕಾಲೇಜಿನ ಐಕ್ಯೂಎಸಿ ಸಂಚಾಲಕಿ, ಸಹಾಯಕ ಪ್ರಾಧ್ಯಾಪಕಿ ಸುಷ್ಮಾ ರಾವ್ ಅವರು ಕಾಲೇಜಿನ ವರದಿ ವಾಚಿಸಿದರು.

ಕಾಲೇಜಿನ ಕಛೇರಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕೆ.ಎಸ್.ಪ್ರಭು , ಬಿಬಿಎ ಪದವಿಯಲ್ಲಿ ರಾಂಕ್ ಪಡೆದ ರಕ್ಷಿತಾ ಕೆ ಪೂಜಾರಿ, ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಂತೋಷ್ ನಾಯಕ್ , ವರ್ಷ ವಿ ಶೆಣೈ, ಸುಮೇರ ಜೈನ್ ಮತ್ತು ಕ್ರೀಡೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ ಭರತ್ ಇವರನ್ನು ಸನ್ಮಾನಿಸಲಾಯಿತು. ಎಂಕಾಂ ವಿಭಾಗದ ಸಂಯೋಜಕ, ಸಹಪ್ರಾಧ್ಯಾಪಕರಾದ ಡಾ.ವಿಧ್ಯಾಧರ್, ಸಹಪ್ರಾದ್ಯಾಪಕರಾದ ಡಾ.ಗಣೇಶ್ ಎಸ್, ಉಪನ್ಯಾಸಕಿ ಅಕ್ಷತಾ ಅವರು ಸನ್ಮಾನಿತರನ್ನು ಪರಿಚಯಿಸಿದರು.

ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ಚಂದ್ರಾವತಿ, ಕಾಲೇಜಿನ ಐಕ್ಯೂಎಸಿ ಸಂಚಾಲಕಿ, ಸಹಾಯಕ ಪ್ರಾಧ್ಯಾಪಕಿ ಸುಷ್ಮಾ ರಾವ್, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜೇಶ್ ಆಚಾರ್ಯ  ವಿದ್ಯಾರ್ಥಿ ವೇದಿಕೆಯ ಕಾರ್ಯದರ್ಶಿಗಳಾದ ಕೀರ್ತನ್, ಅಜಿತ್, ರಕ್ಷಿತ್ ಶೆಟ್ಟಿ  ಜೀವನ್, ಹಾರ್ದಿಕ್ ಶೆಟ್ಟಿ, ಅನನ್ಯ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಧ್ಯಾಪಕ ವೃಂದ, ಬೋಧಕೇತರ ಸಿಬ್ಬಂದಿಗಳು , ಹಳೆ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಜರಿದ್ದರು.

ವಿದ್ಯಾರ್ಥಿವೇದಿಕೆ ಕಾರ್ಯದರ್ಶಿ ಹಾರ್ದಿಕ್ ಶೆಟ್ಟಿ ಸ್ವಾಗತಿಸಿದರು. ಚೈತ್ರ ಕುಡ್ವ ಮತ್ತು ಬಳಗದವರು ಪ್ರಾರ್ಥಿಸಿದರು. ವಿದ್ಯಾರ್ಥಿ ವೇದಿಕೆ ಕಾರ್ಯದರ್ಶಿಗಳಾದ ರಕ್ಷಿತ್ ಶೆಟ್ಟಿ, ಜೀವನ್ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿಯರಾದ ಅನುಶ್ರೀ ಮತ್ತು ಪೃಥ್ವಿನಿ ನಿರೂಪಿಸಿ , ವಿದ್ಯಾರ್ಥಿವೇದಿಕೆ ಕಾರ್ಯದರ್ಶಿ ಕೀರ್ತನ್ ವಂದಿಸಿದರು.