ಒಂದೇ ಫ್ರೇಮಿನಲ್ಲಿ ನಾಲ್ಕು ತಲೆಮಾರು- ಕಾರ್ತಿಕ್ ಪ್ರಭು ಕ್ಲಿಕ್ಕಿಸಿದ ಚಿತ್ರ
ಚಿತ್ರ: ಕಾರ್ತಿಕ್ ಪ್ರಭು
ಆಳ್ವಾಸ್ ಪಿಯು ಕಾಲೇಜಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಸೈನ್ಸ್, ಕಾಮರ್ಸ್ ಮತ್ತು ಆರ್ಟ್ಸ್ ವಿಭಾಗದಲ್ಲಿ ಪ್ರವೇಶಾತಿ ಆರಂಭ.
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ 2024-25ರ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಸೈನ್ಸ್, ಕಾಮರ್ಸ್ ಮತ್ತು ಆರ್ಟ್ಸ್ ವಿಭಾಗದಲ್ಲಿ ಪ್ರವೇಶಾತಿ ಪ್ರಾರಂಭವಾಗಿದೆ. ರಾಜ್ಯದ ಟಾಪ್ 10 ರ‍್ಯಾಂಕ್‌ಗಳಲ್ಲಿ ಆಳ್ವಾಸ್’ನ 55 ವಿದ್ಯಾರ್ಥಿಗಳು ಸ್ಥಾನ ಪಡೆದುಕೊಂಡಿದ್ದಾರೆ.701 ವಿದ್ಯಾರ್ಥಿಗಳು (570/600) 95%ಕ್ಕಿಂತ ಹೆಚ್ಚು ಅಂಕಗಳು, 2027 ವಿದ್ಯಾರ್ಥಿಗಳು (540/600) 90%ಕ್ಕಿಂತ ಹೆಚ್ಚು ಅಂಕಗಳು ಹಾಗೂ 2882 ವಿದ್ಯಾರ್ಥಿಗಳು (510/600) 85%ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ಅತ್ಯುತ್ತಮ ಸಾಧನೆಯನ್ನು ಮೆರೆದಿದ್ದಾರೆ. ಎರಡು ವರ್ಷಗಳ ಇಂಟಿಗ್ರೇಟೆಡ್ ಪಿಯು […]
ಮಂಗಳೂರು: ಬೈಕಿನಿಂದ ರಸ್ತೆಗೆ ಬಿದ್ದು ಮಹಿಳೆ ಮೃತ್ಯು.
ಮಂಗಳೂರು: ಮಹಿಳೆಯೊಬ್ಬರು ಬೈಕಿನಿಂದ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಮಂಗಳೂರು ನಗರದಲ್ಲಿ ಸಂಭವಿಸಿದೆ. ಸಾವನ್ನಪ್ಪಿದವರು ಗೋರಿಗುಡ್ಡ ನಿವಾಸಿ ಕವಿತಾ (30) ಎಂದು ತಿಳಿಯಲಾಗಿದೆ. ರಾತ್ರಿ ಅಭಿಷೇಕ್ ಅವರು ಕವಿತಾ ಹಾಗೂ ನವ್ಯಾ (15) ಅವರನ್ನು ಪಲ್ಸರ್ ಬೈಕಿನಲ್ಲಿ ಕುಳ್ಳಿರಿಸಿಕೊಂಡು ಬಂದು ಗೋರಿಗುಡ್ಡ ವೆಲೆನ್ಸಿಯಾ ಚರ್ಚ್ ರಸ್ತೆಯಲ್ಲಿರುವ ತರಕಾರಿ ಅಂಗಡಿಯಿಂದ ಎಳನೀರು ಖರೀದಿಸಿದ್ದರು. ಬಳಿಕ ಅಲ್ಲಿಂದ ಮನೆಯ ಕಡೆಗೆ ಹೋಗುತ್ತಿದ್ದಾಗ ಕವಿತಾ ರಸ್ತೆಗೆ ಬಿದ್ದರು. ಅವರನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ […]
CSEET ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಧೀರಜ್ ಆಯ್ಕೆ.
ಹೆಮ್ಮಾಡಿ; ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ (Institute of Company Secretary of India) ಅವರು ಮೇ4ರಂದು ನಡೆಸಿದ ಅತ್ಯಂತ ಕಠಿಣಕರವಾದ CSEET ಅರ್ಹತಾ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಧೀರಜ್ 119/200 ಅಂಕಗಳನ್ನು ಪಡೆದು ತೇರ್ಗಡೆಯಾಗುವ ಮೂಲಕ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಇನ್ಸಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ನಡೆಸುವ ರಾಷ್ಟ್ರಮಟ್ಟದ ಅತೀ ಕಷ್ಟಕರವಾದ ಪರೀಕ್ಷೆ ಇದಾಗಿದ್ದು ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಧೀರಜ್ ಪಿಯುಸಿ […]
ಜಿ.ಟಿ.ಟಿ.ಸಿ ಡಿಪ್ಲೋಮಾ ಕೋರ್ಸ್’ಗಳ ಪ್ರವೇಶಾತಿ: ಅರ್ಜಿ ಆಹ್ವಾನ
ಉಡುಪಿ: ಉಡುಪಿಯ ಕೊಳಲಗಿರಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ತಾಂತ್ರಿಕ ಡಿಪ್ಲೋಮಾ ಕೋರ್ಸ್ಗಳ ಪ್ರವೇಶಾತಿಗೆ ಎಸ್.ಎಸ್.ಎಲ್.ಸಿ ಪಾಸಾದ ವಿದ್ಯಾರ್ಥಿಗಳಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮುಖಾಂತರ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಜಿ.ಟಿ.ಟಿ.ಸಿ ಕೇಂದ್ರದಲ್ಲಿ 3+1 ವರ್ಷದ ಡಿಪ್ಲೋಮಾ ಇನ್ ಟೂಲ್ ಡೈ ಮೇಕಿಂಗ್, ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ ಮತ್ತು ಡಿಪ್ಲೋಮಾ ಇನ್ ಪ್ರಿಸಿಶನ್ ಮ್ಯಾನ್ಯುಪ್ಯಾಕ್ಚರಿಂಗ್ ಕೋರ್ಸ್ಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಐ.ಟಿ.ಐ ಮತ್ತು ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾದ […]