ಮಂಗಳೂರು: ನಾಳೆ ಸಂಗೀತ ಭಾರತಿ ಪ್ರತಿಷ್ಠಾನ ಪ್ರಯುಕ್ತ ‘ಸ್ವರ ಸಂಧ್ಯಾ’ ಶಾಸ್ತ್ರೀಯ ಹಿಂದೂಸ್ಥಾನಿ ಸಂಗೀತ ಜುಗಲ್ ಬಂದಿ ಕಾರ್ಯಕ್ರಮ

ಮಂಗಳೂರು: ಸಂಗೀತ ಭಾರತಿ ಪ್ರತಿಷ್ಠಾನ (ರಿ), ಮಂಗಳೂರು ಇವರ ಆಶ್ರಯದಲ್ಲಿ ಇದೇ ಬರುವ ಮೇ 19 ರಂದು ಸಂಜೆ 5.30 ಗಂಟೆಗೆ ‘ಸ್ವರ ಸಂಧ್ಯಾ’ ಶಾಸ್ತ್ರೀಯ ಹಿಂದೂಸ್ತಾನೀ ಸಂಗೀತ ಜುಗಲ್ ಬಂಧಿ ಕಾರ್ಯಕ್ರಮವನ್ನು ಮಂಗಳೂರು ನಗರದ ಫಾದರ್ ಎಲ್‍ಎಫ್ ರಾಸ್ಕ್ವಿನ್ಹಾ ಹಾಲ್, ಎಲ್‍ಸಿಆರ್‍ಐ ಬ್ಲಾಕ್ ಸೇಂಟ್ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.ಪೂರ್ವಾಧದಲ್ಲಿ ರಾಷ್ಟ್ರಮಟ್ಟದ ಖ್ಯಾತಿಯ ಕಲಾವಿದರಾದ ದೆಹಲಿಯ ಖ್ಯಾತ ಪಿಟೀಲು ವಾದಕ ಪಂಡಿತ್ ಸಂತೋಷ್ ಕುಮಾರ್ ನಹರ್ ಇವರಿಂದ ವಯೋಲಿನ್ ಕಾರ್ಯಕ್ರಮ ನಡೆಯಲಿದ್ದು, ಉತ್ತರಾರ್ಧದಲ್ಲಿ ಶಿವಮೊಗ್ಗದ ನೌಶಾದ್ […]

ಉಡುಪಿ ನಗರಸಭೆ: ಮಳೆಗಾಲದಲ್ಲಿ ಮುಂಜಾಗೃತಾ ಕ್ರಮವಹಿಸಿ

ಉಡುಪಿ, ಮೇ 18: ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆ, ನಗರಸಭಾ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿ ಯಾವುದೇ ಆಸ್ತಿಪಾಸ್ತಿಗಳಿಗೆ ಹಾನಿಯಾಗದಂತೆ ಸಾಕಷ್ಟು ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಉಡುಪಿ ನಗರಸಭೆಯ ಪ್ರಕಟಣೆ ತಿಳಿಸಿದೆ. ಮಳೆಗಾಲದಲ್ಲಿ ಸಾಕಷ್ಟು ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿರುವುದರಿಂದ ಸುತ್ತಮುತ್ತ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಗೂಡಂಗಡಿಗಳ ಮಾಲೀಕರು ತಮ್ಮಲ್ಲಿರುವ ಎಳನೀರು ಬೊಂಡವನ್ನು ಅದೇ ದಿನ ವಿಲೇವಾರಿ ಮಾಡಬೇಕು ಹಾಗೂ ಚರಂಡಿಗೆ ಕಸ ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇತರೆ ಯಾವುದೇ ರೀತಿಯ ತ್ಯಾಜ್ಯಗಳನ್ನು ಎಸೆಯಬಾರದು. ಮಳೆಗಾಲದಲ್ಲಿ ನಿಂತ ನೀರಿನಿಂದ […]

ಡಾ.ಸರ್ಜಿಗೆ ಮತ ನೀಡಿ ವಿಧಾನ ಪರಿಷತ್’ಗೆ ಕಳಿಸಿಕೊಡಿ: ಪಿಇಎಸ್ ಕಾಲೇಜಿನ ಆಡಳಿತ ಸಂಯೋಜಕ ಡಾ.ನಾಗರಾಜ್ ಮನವಿ

ಶಿವಮೊಗ್ಗ: ನಗರದ ಪಿಇಎಸ್ ಕಾಲೇಜ್ ಸಭಾಂಗಣದಲ್ಲಿ ಶನಿವಾರ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯ ಹಿನ್ನೆಲೆ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಪಿಇಎಸ್ ಕಾಲೇಜಿನ ಆಡಳಿತ ಸಂಯೋಜಕರಾದ ಡಾ. ನಾಗರಾಜ್ ಮಾತನಾಡಿ,ಡಾ. ಧನಂಜಯ ಸರ್ಜಿ ಅವರು ರಾಜ್ಯದ ಹೆಸರಾಂತ ಮಕ್ಕಳ ತಜ್ಞರು, ವಿದ್ಯಾವಂತರು ರಾಜಕೀಯಕ್ಕೆ ಬರಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ಬಾರಿ ಹೇಳುತ್ತಲೇ ಇರುತ್ತಾರೆ, ಅಂತೆಯೇ ಡಾ. ಧನಂಜಯ ಸರ್ಜಿ ಇಂದು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಮ್ಮ […]

ಹೆಚ್ಚು ಬಾರಿ ರಕ್ತದಾನ ಮಾಡಿರುವ ದಾನಿಗಳಿಗೆ ಪುರಸ್ಕಾರ: ಅರ್ಜಿ ಆಹ್ವಾನ

ಉಡುಪಿ, ಮೇ 18: ಎ, ಬಿ ಮತ್ತು ಒ ರಕ್ತದ ಗುಂಪನ್ನು ಕಂಡುಹಿಡಿದ ಡಾ. ಕಾರ್ಲ್ ಲ್ಯಾಂಡ್ ಸ್ಟೇನಿಯರ್‌ರವರ ಹುಟ್ಟುಹಬ್ಬವನ್ನು ಸ್ಮರಿಸಿ ಪ್ರತಿ ವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಕರ್ನಾಟಕ ರಾಜ್ಯ ರೆಡ್ ಕ್ರಾಸ್ ಸಂಸ್ಥೆಯು ಹಮ್ಮಿಕೊಳ್ಳುವ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಕನಿಷ್ಠ ಇಪ್ಪತ್ತೈದಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿರುವ ದಾನಿಗಳನ್ನು ಹಾಗೂ ಜಿಲ್ಲಾ ಘಟಕದಿಂದ ಕನಿಷ್ಠ 15 ಬಾರಿ ಮೇಲ್ಪಟ್ಟು ರಕ್ತದಾನ ಮಾಡಿರುವ ದಾನಿಗಳನ್ನು ಗುರುತಿಸಿ ಈ ಸಂದರ್ಭದಲ್ಲಿ ಗೌರವಿಸಿ […]

ವಿದ್ಯಾವಂತ-ಪ್ರಜ್ಞಾವಂತ ಮತದಾರರು ಮತ ನೀಡುವಂತೆ ಡಾ.ಧನಂಜಯ ಸರ್ಜಿ ಮನವಿ.

ಶಿವಮೊಗ್ಗ: ಇದೇ ಜೂನ್ 3 ರಂದು ನಡೆಯಲಿರುವ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ನಾನು ಬಿಜೆಪಿ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುತ್ತಿದ್ದು, ವಿದ್ಯಾವಂತ-ಪ್ರಜ್ಞಾವಂತ ಮತದಾರರು ಮತ ನೀಡಿ ಅಭೂತ ಪೂರ್ವ ಗೆಲುವಿಗೆ ಕಾರಣರಾಗಬೇಕು ಎಂದು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮನವಿ ಮಾಡಿದರು. ನಗರದ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ವೈದ್ಯ ಶಿಕ್ಷಣ ಮುಗಿದ ತಕ್ಷಣ ನಾನು ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ, ನಂತರ ಚಿಕ್ಕದಾಗಿ ಒಂದು ಕ್ಲಿನಿಕ್ ಆರಂಭಿಸಿದ್ದು, […]