ಬೆಳೆ ಹಾನಿ ಪರಿಹಾರ: ಸಹಾಯವಾಣಿ ಸ್ಥಾಪನೆ

ಉಡುಪಿ: ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇಲೆ ಫ್ರೂಟ್ಸ್ ಐಡಿ ಹೊಂದಿರುವ, ಪಹಣಿ ಜೋಡಣೆಯಾಗಿರುವ ರೈತರಿಗೆ ಪರಿಹಾರ ತಂತ್ರಾ೦ಶದ ಮೂಲಕ ಹಂತ -ಹಂತವಾಗಿ ಪರಿಹಾರ ಪಾವತಿಸುವ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಬೆಳೆ ಹಾನಿ ಪರಿಹಾರದ ಬಗ್ಗೆ ರೈತರಿಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಕಚೇರಿಗಳಲ್ಲಿ ಸಹಾಯವಾಣಿಗಳನ್ನು ಪ್ರಾರಂಭಿಸಿ, ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿರುತ್ತದೆ. ಉಡುಪಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲಿಖಿತ ಸ್ವಾಮಿ ಬಿ.ವಿ ಹಾಗೂ ರವಿ ಓಜನಹಳ್ಳಿ ಅವರನ್ನು ನೇಮಿಸಲಾಗಿದ್ದು, ಸಹಾಯವಾಣಿ […]

ಬಿಸಿಲಿನ ತಾಪಮಾನ ಹೆಚ್ಚಳ ಹಿನ್ನೆಲೆ: ಬೆಂಕಿ ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸಿ – ಜಿಲ್ಲಾಧಿಕಾರಿ

ಉಡುಪಿ: ಪ್ರಸ್ತುತ ಜಿಲ್ಲೆಯಲ್ಲಿ ಬೇಸಿಗೆ ಹಿನ್ನೆಲೆ, ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಈಗಾಗಲೇ ಜಿಲ್ಲಾಡಳಿತದಿಂದ ನಿರ್ದೇಶನಗಳನ್ನು ನೀಡಲಾಗಿರುತ್ತದೆ. ಈ ಸಮಯದಲ್ಲಿ ಬೆಂಕಿ ಅವಗಡಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಬೆಂಕಿ ಅನಾಹುತ ಸಂಭವಿಸುವ ವಸ್ತುಗಳಾದ ಪೆಟ್ರೋಲ್, ಡೀಸೇಲ್, ಪಟಾಕಿ ಮತ್ತು ಇತರೆ ಸ್ಫೋಟಕ ವಸ್ತುಗಳ ಅಧೀಕೃತ ದಾಸ್ತಾನು ಹೊಂದಿರುವವರು ಮತ್ತು ದಾಸ್ತಾನು ಮಾಡುವ ಸ್ಥಳಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಕೂಡಲೇ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಯಾವುದೇ ಅನಾಹುತಗಳು ಸಂಭವಿಸದಂತೆ ಜಾಗೃತರಾಗಿದ್ದು […]

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ ಉಡುಪಿ: ಇಂದು ಬಾಲಭೋಜನಾಲಯ, ಧ್ಯಾನ ಮಂದಿರ ಲೋಕಾರ್ಪಣೆ

ಉಡುಪಿ: ಉಡುಪಿ ಕವಿ ಮುದ್ದಣ ಮಾರ್ಗದ ಸನಿಹದಲ್ಲಿರುವ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ಮೊದಲ ಮಹಡಿಯಲ್ಲಿ ಸಂಪ್ರದಾಯದಂತೆ ಪ್ರತೀ ಗುರುವಾರ ನಡೆಯುತ್ತಿರುವ ಬಾಲ ಭೋಜನ, ಅನ್ನದಾನ ಸೇವೆಗಳಿಗೆ ಅನುಕೂಲವಾಗಲು ನಿರ್ಮಿಸಲಾದ ಬಾಲಭೋಜನಾಲಯ ಮತ್ತು ಧ್ಯಾನ ಮಂದಿರದ ಲೋಕಾರ್ಪಣೆ ಇಂದು (ಮೇ.10) ಬೆಳಗ್ಗೆ 9 ಗಂಟೆಗೆ ನಡೆಯಲಿದೆ. ಬೆಳಗ್ಗೆ 8.30ಕ್ಕೆ ಗಣಪತಿ ಹೋಮ, 9.30ರಿಂದ ಮಕ್ಕಳ ಕುಣಿತ ಭಜನ ಸ್ಪರ್ಧೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ,12.30 ರಿಂದ ಅನ್ನಸಂತರ್ಪಣೆ ಜರಗಳಲಿದೆ. ಸಂಜೆ 6 ಗಂಟೆಗೆ ನಡೆಯಲಿರುವ ಧಾರ್ಮಿಕ […]