NATA ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಹೆಮ್ಮಾಡಿ ಜನತಾ ಕಾಲೇಜಿನ ವಿದ್ಯಾರ್ಥಿನಿ ಅಲಕಾ ಹೆಬ್ಬಾರ್.
ಹೆಮ್ಮಾಡಿ: ರಾಷ್ಟ್ರೀಯ ಮಟ್ಟದಲ್ಲಿ ನಡೆದ NATA ಪ್ರವೇಶ ಪರೀಕ್ಷೆ ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್,ಪರೀಕ್ಷೆ ಬರೆದ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಲಕಾ ಹೆಬ್ಬಾರ್ 161 ಅಂಕಗಳನ್ನು ಪಡೆದು, ಅದ್ವಿತೀಯ ಸಾಧನೆ ಮಾಡುವುದರ ಮೂಲಕ ಅರ್ಹತೆ ಪಡೆದಿದ್ದು ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ ಮೂಡಿ ಬಂದಿದ್ದಾಳೆ. ಉಳಿದಂತೆಕಾಲೇಜಿನ ವಿದ್ಯಾರ್ಥಿನಿಯರಾದ ಉನ್ನತಿ ಗೌಡ 113 ಅಂಕಗಳು ಹಾಗೂ ವರ್ಣಾ ಆಚಾರ್ 113 ಅಂಕಗಳನ್ನು ಪಡೆದು ಸಾಧನೆ ಮೆರೆದಿರುತ್ತಾರೆ. ಕಾಲೇಜು ಪ್ರಾರಂಭದ ದ್ವಿತೀಯ ವರ್ಷದಲ್ಲೇ ಅಪ್ರತಿಮ ಸಾಧನೆ […]
ಅಕ್ಷಯ ತೃತೀಯ ಪ್ರಯುಕ್ತ ಉಡುಪಿ ನೋವೆಲ್ಟಿ ಜುವೆಲ್ಲರ್ಸ್’ನಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿ.
ಉಡುಪಿ: 7 ದಶಕಗಳ ಪರಂಪರೆಯುಳ್ಳ ಜಿಲ್ಲೆಯ ಪ್ರಥಮ ಚಿನ್ನಾಭರಣ ಅಂಗಡಿ “ನೋವೆಲ್ಟಿ” ಯ ಸಹ ಸಂಸ್ಥೆಯಾಗಿರುವ ಉಡುಪಿ ರಥ ಬೀದಿಯ” ನೋವೆಲ್ಟಿ ಜುವೆಲ್ಲರಿಯಲ್ಲಿ” ಅಕ್ಷಯ ತೃತೀಯ ಸಲುವಾಗಿ ದಿನಾಂಕ 10.05.2024 ರಂದು ನಮ್ಮಲ್ಲಿ ಖರೀದಿಸುವ ಎಲ್ಲಾ ಗ್ರಾಹಕರಿಗೆ ವಿಶೇಷ ರಿಯಾಯಿತಿಯನ್ನು ನೀಡಲಾಗುವುದು.916 ಹಾಲ್ ಮಾರ್ಕ್ ಚಿನ್ನಾಭರಣಗಳಲ್ಲದೆ ಎಲ್ಲಾ ತರಹದ ಬೆಳ್ಳಿಯ ಪೂಜಾ ಸಾಮಗ್ರಿ ಹಾಗೂ ಬೆಳ್ಳಿಯ ಗಿಫ್ಟ್ ಐಟಂಗಳು ನಮ್ಮಲ್ಲಿ ಲಭ್ಯ.ಈ ಶುಭದಿನದಂದು ಬೆಳ್ಳಿ ಬಂಗಾರವನ್ನು ಖರೀದಿಸಿದ ನಮ್ಮೆಲ್ಲ ಗ್ರಾಹಕರಿಗೆ ಸಂಪತ್ತು ವೃದ್ಧಿಯಾಗಲೆಂದು ಹಾರೈಸುತ್ತೇವೆ.
ಪ್ರತಿಷ್ಠಿತ ಶಾಲೆಗಳಲ್ಲಿ 6 ನೇ ತರಗತಿಗೆ ಸೇರ್ಪಡೆ: ಅರ್ಜಿ ಆಹ್ವಾನ
ಉಡುಪಿ: ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ವರ್ಗದ ಕಲ್ಯಾಣ ನಿರ್ದೇಶನಾಲಯದಿಂದ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ ಅದ್ಯಯನ ಮಾಡಲು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಒದಗಿಸಲಾಗಿದ್ದು, ಈ ಬಗ್ಗೆ 2023-24 ನೇ ಸಾಲಿನಲ್ಲಿ 5ನೇ ತರಗತಿಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಂದ 6 ನೇ ತರಗತಿಗೆ ಸೇರ್ಪಡೆಗೆ ಅರ್ಜಿ ಆಹ್ವಾನಿಸಲಾಗಿದೆ. 5ನೇ ತರಗತಿಯಲ್ಲಿ ಶೇ. 60 ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುವ ಹಾಗೂ ಪೋಷಕರ ವಾರ್ಷಿಕ ವರಮಾನ ರೂ 2. ಲಕ್ಷ ಒಳಗಿರುವ ವಿದ್ಯಾರ್ಥಿಗಳು ಮೇ 21 […]
ಹತ್ತನೇ ತರಗತಿ ಫಲಿತಾಂಶ: 94% ಉತ್ತೀರ್ಣತೆಯೊಂದಿಗೆ ಉಡುಪಿ ಪ್ರಥಮ, 92.12% ನೊಂದಿಗೆ ದ.ಕ ದ್ವಿತೀಯ; ಬಾಗಲಕೋಟೆಯ ಅಂಕಿತಾ ಬಸಪ್ಪ ರಾಜ್ಯಕ್ಕೆ ಟಾಪರ್
ಬೆಂಗಳೂರು: ಬಾಗಲಕೋಟೆಯ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ಅಂಕಿತಾ ಬಸಪ್ಪ 625ಕ್ಕೆ 625 ಅಂಕ ಪಡೆದು ಪ್ರಥಮ ಸ್ಥಾನ ಪಡೆದು ಕರ್ನಾಟಕ ಎಸ್‌ಎಸ್‌ಎಲ್‌ಸಿ (SSLC Results) ಟಾಪರ್ ಆಗಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿರುವ ಅಂಕಿತಾ ಬಸಪ್ಪ ಐಎಎಸ್ ಅಧಿಕಾರಿಯಾಗುವ ಹಂಬಲ ಹೊಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಚಿನ್ಮಯ್ ಜಿ.ಕೆ. 10ನೇ ತರಗತಿ ಪರೀಕ್ಷೆಯಲ್ಲಿ 624 ಅಂಕಗಳನ್ನು ಪಡೆದು ಟಾಪರ್‌ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ. ಈ […]
ವಿಕಲಚೇತನ ಮಕ್ಕಳಿಗೆ ವಸತಿ ಶಾಲೆ, ಕಾಲೇಜುಗಳಲ್ಲಿ ಶೇ.10 ಮೀಸಲಾತಿ.
ಉಡುಪಿ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ 826 ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ.ಬಿ.ಆರ್ ಅಂಬೇಡ್ಕರ್, ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾಗಾಂಧಿ ಹಾಗೂ ಏಕಲವ್ಯ ಮಾದರಿ ವಸತಿ ಶಾಲೆ ಹಾಗೂ ಕಾಲೇಜುಗಳ ಪೈಕಿ 807 ವಸತಿ ಶಾಲೆಗಳಲ್ಲಿ ಶೇ.25 ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ಮಕ್ಕಳು, ಎಚ್.ಐ.ವಿಗೆ ತುತ್ತಾದ ಪೋಷಕರ ಮಕ್ಕಳು,ಒಬ್ಬ ಪೋಷಕರನ್ನು ಮಾತ್ರ ಹೊಂದಿರುವ ಅಥವಾ ಅನಾಥ ಮಕ್ಕಳಿಗೆ ಶೇ. 10 ರ ಮೀಸಲಾತಿಯನ್ನು ನಿಗಧಿಪಡಿಸಿ, 6 ನೇ ತರಗತಿಗೆ […]