ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಎನ್.ಎಚ್.ಎ.ಐ ಒಪ್ಪಿಗೆ: 2 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ಸಿದ್ದತೆ
ಉಡುಪಿ: ಮಲ್ಪೆ – ತೀರ್ಥಹಳ್ಳಿ (ರಾಷ್ಟ್ರೀಯ ಹೆದ್ದಾರಿ 169ಎ) ಚತುಷ್ಪಥ ಯೋಜನೆ ಪ್ರಗತಿಯಲ್ಲಿದ್ದು, ಆಗುಂಬೆ ಘಾಟಿಯಲ್ಲಿ(Agumbe Ghat) ಪದೇ ಪದೇ ಗುಡ್ಡ ಕುಸಿತ, ತಡೆಗೋಡೆ ಬಿರುಕು ಸಮಸ್ಯೆ ಕಾಡುತ್ತಿದ್ದು ಈ ಹಿನ್ನೆಲೆಯಲ್ಲಿ ಸುರಂಗ ಮಾರ್ಗ ನಿರ್ಮಾಣ ಯೋಜನೆ ಮತ್ತೆ ಸದ್ದು ಮಾಡತೊಡಗಿದೆ. ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಕರಾವಳಿ ಮಲೆನಾಡು ಬೆಸೆಯುವ ಸುರಂಗ ಯೋಜನೆಯ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಯೋಜನೆಯ ಸಾಧಕ – […]
ಮಿಸೆಸ್ ಯುಎಇ ಇಂಟರ್ನ್ಯಾಷನಲ್ 2024: 2 ನೇ ರನ್ನರ್ ಅಪ್ ಆಗಿ ಮಿಂಚಿದ ಮಂಗಳೂರಿನ ಚೆಲುವೆ ಗ್ವಿನ್ ಶಿಬೋನಿ ಡಿಸೋಜಾ
ಮಂಗಳೂರು: ಮಂಗಳೂರಿನವರಾದ ಗ್ವಿನ್ ಶಿಬೋನಿ ಡಿಸೋಜಾ ಚಿನ್ನದ ವಿಭಾಗದಲ್ಲಿ ಮಿಸೆಸ್ ಯುಎಇ ಇಂಟರ್ನ್ಯಾಷನಲ್ 2024 ರ 2 ನೇ ರನ್ನರ್ ಅಪ್ ಮತ್ತು ಮಿಸೆಸ್ ಬೆಸ್ಟ್ ಪರ್ಸನಾಲಿಟಿ 2024 ರ ಉಪ ಶೀರ್ಷಿಕೆಯನ್ನು ಗೆದ್ದಿದ್ದಾರೆ. ಮೀನಾ ಅಸ್ರಾನಿ ಅವರ ಮುಸ್ಕಾನ್ ಈವೆಂಟ್ ದುಬೈ ಡೌನ್ ಟೌನ್ ನಲ್ಲಿ ಏ.21 ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶೇಖಾ ಫಾತಿಮಾ ಬಿಂತ್ ಹಶರ್ ಬಿನ್ ದಲ್ಮೌಕ್ ಅಲ್ ಮಕ್ತೌಮ್, ಎಕ್ಸಲೆನ್ಸಿ ಲೈಲಾ ರಹಲ್, ರೊಮೈನ್ ಗೆರಾರ್ಡಿನ್ – ಫ್ರೆಸ್ಸೆ ಹಾಗೂ ದುಬೈನ […]
ಅಕ್ಷಯ ತದಿಗೆಯ ಸುವರ್ಣ ಸಮೃದ್ದಿ: ನ್ಯೂ ನೊವೆಲ್ಟಿ ಜ್ಯುವೆಲ್ಲರ್ಸ್ ನಲ್ಲಿ ಆಭರಣ ಖರೀದಿಯೊಂದಿಗೆ ಪ್ರಾರಂಭಿಸಿ; ಚಿನ್ನ ಖರೀದಿಯ ಮೇಲೆ ಅತ್ಯಾಕರ್ಷಕ ರಿಯಾಯತಿ ಪಡೆಯಿರಿ
ಉಡುಪಿ: ಇಲ್ಲಿನ ಬಡಗುಪೇಟೆಯಲ್ಲಿರುವ ನಂಬಿಕೆಯ 78 ವರ್ಷಗಳ ವಿಶ್ವಾಸಾರ್ಹ ಸಂಸ್ಥೆ ನ್ಯೂನೊವೆಲ್ಟಿ ಜ್ಯುವೆಲ್ಲರ್ಸ್ ನಲ್ಲಿ ಅಕ್ಷಯ ತದಿಗೆಯ ಮುಂಗಡ ಬುಕ್ಕಿಂಗ್ ಪ್ರಾರಂಭ. ಚಿನ್ನ ಖರೀದಿಯ ಮೇಲೆ ಅತ್ಯಾಕರ್ಷಕ ಕೊಡುಗೆಗಳು ಪ್ರತಿ 10 ಗ್ರಾಂ ಚಿನ್ನಾಭರಣ ಖರೀದಿಗೆ 2000ರೂ ಕಡಿಮೆಪ್ರತಿ ಕ್ಯಾರೆಟ್ ವಜ್ರ ಖರೀದಿಗೆ 7000 ರೂ ರಿಯಾಯತಿಪ್ರತಿ ಕೆ.ಜಿ ಬೆಳ್ಳಿ ಆಭರಣ/ಸಾಮಾಗ್ರಿ ಮೇಲೆ 3000 ರೂ ಡಿಸ್ಕೌಂಟ್ಹಳೆಯ 22 ಕ್ಯಾರೆಟ್ ಚಿನ್ನ ವಿನಿಮಯಕ್ಕೆ 100% ಮೌಲ್ಯ ಕೊಡುಗೆ ಸೀಮಿತ ಅವಧಿವರೆಗೆ ಮಾತ್ರ ಕರೆ: 08202521312
ವಿಕಸನ: ಉಚಿತ ರಾಜ್ಯ ಮಟ್ಟದ ಬೇಸಿಗೆ ಶಿಬಿರ ಸಂಪನ್ನ
ಸಿದ್ಧಾಂತ್ ಫೌಂಡೇಶನ್ ನ ವತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ರಾಜ್ಯ ಮಟ್ಟದ ಹತ್ತು ದಿನಗಳ ‘ವಿಕಸನ’ ಬೇಸಿಗೆ ಶಿಬಿರವು, ಇತ್ತೀಚಿಗೆ ಅಂಬಲಪಾಡಿಯ ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನದ ಸಭಾಭವನದಲ್ಲಿ ಸಂಪನ್ನಗೊಂಡಿತು. ಶಿಬಿರದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು ಬಳಿಕ ಶಿಬಿರದ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮವು ಜರುಗಿತು.10ನೇ ತರಗತಿಯ ವಿದ್ಯಾರ್ಥಿಗಳ ವೈಯಕ್ತಿಕ ಹಾಗೂ ಶೈಕ್ಷಣಿಕ ಬೆಳವಣಿಗೆಗಳಿಗೆ ಪೂರಕವಾಗುವಂತೆ ನುರಿತ ವಿಶೇಷ ತಜ್ಞರಿಂದ ಚಟುವಟಿಕೆ ಆಧಾರಿತ ಕಲಿಕೆಗಳಾದ ವಿಜ್ಞಾನ, ಗಣಿತ, ವಾಣಿಜ್ಯ ಹಾಗೂ ಪ್ರಯೋಗಶಾಲಾ ಪ್ರಯೋಗದ ಕುರಿತು ಮಾಹಿತಿ ಮತ್ತು […]
ಜಾನಪದ ವಿದ್ವಾಂಸ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ನಿಧನ
ಪುತ್ತೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಜಾನಪದ ವಿದ್ವಾಂಸ, ಸಾಹಿತಿ, ಶಿಕ್ಷಕ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ (79) ಮಂಗಳವಾರ (7ಮೇ2024) ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 12 ಗಂಟೆಗೆ ಪುತ್ತೂರು ತಾಲ್ಲೂಕಿನ ಪಾಲ್ತಾಡಿ ಗ್ರಾಮದ ಅವರ ಸ್ವಗೃಹದಲ್ಲಿ ನಡೆಯಲಿದೆ.