ಮಟ ಮಟ ಮಧ್ಯಾಹ್ನವೆ ಬೆಂಗಳೂರಿಗರಿಗೆ ತಂಪೆರೆದ ವರುಣದೇವ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಮಟ ಮಟ ಮಧ್ಯಾಹ್ನವೇ ಮಳೆ ಶುರುವಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಮಳೆ ಕಂಡು ಹರ್ಷ ವ್ಯಕ್ತಪಡಿಸಿದ್ದಾರೆ. ಸತತ ಎರಡನೇ ದಿನ ಸಿಲಿಕಾನ್ ಸಿಟಿಯಲ್ಲಿ ಮಳೆ ಸುರಿಯುತ್ತಿದ್ದು, ಬೆಂಗಳೂರು ತನ್ನ ಗತ ವೈಭವಕ್ಕೆ ಮರಳಿದೆ. ರಾಜಧಾನಿಯ ಹಲವೆಡೆ ಬಿಸಿಲ ನಡುವೆ ಮಳೆ ಸುರಿದಿದ್ದು, ಬಿಸಿಲಿನ ಝಳಕ್ಕೆ ಕಾದಿದ್ದ ನಗರಕ್ಕೆ ಮಳೆಯ ಹನಿಗಳು ತಂಪೆರೆದಿವೆ. ಬೆಂಗಳೂರಿನ ಕಂಟೋನ್ಮೆಂಟ್, ರಾಜಾಜಿನಗರ, ಮಲ್ಲೇಶ್ವರ, ಗಾಯತ್ರಿ ನಗರ, ವಸಂತನಗರ, ಬಾಣಸವಾಡಿ, ಎಚ್‌ಬಿಆರ್ ಲೇಔಟ್, ಕಮ್ಮನಹಳ್ಳಿ, ಲಿಂಗರಾಜಪುರ, ಬಿಟಿಎಂ ಲೇಔಟ್, […]
ಬ್ರಹ್ಮಾವರ: ಎಚ್.ಪಿ.ಆರ್ ಕಾಲೇಜ್ ಆಫ್ ನರ್ಸಿಂಗ್ ನಲ್ಲಿ ಪ್ರವೇಶಾತಿ ಪ್ರಾರಂಭ
ಬ್ರಹ್ಮಾವರ: ಫಾರ್ಚೂನ್ ಅಕಾಡೆಮಿ ಎಂಡ್ ಚಾರಿಟೇಬಲ್ ಟ್ರಸ್ಟ್ ನ ಅಂಗ ಸಂಸ್ಥೆಯಾದ ಎಚ್.ಪಿ.ಆರ್ ಕಾಲೇಜ್ ಆಫ್ ನರ್ಸಿಂಗ್ ನಲ್ಲಿ 2024-25 ಸಾಲಿನ ಪ್ರವೇಶಾತಿ ಪ್ರಾರಂಭವಾಗಿದೆ. ಲಭ್ಯವಿರುವ ಕೋರ್ಸುಗಳು: ಬಿ.ಎಸ್ಸಿ ನರ್ಸಿಂಗ್ಜಿ.ಎನ್.ಎಂಪ್ಯಾರಾಮೆಡಿಕಲ್ ಕೋರ್ಸುಗಳು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9980527073/9110697255
ಅಜೆಕಾರು: ಟೆರೇಸ್ ನಿಂದ ಬಿದ್ದು ಶಿಕ್ಷಕ ಮೃತ್ಯು
ಅಜೆಕಾರು: ವಿಪರೀತ ಸೆಖೆ ಹಿನ್ನಲೆ ರಾತ್ರಿ ಮನೆಯ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕರೊಬ್ಬರು ಟೆರೇಸ್ ನಿಂದ ಕೆಳಗೆ ಬಿದ್ದು ಸಾವನಪ್ಪಿದ ಘಟನೆ ಅಜೆಕಾರು ಆಶ್ರಯನಗರದಲ್ಲಿ ನಡೆದಿದೆ. ಮೃತರನ್ನು ಕಾರ್ಕಳ ತಾಲೂಕಿನ ಎಣ್ಣೆ ಹೊಳೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿರುವ ಸುಂದರ ನಾಯ್ಕ್ (55) ಎಂದು ಗುರುತಿಸಲಾಗಿದೆ.ಸುಂದರ್ ನಾಯ್ಕ್ ರಾತ್ರಿ ಸುಮಾರು 10:30 ರ ವೇಳೆಗೆ ಟೆರೇಸ್ ಮೇಲೆ ಮಲಗಲು ತೆರಳಿದ್ದರು. ಬೆಳಿಗ್ಗೆ 6:30 ವೇಳೆಗೆ ಗಮನಿಸಿದಾಗ ಟೆರೇಸ್ ಮೇಲಿಂದ ಕೆಳಗೆ ಬಿದ್ದಿರೋದು ಬೆಳಕಿಗೆ ಬಂದಿದೆ. ಗಾಢ ನಿದ್ರೆಯಲ್ಲಿ ಆಯತಪ್ಪಿ […]
ಬ್ರಹ್ಮಾವರ: ಯುವಕನಿಗೆ ಲೈಂಗಿಕ ಕಿರುಕುಳ – ವಾಸ್ತುತಜ್ಞನ ಬಂಧನ
ಉಡುಪಿ: ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ವಾಸ್ತುತಜ್ಞನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬ್ರಹ್ಮಾವರ ಸಮೀಪದ ಮಟಪಾಡಿ ನಿವಾಸಿ ಅನಂತ ನಾಯ್ಕ್ (51) ಬಂಧಿತ ಆರೋಪಿ. ಈತ ಬ್ರಹ್ಮಾವರ ಬಸ್ ನಿಲ್ದಾಣ ಸಮೀಪದ ಲಾಡ್ಜ್ ವೊಂದರ ರೂಮಿನಲ್ಲಿ ವಾಸ್ತುತಜ್ಞ, ಜಲತಜ್ಞ, ಯೋಗ ಪಂಡಿತ, ಆಧ್ಯಾತ್ಮಿಕ ಪಂಡಿತ ಎಂಬುದಾಗಿ ಬೋರ್ಡ್ ಹಾಕಿಕೊಂಡು ವ್ಯವಹಾರ ನಡೆಸುತ್ತಿದ್ದ. 18ರ ಹರೆಯದ ಯುವಕ ತನ್ನ ತಂದೆಯೊಂದಿಗೆ ಈತನ ಬಳಿ ವಾಸ್ತು ಕೇಳಲು ಲಾಡ್ಜ್‌ನಲ್ಲಿರುವ ರೂಮಿಗೆ ರಾತ್ರಿ 9ಗಂಟೆ ಸುಮಾರಿಗೆ ಹೋಗಿದ್ದನು. ಈ ಸಂದರ್ಭ […]
ಕಿನ್ನಿಮೂಲ್ಕಿ: ಅಕಸ್ಮಾತ್ ಆಗಿ ಬಾವಿಗೆ ಬಿದ್ದವರಿಬ್ಬರ ರಕ್ಷಣೆ
ಕಿನ್ನಿಮೂಲ್ಕಿ: ಆಕಸ್ಮಿಕವಾಗಿ ಬಾವಿಗೆ ಬಿದ್ದ ಬಾಲಕನನ್ನು ಮೇಲಕ್ಕೆತ್ತಲು ಹಾರಿದ ಯುವಕನೂ ಮೇಲೆ ಬರಲಾಗದ ಘಟನೆಯೊಂದು ಕಿನ್ನಿಮೂಲ್ಕಿಯಲ್ಲಿ ನಡೆದಿದೆ. ಕಿನ್ನಿಮೂಲ್ಕಿಯ ಕಾರ್ಮಿಕರ ಕಾಲನಿಯ 16 ವರ್ಷದ ಬಾಲಕ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾನೆ. ಇದನ್ನು ನೋಡಿದ 34 ವರ್ಷದ ಯುವಕ ಬಾಲಕನನ್ನು ರಕ್ಷಿಸಲೆಂದು ಬಾವಿಗೆ ಹಾರಿದ್ದಾನೆ. ಸುಮಾರು 8 ಅಡಿ ಸುತ್ತಳತೆ, 35 ಅಡಿ ಆಳದ ಬಾವಿ ಇದಾಗಿದ್ದು, ಬಾವಿಯಲ್ಲಿ 5 ಅಡಿಗಳಷ್ಟು ನೀರಿತ್ತು. ಬಿದ್ದವರಿಬ್ಬರಿಗೂ ಮೇಲೆ ಬರಲು ಸಾಧ್ಯವಾಗಿರಲಿಲ್ಲ. ಇವರಿಬ್ಬರನ್ನೂ ದೂರದಿಂದ ಗಮನಿಸಿದ್ದ ವ್ಯಕ್ತಿಯೊಬ್ಬರು ಕೂಡಲೇ ಅಗ್ನಿಶಾಮಕದಳಕ್ಕೆ ಮಾಹಿತಿ […]