ಪಿಯುಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮಗಳನ್ನೇ ಕೊಲೆ ಮಾಡಿದ ತಾಯಿ

ಬೆಂಗಳೂರು: ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾಯಿ ಮಗಳನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ತಾಯಿ ಮೇಲೆ ಮಗಳು ಕೂಡ ಚಾಕುವಿನಿಂದ ದಾಳಿ ಮಾಡಿದ್ದು, ಗಾಯಗೊಂಡ ತಾಯಿ ಆಸ್ಪತ್ರೆ ಪಾಲಾಗಿದ್ದಾರೆ. ಸೆಕೆಂಡ್ ಪಿಯುಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ತಾಯಿ ಮಗಳ ನಡುವೆ ಜಗಳ ನಡೆದಿದೆ. ಎಕ್ಸಾಂಗೆ ಕಾಲೇಜಿಗೆ ಹೋಗ್ತೀನಿ ಎಂದು ಮನೆಯಿಂದ ಹೊರಡುತ್ತಿದ್ದ ಮಗಳು ಪರೀಕ್ಷೆಗೆ ಗೈರು ಹಾಜರಾಗಿದ್ದ ವಿಚಾರ ಸೋಮವಾರ ತಾಯಿಗೆ ತಿಳಿದಿದ್ದು, ಜಗಳ ಶುರು ಆಗಿತ್ತು. ಜಗಳ ಅತಿರೇಕಕ್ಕೆ […]

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್( ರಿ) ಉಡುಪಿ ಸಂಸ್ಥೆಯ ವತಿಯಿಂದ ಜಿಲ್ಲಾಮಟ್ಟದ ವಿಪ್ರ “ಭಕ್ತಿಸಂಗೀತ ಸ್ಪರ್ಧೆ”.

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್( ರಿ) ಉಡುಪಿ ಸಂಸ್ಥೆಯ ವತಿಯಿಂದ ಜಿಲ್ಲಾ ಮಟ್ಟದ ಭಕ್ತಿ ಗೀತೆ ಸ್ಪರ್ಧೆಯನ್ನು ದಿನಾಂಕ ಮೇ.12 ಭಾನುವಾರ ಬ್ರಾಹ್ಮಿ ಸಭಾಭವನದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಸ್ಪರ್ಧೆಯು ನಾಲ್ಕು ವಯೋಮಾನದ ವಿಭಾಗಗಳಲ್ಲಿ ನಡೆಯಲಿದ್ದು ಪ್ರತಿಯೊಂದು ವಿಭಾಗದಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿಗಳು ಕ್ರಮವಾಗಿ 5000/-, 3000/- ಮತ್ತು 2000/- ರೂ.ಗಳ ನಗದು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಈ ಭಕ್ತಿಗೀತೆಸ್ಪರ್ಧೆಯು 5 ವರ್ಷದಿಂದ 10 ವರ್ಷದವರೆಗೆ, 10 ವರ್ಷ ಮೇಲ್ಪಟ್ಟು 15 […]

ಜೆಇಇ ಎರಡನೇ ಹಂತದ ಪರೀಕ್ಷೆಯಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳಿಂದ ಸಾಧನೆ.

ಮೂಡುಬಿದಿರೆ: ಜೆಇಇ ಎರಡನೇ ಹಂತದ ಪರೀಕ್ಷೆಯಲ್ಲಿ ಆಳ್ವಾಸ್ ಪ.ಪೂ. ಕಾಲೇಜಿನ ಮೂವರು ವಿದ್ಯಾರ್ಥಿಗಳು 99 ಪರ್ಸೆಂಟೈಲ್‌ ಗಿಂತ ಅಧಿಕ ಪಡೆದಿದ್ದಾರೆ. ಎಚ್‌.ಆರ್. ರಜತ್ 99.6655, ಪ್ರಶಾಂತ 99.1289 ಹಾಗೂ ಪ್ರಜ್ವಲ್ ಚೌಧರಿ ನಂದೇಲಾ 99.0154 ಪರ್ಸೆಂಟೈಲ್ ಗಳಿಸಿದ್ದಾರೆ. ಕೆಟಗರಿ ವಿಭಾಗದಲ್ಲಿ ಆಕಾಶ್ ಬಸವರಾಜ್ ಬುಲ್ಲಮನ್ನವರ ರಾಷ್ಟ್ರ ಮಟ್ಟದಲ್ಲಿ 290ನೇ ರ್ಯಾಂಕ್, ಪ್ರಥಮ್ ಎಸ್. 425ನೇ ರ್ಯಾಂಕ್, ಆರ್ ರಕ್ಷಿತಾ 865ನೇ ರ್ಯಾಂಕ್ ಗಳಿಸಿದ್ದಾರೆ. 14ಮಂದಿ 98 ಪರ್ಸೆಂಟೆಲ್‌ಗಿಂತ ಅಧಿಕ, 34 ಮಂದಿ 97 ಪರ್ಸೆಂಟೈಲ್ ಗಿಂತ ಅಧಿಕ, […]

ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ವತಿಯಿಂದ ಡಿಪಿಎಲ್ ಸೀಸನ್ 1: ಓಶನ್ ರಿಯಲ್ ಫೈಟರ್ಸ್ ತಂಡ ಚಾಂಪಿಯನ್

ಉಡುಪಿ: ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ವತಿಯಿಂದ ಭಾನುವಾರ ಮಣಿಪಾಲದ ಲೇಕ್ ವೀವ್ ಗ್ರೌಂಡ್ ನಲ್ಲಿ ಡಿಪಿಎಲ್ ಸೀಸನ್ 1 ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಒಟ್ಟು ನಾಲ್ಕು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಓಶನ್ ರಿಯಲ್ ಫೈಟರ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಟ್ರೋಫಿ ಜೊತೆಗೆ 25000 ರೂಗಳ ಬಹುಮಾನ ಪಡೆದುಕೊಂಡಿತು. ಈ ಸಂದರ್ಭ ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ಅಧ್ಯಕ್ಷ ಮೊಹಮ್ಮದ್ ಅಶ್ರಫ್, ಗೌರವಾಧ್ಯಕ್ಷ ಸದಾಶಿವ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಆಲ್ವಿನ್ ಪಿಂಟೋ ಮತ್ತು […]