ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ವತಿಯಿಂದ ಡಿಪಿಎಲ್ ಸೀಸನ್ 1: ಓಶನ್ ರಿಯಲ್ ಫೈಟರ್ಸ್ ತಂಡ ಚಾಂಪಿಯನ್

ಉಡುಪಿ: ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ವತಿಯಿಂದ ಭಾನುವಾರ ಮಣಿಪಾಲದ ಲೇಕ್ ವೀವ್ ಗ್ರೌಂಡ್ ನಲ್ಲಿ ಡಿಪಿಎಲ್ ಸೀಸನ್ 1 ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಒಟ್ಟು ನಾಲ್ಕು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಓಶನ್ ರಿಯಲ್ ಫೈಟರ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಟ್ರೋಫಿ ಜೊತೆಗೆ 25000 ರೂಗಳ ಬಹುಮಾನ ಪಡೆದುಕೊಂಡಿತು.

ಈ ಸಂದರ್ಭ ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ಅಧ್ಯಕ್ಷ ಮೊಹಮ್ಮದ್ ಅಶ್ರಫ್, ಗೌರವಾಧ್ಯಕ್ಷ ಸದಾಶಿವ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಆಲ್ವಿನ್ ಪಿಂಟೋ ಮತ್ತು ಶಶಿಕುಮಾರ್ ಶೆಟ್ಟಿ, ಸಂಘದ ಕಾರ್ಯದರ್ಶಿ ಉದಯ್ ಕಿರಣ್, ಸಂಘದ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.