ಏ.30: ಇಂದಿರಾ ಎಜುಕೇಶನ್ ಟ್ರಸ್ಟ್ ನ ಪದವಿ ಪ್ರದಾನ ಮತ್ತು ಡಿಪ್ಲೊಮಾ ಪದವಿ ಪ್ರದಾನ ಸಮಾರಂಭ

ಮಂಗಳೂರು: ಇಂದಿರಾ ಎಜುಕೇಶನ್ ಟ್ರಸ್ಟ್ ತನ್ನ ಪದವಿ ಪಡೆದ ವಿದ್ಯಾರ್ಥಿಗಳ ಪದವಿ ಪ್ರದಾನ ಮತ್ತು ಡಿಪ್ಲೋಮಾ ಪದವಿ ಪ್ರದಾನ ಸಮಾರಂಭವನ್ನು ಏಪ್ರಿಲ್ 30 ರಂದು ನಡೆಸಲಿದೆ. ಸಮಾರಂಭವು ಮಂಗಳೂರಿನ ಹಂಪನಕಟ್ಟೆಯ ಮಿಲಾಗ್ರಿಸ್ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಡಾ. ಜೆಸಿಂತಾ ಡಿಸೋಜಾ, ಡಿಎಂ, ಡಿಎ, ಡಿಎನ್‌ಎಂ, ಜಿಲ್ಲಾ ವೈದ್ಯಾಧಿಕಾರಿ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕಿ, ಮುಖ್ಯ ಅತಿಥಿಯಾಗಿ, ಶ್ರೀಮತಿ ಉಷಾ ಮುಕುಂದ್ ಭಂಡಾರಿ, ಸಹಾಯಕ ನರ್ಸಿಂಗ್ ನಿರ್ದೇಶಕಿ, ವೈದ್ಯಕೀಯ ಶಿಕ್ಷಣ, ಬೆಂಗಳೂರು ಮತ್ತು ಡಾ. ವೈಶಾಲಿ, […]

ಪಡುಬಿದ್ರೆ : ಹಾರ್ನ್ ಹಾಕಿ ಓವರ್ ಟೇಕ್ ಮಾಡಿದ್ದಕ್ಕೆ ಬಸ್ ಚಾಲಕನಿಗೆ ಚೂರಿ ಇರಿದ ಕಾರು ಚಾಲಕ

ಪಡುಬಿದ್ರೆ : ಹಾರ್ನ್ ಹಾಕಿ ಓವರ್ ಟೇಕ್ ಮಾಡಿದಕ್ಕೆ ಕಾರು ಚಾಲಕನೊಬ್ಬ ಬಸ್ಸನ್ನು ಅಡ್ಡಗಟ್ಟಿ ಬಸ್ ಚಾಲಕನಿಗೆ ಚಾಕುವಿನಿಂದ ಇರಿದ ಘಟನೆ ಪಡುಬಿದ್ರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಇರಿತಕ್ಕೊಳಗಾದ ಚಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಮಾಸ್ಟರ್ ಹೆಸರಿನ ಎಕ್ಸ್ ಪ್ರೆಸ್ ಬಸ್ ನ ಚಾಲಕ, ಪಡುಬಿದ್ರೆಯ ಎರ್ಮಾಳ್ ಬಳಿ ಮುಂದಿನಿಂದ ಹೋಗುತ್ತಿದ್ದ ಕಾರು ಚಾಲಕನಿಗೆ ಹಾರ್ನ್ ಹಾಕಿ ಓವರ್ ಟೇಕ್ ಮಾಡಲು ಯತ್ನಿಸಿದ್ದಾನೆ. ಬಸ್ಸಿನ ಕರ್ಕಶ ಹಾರ್ನ್‌ಗೆ ಆಕ್ರೋಶಗೊಂಡ ಕಾರು […]

ಉಪ್ಪುಂದ: ರಸ್ತೆಯ ಡಿವೈಡರ್‌ಗೆ ಢಿಕ್ಕಿ ಹೊಡೆದ ಬೊಲೇರೊ ವಾಹನ: ಓರ್ವ ಮೃತ್ಯು.

ಉಪ್ಪುಂದ: ಜಿಲ್ಲೆಯ ಬೈಂದೂರು ಸಮೀಪ ಬೊಲೇರೊ ವಾಹನ ರಸ್ತೆಯ ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸಾವಿಗೀಡಾಗಿದ್ದು, ಇತರ ಐವರು ಗಾಯಗೊಂಡಿದ್ದು ಓರ್ವ ಸಾವನ್ನಪ್ಪಿದ ಘಟನೆ ಕಿರಿಮಂಜೇಶ್ವರ ರಾ.ಹೆದ್ದಾರಿಯಲ್ಲಿ ನಡೆದಿದೆ . ರಾಮಣ್ಣ ಮೃತಪಟ್ಟ ವ್ಯಕ್ತಿ. ಬಾಗಲಕೋಟೆ ಜಿಲ್ಲೆಯ ಹನಮಂತ ಹಾಗೂ ಮನೆಯವರು ಉಡುಪಿಯಿಂದ ಬೊಲೇರೋ ವಾಹನದಲ್ಲಿ ಅವರ ಮಾವನ ಮಗನ ಮದುವೆಯ ಹಿನ್ನೆಲೆಯಲ್ಲಿ ಬಾದಾಮಿಗೆ ಹೋಗಿ ಬೆಳಗ್ಗಿನ ಜಾವ 4.30ರ ವೇಳೆ ಕಿರಿಮಂಜೇಶ್ವರ ತಲುಪಿದಾಗ ಅಪಘಾತ ನಡೆದಿದೆ. ಡಿವೈಡರ್‌ಗೆ ಢಿಕ್ಕಿಯಾಗಿ ವಾಹನ 50 ಅಡಿ ದೂರ […]

ಕರಂಬಳ್ಳಿ: ಮಲ್ಲಿಗೆ ಕೃಷಿ ಬಗ್ಗೆ ಪ್ರಾತ್ಯಕ್ಷಿಕೆ, ಸನ್ಮಾನ.

ಉಡುಪಿ: ಉಡುಪಿ ಜಿಲ್ಲಾ ಕೃಷಿಕ ಸಂಘ, ಕರಂಬಳ್ಳಿ ವಲಯ, ಕರಂಬಳ್ಳಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ ಜಂಟಿ ಆಶ್ರಯದಲ್ಲಿ ಮಲ್ಲಿಗೆ ಕೃಷಿ ಬಗ್ಗೆ ಪ್ರಾತ್ಯಾಕ್ಷಿಕೆ, ತೋಟಗಾರಿಕಾ ಹಣ್ಣು ಬೆಳೆಸುವ ಬಗ್ಗೆ ಮಾಹಿತಿ, ತಾರಸಿ ಕೃಷಿ ಬಗ್ಗೆ ಮಾಹಿತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ರಾಮಕೃಷ್ಣ ಶರ್ಮ, ಬಂಟಕಲ್ಲು. (ಮಲ್ಲಿಗೆ ಕೃಷಿ )ಕುದಿ ಶ್ರೀನಿವಾಸ ಭಟ್ (ಹಣ್ಣ್ಣಿನ ಬೆಳೆ ) ಹಾಗು ಕುಮಾರಸ್ವಾಮಿ ಉಡುಪ (ತಾರಸಿ ಕೃಷಿ) ಅವರು ವೈಜ್ಞಾನಿಕ ಪದ್ದತಿಯಲ್ಲಿ ಕೃಷಿ […]

ಕುಮಾರಿ ಶ್ರದ್ಧಾ ಕೆ. ಭಟ್ ಇವರಿಂದ ಏಕವ್ಯಕ್ತಿ ನೃತ್ಯ ಪ್ರದರ್ಶನ

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮದಲ್ಲಿ ಉಡುಪಿಯ ಕುಮಾರಿ ಶ್ರದ್ಧಾ ಕೆ. ಭಟ್ ಇವರು ನೃತ್ಯ ಪ್ರದರ್ಶನ ನೀಡಿದರು . ಸಾಂಪ್ರದಾಯಿಕ ಪುಷ್ಪಅಂಜಲಿ ನೃತ್ಯದೊಂದಿಗೆ ಹೆಜ್ಜೆ ಹಾಕಿದ ಶ್ರದ್ಧಾ ಅವರು ತಿಲ್ಲಾನದೊಂದಿಗೆ ಕೊನೆಗೊಳಿಸಿದರು. ನಡುವೆ ಪ್ರದರ್ಶಿಸಿದ “ಆಡಿಸಿದಳೇ ಯಶೋಧ -ಜಗದೋದ್ಧಾರನ ” ಮತ್ತು “ದುರ್ಗೆ ” ನೃತ್ಯವು ಪ್ರೇಕ್ಷಕರನ್ನು ಕಣ್ಮನಗೊಳಿಸಿತ್ತು. ಕೀಳಂಜೆ ಶ್ರೀ ಕೃಷ್ಣರಾಜ […]